ಲೋಕದರ್ಶನ ವರದಿ
ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ 21: ಕಂಪ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಮೆಟ್ರಿ ಗ್ರಾಮದ ಹತ್ತಿರದ ಕಂಪ್ಲಿ-ಬಳ್ಳಾರಿ ರಸ್ತೆಯ ಸುಬ್ಬಮ್ಮವ್ವ ಮಠದ ಬಳಿ ಗದ್ದೆಗಳ ಹತ್ತಿರ ಮಾ.21 ರಂದು ಯಾವುದೋ ವಾಹನವು ಹಿಂಬದಿಯಿಂದ ಡಿಕ್ಕಿ ಹೊಡೆದು, ಅಪಘಾತಪಡಿಸಿದ ಪರಿಣಾಮ ಸುಮಾರು 35-40 ವರ್ಷದ ಅನಾಮಧೇಯ ವ್ಯಕ್ತಿಯು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತನ ವಾರಸುದಾರರು ಬಗ್ಗೆ ತಿಳಿದಿರುವುದಿಲ್ಲ. ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಕಂಪ್ಲಿ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.