ಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಮನವಿ

ಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಮನವಿ Appeal to make contract employees permanent

ವಿಜಯಪುರ 06: ಮಹಾನಗರ ಪಾಲಿಕೆ, ವಾಹನ ಚಾಲಕರ ಮತ್ತು ನಿರ್ವಾಹಕರ ಕ್ಷೇಮಾಭಿವೃದ್ಧಿ ಸಂಘ (ರಿ) ವಿಜಯಪುರ ವತಿಯಿಂದ ಚಳಿಗಾಲ ಅಧಿವೇಶನದಲ್ಲಿ ಮಹಾನಗರ ಪಾಲಿಕೆ ವಿಜಯಪುರದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವಾಹನ ಚಾಲಕರು ಹಾಗೂ ನಿರ್ವಾಹಕರು ಲೋಡರ್ಸ್‌ ಕ್ಲೀನರ್‌ಗಳನ್ನು ಖಾಯಂಗೊಳಿಸಬೇಕೆಂದು ಅಧಿವೇಶನದಲ್ಲಿ ಚರ್ಚಿಸಬೇಕೆಂದು ಒತ್ತಾಯಿಸಿ ದಿ. 06ರಂದು ಮಧ್ಯಾಹ್ನ 12 ಘಂಟೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ಸಚಿವರು ಕರ್ನಾಟಕ ಸರ್ಕಾರ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚವರ ಮನೆಗೆ ತೆರಳಿ ಮನವಿ ಸಲ್ಲಿಸಿದರು.  

ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀಮಂತ ಪವಾರ ಮಾತನಾಡಿ, ಸುಮಾರು ವರ್ಷಗಳಿಂದ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವಾಹನ ಚಾಲಕರು ಹಾಗೂ ನಿರ್ವಾಹಕರು ಲೋಡರ್ಸ್‌ ಕ್ಲೀನರಗಳು ಸುಮಾರು 350 ರಿಂದ 400 ಜನ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ನೇರಪಾವತಿಯಾಗಲಿ ಖಾಯಂ ಯಾತೇಯಾಗಲಿ ಮಾಡುವುದಾಗಲಿ ಮಾಡಿರುವುದಿಲ್ಲ. ಕಾರಣ ನಾವು ಸುಮಾರು ವರ್ಷಗಳಿಂದ ಮಹಾಣಗರ ಪಾಲಿಕೆ ವಿಜಯಪುರ ನಗರವನ್ನು ಸ್ವಚ್ಛತೆವಿಟ್ಟು ಆರೋಗ್ಯಕರವಾದ ವಾತಾವರಣ ಸೃಷ್ಠಿ ಮಾಡಿರುತ್ತೇವೆ. ಈ ಉದ್ದೇಶದಿಂದ ಎಲ್ಲ ರೀತಿ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತೇವೆ ತಕ್ಷಣ ಮಹಾನಗರ ಪಾಲಿಕೆ ಸಿಬ್ಬಂಧಿಗಳಿಗೆ ಖಾಯಂಗೊಳಿಸಬೇಕೆಂದು ಒತ್ತಾಯಿಸುತ್ತೇವೆ.  ಈ ಸಂದರ್ಭದಲ್ಲಿ ಬಸು ಚಲವಾದಿ, ಮೇತ್ರಿ, ರಮೇಶ ರಾಠೋಡ, ಸಚೀನ ಚಲವಾದಿ, ಮುಲ್ಲಾ, ಸಂಜು ಕಾಂಬಳೆ, ಎಲ್ಲಪ್ಪ ಸೇರಿದಂತೆ ಇನ್ನಿತರರು ಇದ್ದರು.