ಬೆಳಗಾವಿ ಕೈಗಾರಿಕಾ ಅಭಿವೃದ್ಧಿಗೆ ಬಜೆಟ್ನಲ್ಲಿ ವಿಶೇಷ ಪ್ಯಾಕೇಜ್ ಬೇಡಿಕೆ ಮುಖ್ಯಮಂತ್ರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಿಂದ ಮನವಿ
Appeal from the Chamber of Commerce and Industry to the Chief Minister demanding a special package i
ಲೋಕದರ್ಶನ ವರದಿ
ಬೆಳಗಾವಿ 18: ಬೆಳಗಾವಿ ಪ್ರದೇಶದ ಕೈಗಾರಿಕೆ, ಎಂಎಸ್‌ಎಂಇಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಮುಂಬರುವ ರಾಜ್ಯ ಬಜೆಟ್ನಲ್ಲಿ ವಿಶೇಷ ನೆರವು ನೀಡುವಂತೆ ಬೆಳಗಾವಿ ವಾಣಿಜ್ಯೋದ್ಯಮ ಸಂಘದ (ಃಜಟರಚಿಣಟ ಅಚಿಟಛಜಡಿ ಠ ಅಠಟಜಡಿಛಿಜ ಚಿಟಿಜ ಋಜಣಡಿ) ವತಿಯಿಂದ ಮುಖ್ಯಮಂತ್ರಿ ಸಿದ್ಧರಾಮದ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಬಜೆಟ್ ಪೂರ್ವ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಕರೆದಿದ್ದ ಸಭೆಯ ವೇಳೆ ಬೇಡಿಕೆಗಳ ಪಟ್ಟಿ ಸಲ್ಲಿಸಲಾಗಿದೆ. ಬೆಳಗಾವಿ ಉತ್ತರ ಕರ್ನಾಟಕದ ಪ್ರಮುಖ ಕೈಗಾರಿಕಾ ಕೇಂದ್ರವಾಗಿದ್ದು, ಎಂಜಿನಿಯರಿಂಗ್, ಫೌಂಡ್ರಿ, ಹೈಡ್ರಾಲಿಕ್ಸ್, ಪ್ರಿಸಿಷನ್ ಘಟಕಗಳು ಹಾಗೂ ಏರೋಸ್ಪೇಸ್ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದು ಉಲ್ಲೇಖಿಸಲಾಗಿದೆ. ಸೂಕ್ತ ಬಜೆಟ್ ಬೆಂಬಲ ನೀಡಿದರೆ ರಫ್ತು ಹೆಚ್ಚಳ, ಉದ್ಯೋಗ ಸೃಷ್ಟಿ ಹಾಗೂ ಹೂಡಿಕೆ ವೃದ್ಧಿಗೆ ನೆರವಾಗಲಿದೆ ಎಂದು ತಿಳಿಸಲಾಗಿದೆ.ಮುಖ್ಯ ಬೇಡಿಕೆಗಳು:ಬಾಕಿ ಉಳಿದಿರುವ 130 ಕೋಟಿ ಕೈಗಾರಿಕಾ ಸಹಾಯಧನವನ್ನು ತಕ್ಷಣ ಬಿಡುಗಡೆ ಮಾಡಬೇಕು.ಬೆಳಗಾವಿ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ 500 ಕೋಟಿ ಅನುದಾನ ಮೀಸಲಿಡಬೇಕು. ವಿದ್ಯುತ್ ಬಿಲ್ ಅಥವಾ ರಾಜ್ಯ ಜಿಎಸ್ಟಿ ವಿರುದ್ಧ ಸಹಾಯಧನ ಹೊಂದಾಣಿಕೆ ವ್ಯವಸ್ಥೆ ರೈಲು ಸಂಪರ್ಕ ಬಲಪಡಿಸಬೇಕು ಹಾಗೂ ವಿಮಾನ ಸಂಪರ್ಕ ವಿಸ್ತರಿಸಬೇಕು. ಕೈಗಾರಿಕಾ ವಲಯಗಳ ರಸ್ತೆ, ನೀರು ಹಾಗೂ ವಿದ್ಯುತ್ ವ್ಯವಸ್ಥೆ ಸುಧಾರಣೆ ಮಾಡಬೇಕು.ಪ್ರಿಸಿಷನ್ ಎಂಜಿನಿಯರಿಂಗ್ ಮತ್ತು ಏರೋಸ್ಪೇಸ್ ಘಟಕಗಳಿಗೆ ಹೊಸ ಕೈಗಾರಿಕಾ ಕ್ಲಸ್ಟರ್ ಸ್ಥಾಪನೆ ಮಾಡಬೇಕು.ಪರೀಕ್ಷೆ, ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಗೆ ಸಾಮಾನ್ಯ ಸೌಲಭ್ಯ ಕೇಂದ್ರ ನಿರ್ಮಾಣ ಮಾಡಬೇಕು.ಕೈಗಾರಿಕಾ ಪ್ರದೇಶಗಳ ನವೀಕರಣಕ್ಕೆ ವಿಶೇಷ ನಿಧಿ ಸ್ಥಾಪಿಸಬೇಕು. ಬೆಂಗಳೂರು ಇಂಟರ್ ನ್ಯಾಶನಲ್ ಎಕ್ಸಿಬೀಷನ್ ಸೆಂಟರ್ (ಋಣಜಡಿಟಿಚಿಣಠಚಿಟ ಇಥಛಣಠ ಅಜಟಿಣಡಿಜ) ಮಾದರಿಯ ವಿಶ್ವಮಟ್ಟದ ಪ್ರದರ್ಶನ ಮತ್ತು ಸಮಾವೇಶ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪನೆ ಮಾಡಬೇಕು.ಲಾಜಿಸ್ಟಿಕ್ಸ್ ಪಾರ್ಕ್ಗಳು, ಗೋದಾಮುಗಳು ಹಾಗೂ ಬೈಪಾಸ್ ಯೋಜನೆಗಳಿಗೆ ಹೆಚ್ಚುವರಿ ಅನುದಾನ ನೀಡಬೇಕು. ಕೈಗಾರಿಕಾ ಸಂಘಟನೆಗಳ ಜೊತೆಗೆ ಉನ್ನತ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ ಮಾಡಬೇಕು. ಜಿಲ್ಲಾಮಟ್ಟದ ಸಿಂಗಲ್ ವಿಂಡೋ ಅನುಮೋದನಾ ವ್ಯವಸ್ಥೆ ಬಲಪಡಿಸುವುದು. ಪ್ರದೇಶದ ಭೌಗೋಳಿಕ ಸ್ಥಾನ, ಕೈಗಾರಿಕಾ ಪರಿಸರ ಹಾಗೂ ಉದ್ಯಮಶೀಲತೆ ಆಧಾರದ ಮೇಲೆ ಬೆಳಗಾವಿ ರಾಜ್ಯದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಎಂಜಿನ್ ಆಗುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಬಜೆಟ್ನಲ್ಲಿ ಆರ್ಥಿಕ ಹಾಗೂ ಮೂಲಸೌಕರ್ಯ ಬೆಂಬಲ ಒದಗಿಸುವಂತೆ ಮಂಡಳಿ ಮನವಿ ಮಾಡಿದೆ. ಅಧ್ಯಕ್ಷ ಪ್ರಭಾಕರ್ ನಾಗರಮುನೋಳಿ ಮತ್ತು ಗೌರವ ಕಾರ್ಯದರ್ಶಿ ಸತೀಶ್ ಕುಲಕರ್ಣಿ ಸಹಿ ಮಾಡಿದ್ದಾರೆ. ಸಭೆಯಲ್ಲಿ ಪ್ರಭಾಕರ ನಾಗರಮುನೋಳಿ ಮತ್ತು ಉದಯ ಜೋಶಿ ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 