ಬೆಂಗಳೂರು, ಸೆ 18 ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಉಜ್ಜಯಿನಿ ಜಗದ್ಗುರುಗಳು ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಆನಂದ್ ಸಿಂಗ್, ವಿಜಯನಗರವನ್ನು ಜಿಲ್ಲೆ ಮಾಡಬೇಕು ಎನ್ನುವುದು ಅಲ್ಲಿನ ಜನಪ್ರತಿನಿಧಿಗಳ ಹಾಗೂ ಅಲ್ಲಿನ ಜನರ ಬೇಡಿಕೆಯಾಗಿದೆ. ಹಾಗಾಗಿ ಇಂದು ನಡೆಯುವ ಕ್ಯಾಬಿನೆಟ್ನಲ್ಲಿ ಈ ವಿಷಯವನ್ನು ಮಂಡಿಸಿ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದರು.
ಅಲ್ಲಂ ವಿರಭದ್ರಪ್ಪ ಮಾತನಾಡಿ, ವಿಜಯನಗರ ಸಾಮ್ರಾಜ್ಯ ಒಂದು ವಿಶ್ವದಲ್ಲಿ ಹೆಸರು ವಾಸಿಯಾಗಿರುವ ನಗರವಾಗಿದೆ. ಯುನೆಸ್ಕೋ ಇದನ್ನು ಪರಿಗಣಿಸಿದೆ. ಹಾಗಾಗಿ ಇದನ್ನು ಜಿಲ್ಲೆಯನ್ನಾಗಿ ಮಾಡಿದರೆ ಆಡಳಿತಾತ್ಮಕವಾಗಿ ತುಂಬ ಅನುಕೂಲವಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಉಜ್ಜಯಿನಿ ಸದ್ಗುರುಗಳು ಮಾತನಾಡಿ, ವಿಜಯನಗರದ ಗತ ವೈಭವ ಮರು ಕಳಿಸಬೇಕಾದರೆ ಇದನ್ನು ಜಿಲ್ಲೆಯನ್ನಾಗಿ ಮಾಡಬೇಕು. ಇವತ್ತು ಮೈಸೂರು ದಸರೆಗೆ ಪ್ರೇರಣೆ ಸಿಕ್ಕಿರುವುದೇ ವಿಜಯನಗರ ಸಾಮ್ರಾಜ್ಯ. ಹಾಗಾಗಿ, ಈ ನೆಲಕ್ಕೆ ತನ್ನದೇ ಆದ ವಿಶೇಷ ಗುಣಗಳು ಇವೆ. ಹಾಗಾಗಿ ಇದನ್ನು ಜಿಲ್ಲೆಯ ನ್ನಾಗಿ ಮಾಡಬೇಕು ಅಂತ ಮನವಿ ಮಾಡಿದರು.