ಬೆಳೆ ಸಮೀಕ್ಷೆದಾರರ ವಿವಿಧ ಬೇಡಿಕೆಗಾಗಿ ಕೃಷಿ ಸಚಿವ ಚೆಲುರಾಯಸ್ವಾಮಿ ಅವರಿಗೆ ಮನವಿ

ಬೆಳೆ ಸಮೀಕ್ಷೆದಾರರ ವಿವಿಧ ಬೇಡಿಕೆಗಾಗಿ ಕೃಷಿ ಸಚಿವ ಚೆಲುರಾಯಸ್ವಾಮಿ ಅವರಿಗೆ ಮನವಿ Appeal to Agriculture Minister Chelurayaswamy for various demands of crop surveyors

ಲೋಕದರ್ಶನ ವರದಿ 

       ವಿಜಯಪುರ 18 : ಇತ್ತಿಚೆಗೆ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ  ಅವರಿಗೆ ರಾಜ್ಯದ ವಿವಿಧ ಜಿಲ್ಲೆಯ ಬೆಳೆ ಸಮೀಕ್ಷೆದಾರರು ಬೇಟಿ ಆಗಿ ಮಹಾಸ್ವಾಮಿಗಳೇ ನಾವೆಲ್ಲರೂ ಬೆಳೆ ಸಮೀಕ್ಷೆದಾರರು ಸುಮಾರು 8-10 ವರ್ಷಗಳ ಕಾಲದಿಂದ ಬೆಳೆ ಸಮೀಕ್ಷೆದಾರರಾಗಿ ಸರ್ಕಾರದ ಅಧೀನದಲ್ಲಿ  ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಅಂತ  ಹಂಗಾಮುವಾರು ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇವೆ. ಎಂದು ತಮ್ಮ ಅಳಲನ್ನು ತೊಡಿಕೊಂಡು ತಮಗೆ ನ್ಯಾಯಯುತವಾಗಿ ವರ್ಷವಿಡಿ ಕೆಲಸ ಕೊಡಬೇಕು ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘಟನೆಯ ವಿಜಯಪೂರ ಜಿಲ್ಲಾ ಘಟಕದ ವತಿಯಿಂದ ಮನವಿ ಪತ್ರ ನೀಡಿದರು. 

  ನಾವೆಲ್ಲರೂ ವಿದ್ಯಾವಂತ ಯುವಕರು ನಮಗೆ ಒಂದು ವರ್ಷದಲ್ಲಿ ಹಂಗಾಮುವಾರು ಕೇವಲ ಎರಡು ತಿಂಗಳುಗಳಿಗೆ ಮಾತ್ರನೇ ಸೀಮಿತಗೊಳಿಸದೆ ಮತ್ತು ನಮ್ಮನ್ನು ಟಿಶ್ಯು ಪೇಪರ್ ತರಹ ಉಪಯೋಗಿಸಿಕೊಳ್ಳದೆ, ಕನಿಷ್ಠ ವೇತನದ ನೀತಿ ಅಡಿಯಲ್ಲಿ ದಿನಗೂಲಿ ಕಾರ್ಮಿಕರನ್ನಾಗಿ ನೇಮಕ ಮಾಡಿಕೊಂಡು ವರ್ಷದ 12 ತಿಂಗಳುಗಳ ಕಾಲ ಕೆಲಸವನ್ನು ನೀಡುವಂತೆ ಕರ್ನಾಟಕ ರಾಜ್ಯದ 23,720 ಬೆಳೆ ಸಮೀಕ್ಷೆದಾರರ ಪ್ರತಿನಿಧಿಯಾಗಿ  ಭೀಮಪ್ಪ ಲಕ್ಷ್ಮಣ ತಳವಾರ ಅವರು ಕೈ ಮುಗಿದು ಕೇಳಿಕೊಂಡರು. 

ಮನವಿ ಪತ್ರ ಸ್ವೀಕರಿಸಿದ ಸಚಿವರು ನನ್ನ 25 ವರ್ಷದ ಆತ್ಮೀಯ ಸ್ನೇಹಿತನಾದ  ಮಲ್ಲಿಕಾರ್ಜುನ ಎಸ್ ಲೋಣಿ ಅವರ ನೇತೃತ್ವದಲ್ಲಿ ಬಂದು ಈ ಬೇಡಿಕೆ ಪತ್ರ ಕೊಟ್ಟಿದ್ದೀರಿ, ನೀವೆಲ್ಲರೂ ರೈತರ ಪರ ಮತ್ತು ಸರ್ಕಾರದ ಪರವಾಗಿ ಸೇವೆ ಮಾಡುವವರು ನೀವೆಲ್ಲರೂ ರೈತರ ಮಕ್ಕಳು, ನಿಮ್ಮ ಬೇಡಿಕೆ ಈಡೇರಿಕೆಗಾಗಿ ಇನ್ನೂ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಯಿತು ಎಂದರು ಹಾಗೆ ನಿಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ನಾನೂ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೆನೆ ಎಂದು ಮಾತು ಕೊಟ್ಟರು. 

ಈ ಒಂದು ನಿಯೋಗದ ಮುಂದಾಳುಗಳಾದ ನರಸಪ್ಪ ನಾವಿ, ಸುರೇಶ್ ಸಿಂಗ್ ಹಜೇರಿ, ಸದಾಶಿವ ಚಲವಾದಿ, ಸೋಮಶೇಖರ ನಾಯ್ಕೋಡಿ, ಮಲ್ಲಿಕಾರ್ಜುನ ಪೂಜೇರಿ, ರಾಜಕುಮಾರ್ ಪ್ರಬುದ್ಧಕರ, ಬಸವರಾಜ ದಾಸರ, ಅರುಣಕುಮಾರ್ ತಳವಾರ, ಸಾಗರ್ ಕಿರಣಗಿ, ಹಿರಿಯಣ್ಣ ಜಂಬಗಿ, ರೋಹನ್ ಪಾರಶೆಟ್ಟಿ, ಸುರೇಶ್ ಜಕಾತಿ,ಪೀರಸಾಬ ಕೋಜಗೀರ, ಶಿವುಕುಮಾರ ಪೂಜೇರಿ ಇನ್ನು ಹಲವಾರು ಜಿಲ್ಲೆಯವರು ಸೇರಿಬೇಡಿಕೆ ಈಡೇರಿಕೆಗಾಗಿ ಮನವಿಪತ್ರ ಕೊಟ್ಟು ಮಾತನಾಡಿ ಕೂಡಲೇ ತಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.