ಬೆಳೆ ಸಮೀಕ್ಷೆದಾರರಿಂದ ಸುನೀಲ ಗೌಡ ಪಾಟೀಲಗೆ ಮನವಿ

ಬೆಳೆ ಸಮೀಕ್ಷೆದಾರರಿಂದ ಸುನೀಲ ಗೌಡ ಪಾಟೀಲಗೆ ಮನವಿ  Appeal to Sunil Gowda Patil from crop surveyors

ವಿಜಯಪುರ 25: ಬಬಲೇಶ್ವರ ತಾಲೂಕಿನ, ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ತಾಲೂಕು ಉಸ್ತುವಾರಿ ಸದಸ್ಯರಾದ ಸುರೇಶ್ ಹಜೇರಿ ಇವರ ನೇತೃತ್ವದಲ್ಲಿ ತಾಲೂಕಿನ ಹಲವಾರು ಪಿ ಆರ್ ಗಳೊಂದಿಗೆ ವಿಧಾನಪರಿಷತ ಸದಸ್ಯರಾದ ಸುನೀಲಗೌಡ ಬಿ ಪಾಟೀಲ್   ಇವರಿಗೆ ಭೇಟಿ ನೀಡಿ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಮನವಿ ಮಾಡಿದರು. 

ಕರ್ನಾಟಕ ರಾಜ್ಯದ ಎಲ್ಲಾ ಪಿ ಆರ್ ಗಳನ್ನು ದಿನಗೂಲಿ ಕಾರ್ಮಿಕ ರನ್ನಾಗಿ ನೇಮಕಾತಿ ಮಾಡುವಂತೆ ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನಲ್ಲಿ ಚರ್ಚೆ ಆಗಬೇಕು ಎಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಲಾಯಿತು.  

ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಭೀಮಪ್ಪ ಲಕ್ಷ್ಮಣ ತಳವಾರ ಮಾತನಾಡಿ  ಪಿ ಆರ್ ಗಳನ್ನು ಹಂಗಾಮು ಗಳಿಗೆ ಅನುಗುಣವಾಗಿ ಒಂದು ವರ್ಷದಲ್ಲಿ  3 ಬಾರಿ ಕೆಲಸಕ್ಕೆ ಸೀಮಿತವಾಗಬಾರದು, ವರ್ಷವೀಡೀ ಕೆಲಸ ನೀಡಬೇಕೆಂದು ಘೋಷಿಸಿದರು.  ಮನವಿ ಪತ್ರವನ್ನು ಸ್ವೀಕರಿಸಿ ವಿಷಯವನ್ನೆಲ್ಲ ಓದಿದಮರುಕ್ಷಣವೇ ಕಾರ್ಯ ಪ್ರವ್ರುತ್ತರಾಗಿ, (01) ವರ್ಷದ 12 ತಿಂಗಳೂ ಕಾರ್ಯನಿರ್ವಾಹಿಸಲು ಕನಿಷ್ಠ ವೇತನ ನೀತಿ ಅಡಿಯಲ್ಲಿ ಎಲ್ಲಾ ಪಿ ಆರ್ ಗಳಿಗೆ ದಿನಗೂಲಿ ಕಾರ್ಮಿಕರನ್ನಾಗಿ ನೇಮಕ ಮಾಡಿಕೊಂಡು ಕಾರ್ಯ ನಿರ್ವಹಿಸಲು ಅನುಕೂಲ ಮಾಡಿಕೊಡುವಂತೆ, (02) ಬೆಳೆ ಸಮೀಕ್ಷೆದಾರರಿಗೆ 10 ಲಕ್ಷ ರೂಪಾಯಿಗಳ ಜೀವವಿಮೆ ಮತ್ತು ಯಾವುದೇ ಪ್ರಾಣಿ ಜೀವಜಂತುಗಳಿಂದ ದಾಳಿಯಾದರೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡುವಂತೆ,( 03) ಬೆಳೆ ಸಮೀಕ್ಷೆದಾರರಿಗೆ ಕಾರ್ಯ ನಿರ್ವಹಿಸಲು ಮೂಲಭೂತ ಸೌಕರ್ಯಗಳನ್ನು ನೀಡುವಂತೆ  ಪತ್ರ ಬರೆದು ಸಹಕರಿಸಿದರು.  

ಈ ಮೇಲಿನ ವಿಷಯಗಳ ಕುರಿತು ಇದೇ ಚಳಿಗಾಲದ ಅಧಿವೇಶನ ಮುಖಾಂತರ ಸರ್ಕಾರದ ಗಮನಕ್ಕೆ ತರುವಂತೆ ಸಭಾಪತಿಗಳಾದ ಬಸವರಾಜ ಹೊರಟ್ಟಿ,  ಕರ್ನಾಟಕ ವಿಧಾನ ಪರಿಷತ್ತು ಬೆಂಗಳೂರು ಇವರಿಗೆ ಬರೆಯಿಸಿ ಸಹಿ ಕೂಡಾ ಮಾಡಿ ಕೊಟ್ಟರು.  

ಈ ವೇಳೆ ಜಿಲ್ಲಾ ಅಧ್ಯಕ್ಷ ನರಸಪ್ಪ ನಾವಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಚಲವಾದಿ ರಾಜ್ಯ ಘಟಕದ ಸಹಕಾರ್ಯದರ್ಶಿ ಪಿಂಟು ಚವ್ಹಾಣ, ಬೆಳೆ ಸಮೀಕ್ಷೆದಾರಾದ ಅರುಣ್ ತಳವಾರ, ಚಂದನ್ ಕೋಳಿ, ಮಹಾದೇವ ಅವಟಿ,ಅಮಸಿದ್ದ ಕೆಸರಗೊಪ್ಪ, ಯಲ್ಲಪ್ಪ ಸಿಂಗಿ, ರೋಹನ್ ಪಾರಶೆಟ್ಟಿ,ಬೀರ​‍್ಪ ಟಕ್ಕಳಕಿ, ಮುನಾಫ್ ಅತ್ತಾರ ಮತ್ತಿತರರು ಉಪಸ್ಥಿತರಿದ್ದರು .