ನಾಳೆ ಖಾಸಗಿ ಶಾಲೆಯ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮನವಿ

ಲೋಕದರ್ಶನ ವರದಿ

ಕೊಪ್ಪಳ 16: ಕಲ್ಯಾಣ ಕರ್ನಾಟಕದ 6ಜಿಲ್ಲೆಗಳಲ್ಲಿ ಶೈಕ್ಷಣಿಕ ಹಾಗೂ ಅಭಿವೃದಿಗೆ ಹೆಚ್ಚಿನ ಒತ್ತು ಕೊಡಲು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತವಾದ ಸೌಲಭ್ಯಗಳನ್ನು ಒದಗಿಸಲು 371(ಜೆ) ಅಡಿಯಲ್ಲಿ ಪರಿಹಾರವನ್ನು ಒದಗಿಸಿಕೊಡಲು ಕಲ್ಯಾಣ ಕರ್ನಾಟಕದ ಪ್ರದೇಶಾಭಿವೃದ್ಧಿ ಮಂಡಳಿ ಕಲಬುರ್ಗಿ  ಇವರಿಗೆ ದಿ. 18ರಂದು ಮನವಿ ಸಲ್ಲಿಸಲಾಗುವುದು ಎಂದು ಕೊಪ್ಪಳ ಅನುದಾನರಹಿತ ಶಾಲಾ ಒಕ್ಕೂಟದ ಅಧ್ಯಕ್ಷ ಶಾಹೀದ್ ಹುಸೇನ್ ತಹಸೀಲ್ದಾರ್ ತಿಳಿಸಿದರು. 

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, 1995 ರಿಂದ ಪ್ರಾರಂಭವಾದ ಎಲ್ಲಾ ಖಾಸಗಿ ಶಾಲಾ-ಕಾಲೇಖುಗಳ ಶಿಕ್ಷಕರಿಗೆ ಮತ್ತು ಉಪಾನ್ಯಾಸಕರಿಗೆ ವೇತನಾನುಧಾನ ನೀಡಲು ಕೋರಿದ್ದಾರೆ. 1 ರಿಂದ 5 ನೇ ತರಗತಿ ವರೆಗೆ ಅನುಮತಿ ಪಡೆದ ಖಾಸಗಿ ಶಾಲೆಗಳಿಗೆ ಉಚ್ಚ ನ್ಯಾಯಲಯದ ಆದೇಶದಂತೆ 6 ರಿಂದ 8ನೇ ತರಗತಿ ವರೆಗೆ ಸ್ವಾಭಾವಿಕ ಬೆಳವಣಿಗೆಯ ಆಧಾರಮೇಲೆ ಅನುಮತಿ ನೀಡುವುದು. ಈಗಾಗಲೇ 10 ವರ್ಷದಿಂದ ನಡೆಸಲ್ಪಡುತ್ತಿರುವ ಶಾಲಾ ಕಾಲೇಜುಗಳಿಗೆ ಶಾಶ್ವತ ನವೀಕರಣಿ ನೀಡುವುದು ಹಾಗೂ ಕಟ್ಟಡ ತೆರೆಗೆಯನ್ನು ರದ್ದು ಪಡಿಸುವುದು ಸೇರಿದಂತೆ ಹಲವಾರು ಪ್ರಮುಖ ಬಢಡಿಕೆಗಳ ಈಡೇರಿಕೆಗಾಗಿ ಒಕ್ಕೂಟದ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.

ಕೊಪ್ಪಳ ಜಿಲ್ಲೆಯ 7 ತಾಲೂಕ ಕೇಂದ್ರದಲ್ಲಿಉ ತಾಲೂಕಾ ಸಂಘದಿಂದ ತಹಸೀಲ್ದಾರ್ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶಾಭಿದ್ಧಿ ಮಂಡಳಿಗೆ ಮನವಿ ಪತ್ರ ಸಲ್ಲಿಸಿ ಇತ್ತಾಯಿಸಲಾಗುವುದು ಹಾಗೂ  ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸುದ್ದಾಗಿ ಒಕ್ಕೂಟದ ತಾಲೂಕ ಅಧ್ಯಕ್ಷ ಶಾಹೀದ್ ಹುಸೇನ್ ತಹಸೀಲ್ದಾರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಅದ್ಯಕ್ಷ ಶಿವಕುಮಾರ್ ಕುಕನೂರು, ಕಾರ್ಯದಶರ್ಿ ಸಂದೇಶ ಬಿ. ಪಟ್ಟಣಶೆಟ್ಟಿ, ಭೀಮಸೇನ್ ಬನ್ನಿಗೋಳ, ರಾಜು ಚಿಲವಾಡಗಿ ಉಪಸ್ಥಿತರಿದ್ದರು.