ಕೆಪಿಎಸ್ ಶಾಲೆಗೆ ಬೆಳ್ಳಿಗಟ್ಟಿ ಶಾಲೆಯನ್ನು ವೀಲೀನಗೊಳಿಸದಂತೆ ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಿಡಿಪಿಐ ಅಧಿಕಾರಿಗಳಿಗೆ ಮನವಿ
Appeal to field education officers and DDPI officials, demanding that Belligatti School not be merge
ಲೋಕದರ್ಶನ ವರದಿ
ಧಾರವಾಡ 25 : ಬೆಳ್ಳಿಗಟ್ಟಿ ಗ್ರಾಮದ ಶಾಲೆಯನ್ನುಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ವೀಲೀನಗೊಳಿಸಿದಂತೆ ಆಗ್ರಹಿಸಿ ಎಐಡಿಎಸ್ಒ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ಮಾನ್ಯಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಿಡಿಪಿಐ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕರಾಜ್ಯ ಸರ್ಕಾರವು ಬಜೆಟ್ ನಲ್ಲಿ ಘೋಷಿಸಿರುವಂತೆ ಜೂನ್ ನಿಂದಲೇ ಹೊಸ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಈ ಶಾಲೆಗಳ 3ರಿಂದ 5 ಕಿ. ಮೀ ವ್ಯಾಪ್ತಿಯ ಶಾಲೆಗಳನ್ನು ವೀಲೀನಗೊಳಿಸಲಾಗುವುದೆಂದು 15 ಅಕ್ಟೋಬರ್ 2025ರ ಆದೇಶವು ತಿಳಿಸುತ್ತದೆ. ನಮ್ಮೂರ ಶಾಲೆ ಉಳಿಯಬೇಕು ಮತ್ತುಕೆಪಿಎಸ್ಯೋಜನೆರದ್ದಾಗಬೇಕೆಂದು ಆಗ್ರಹಿಸಿ ಎಐಡಿಎಸ್ಒ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಿಕೊಂಡು ಕಳೆದ 5 ತಿಂಗಳಿಂದ ಗ್ರಾಮಸ್ಥರು ಹಾಗೂ ಪೋಷಕರು ಹೋರಾಟ ನಡೆಸಿದ್ದೇವೆ.
ಗ್ರಾಮ ಮಟ್ಟದಿಂದ ಆರಂಭಿಸಿ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ವರೆಗೂ ಪ್ರತಿಭಟನೆ ಹಾಗೂ ಸಮಾವೇಶಗಳನ್ನು ನಡೆಸಲಾಗಿದೆ. ನಾಡಿನ ಹೆಸರಾಂತ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು ನಮ್ಮೊಂದಿಗೆ ಧ್ವನಿಗೂಡಿಸಿದ್ದಾರೆ. ನಮ್ಮೂರ ಶಾಲೆ ನಮ್ಮೂರ ಮಕ್ಕಳ ಜ್ಞಾನದ ಮಂದಿರವಾಗಿದೆ. ನಮ್ಮೂರ ಶಾಲೆಯನ್ನು ಮುಚ್ಚಲು/ವೀಲೀನಗೊಳಿಸಲು ನಮ್ಮಒಪ್ಪಿಗೆಯಿಲ್ಲ.
ಅಷ್ಟೇಅಲ್ಲದೇ ಸರ್ಕಾರವು 1ನೇ ತರಗತಿಯಿಂದಲೇಕನ್ನಡ ಮಾಧ್ಯಮದೊಂದಿಗೆಇಂಗ್ಲಿಷ್ ಮಾಧ್ಯಮಕೂಡಆರಂಭಿಸುತ್ತಿದೆ. ಕೆಲವು ಕಡೆ ತಿಳಿದು ಬಂದಿರುವ ಮಾಹಿತಿಯಂತೆ, ದ್ವಿಭಾಷಾ ಮಾಧ್ಯಮದ ಹೆಸರಲ್ಲಿ ಕೇವಲ ಇಂಗ್ಲಿಷ್ ಮಾಧ್ಯಮ ಕಲಿಸಲು ತಯಾರಿ ನಡೆಸಲಾಗುತ್ತಿದೆ. ಯಾವುದೇಕಾರಣಕ್ಕೂಕನ್ನಡ ಮಾಧ್ಯಮತೆಗೆದುಹಾಕುವುದನ್ನುಒಪ್ಪಲು ಸಾಧ್ಯವಿಲ್ಲ.
ಆದ್ದರಿಂದ ನಮ್ಮೂರ ಶಾಲೆಗೆ ಸಮರ್ಕ ಸೌಲಭ್ಯ ಹಾಗೂ ಶಿಕ್ಷಕರನ್ನು ನೀಡಿಅಭಿವೃದ್ಧಿ ಪಡಿಸಬೇಕೆಂಬುದು ನಮ್ಮೆಲ್ಲರ ಒಕ್ಕೊರಲ ಆಗ್ರಹವಾಗಿದೆ. ಯಾವುದೇ ಕಾರಣಕ್ಕೂ ನಮ್ಮೂರ ಶಾಲೆ ಮುಚ್ಚಬಾರದೆಂದು ಮನವಿ ಪತ್ರ ನೀಡಿ ಆಗ್ರಹಿಸಲಾಯಿತು.
*ಬೇಡಿಕೆಗಳು:*
* ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಿಂಪಡೆಯಿರಿ.
* ನಮ್ಮೂರ ಶಾಲೆ ವೀಲೀನ ಕೈಬಿಡಿ.
* ನಮ್ಮೂರ ಶಾಲೆಗೆ ಸಮರ್ಕ ಸೌಲಭ್ಯ ನೀಡಿ ಬಲ ಪಡಿಸಿ.
* ಕನ್ನಡ ಮಾಧ್ಯಮವನ್ನು ಉಳಿಸಿ. ಇಂಗ್ಲಿಷ್ ಮಾಧ್ಯಮಕ್ಕಾಗಿ ಪ್ರತ್ಯೇಕ ಶಿಕ್ಷಕರ ನೇಮಕ ಮಾಡಿಕೊಳ್ಳಿ.
ಈ ಸಂದರ್ಭದಲ್ಲಿ ಎಐಡಿಎಸ್ಒ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ವಿನಯಚಂದ್ರ, ಸಾರ್ವಜನಿಕ ಶಿಕ್ಷಣ ಉಳಿಸಿ ಗ್ರಾಮ ಸಮಿತಿಅಧ್ಯಕ್ಷರಾದ ಶಂಕ್ರ್ಪಗುರಕ್ಕನವರ, ಜಿಲ್ಲಾ ಸಮಿಉಪಾಧ್ಯಕ್ಷರಾದ ಭವಾನಿ ಶಂಕರ್, ಗ್ರಾಮ ಸಮಿತಿ ಸದಸ್ಯರಾದ ಬಸವರಾಜ್ ಕುರವಿನಕೊಪ್ಪ, ಬಸವರಾಜ್ ಹಡಪದ್, ಮಲ್ಲಯ್ಯ ಹಿರೇಮಠ್, ಕಲ್ಲಪ್ಪ ಬೆಟಗೇರಿ, ಹಿರೇಮಲ್ಲೇಶ್ ಜಿ,ನಿಂಗಪ್ಪ ಜಿ ಹಾಗೂ ಪೋಷಕರುಇದ್ದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 