ಅಂಗನವಾಡಿ, ವಿವಿಧ ಸಂಘಟನೆಗಳ ಕಾರ್ಯಕರ್ತರ ಬೇಡಿಕೆಗಳ ಈಡೇರಿಕೆಗಾಗಿ ಮನವಿ
Appeal for fulfillment of demands of Anganwadi workers and various organizations
ರಾಯಬಾಗ 12: ದೇಶಾದ್ಯಂತ ನಡೆಯುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಇಂದು ಅಂಗನವಾಡಿ, ಗ್ರಾಮ ಪಂಚಾಯತ, ಅಕ್ಷರ ದಾಸೋಹ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು. ಐಸಿಡಿಎಸ್ ಯೋಜನೆಯಲ್ಲಿ ದುಡಿಯುತ್ತಿರುವ ಅಂಗನವಾಡಿ ನೌಕರರನ್ನು ಖಾಯಂ ಮಾಡಬೇಕು, ಎಫ್‌ಆರ್‌ಎಸ್ ರದ್ದುಪಡಿಸಿ ವೈಫೈ ವ್ಯವಸ್ಥೆ ಮಾಡಬೇಕು, ಚುನಾವಣಾ ಕೆಲಸದಿಂದ ಬಿಡುಗಡೆಗೊಳಿಸಬೇಕು. ಕೇಂದ್ರ ಸರಕಾರದ ನಾಲ್ಕು ಕಾರ್ಮಿಕ ಸಂಹಿತೆಗಳು ರದ್ದಾಗಬೇಕು.
ರೂ.1.20 ಲಕ್ಷ ಆದಾಯ ಹೊಂದಿರುವ ನೌಕರರ ಮತ್ತು ಕಾರ್ಮಿಕರ ಪಡಿತರ ಚೀಟಯನ್ನು ರದ್ದುಪಡಿಸದೇ ಆದಾಯ ಮಿತಿಯನ್ನು ತಾವು ನಿಗದಿ ಮಾಡುತ್ತಿರುವ ಕನಿಷ್ಟ ವೇತನವನ್ನು ಮಾನ ದಂಡವಾಗಿಟ್ಟುಕೊಂಡು ಆದಾಯದ ಮಿತಿಯನ್ನು ಹೆಚ್ಚಿಸಬೇಕು. ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಎಲ್ಲಾ ವಿಭಾಗದ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಿಕ್ಷಣ ಇಲಾಖೆಯ ಎನ್‌ಇಪಿ ಶಿಕ್ಷಣ ನೀತಿ ವಾಪಸ್ಸಾಗಬೇಕು. ಎಮ್ಡಿಎಮ್ ಯೋಜನೆಯನ್ನು ಖಾಯಂ ಮಾಡಬೇಕು. ಅಂಗನವಾಡಿ ಹಾಗೂ ಬಿಸಿಯೂಟ ನೌಕರರಿಗೆ ಮುಟ್ಟಿನ ರಜೆ ನೀಡಬೇಕೆಂಬ ಮನವಿ ಪತ್ರವನ್ನು ತಹಶೀಲ್ದಾರ ಮುಖಾಂತರ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ತಹಶೀಲ್ದಾರ ಮಹಾದೇವ ಸನಮುರಿಯವರು ಸದರೀ ಮನವಿಯನ್ನು ಜಿಲ್ಲಾಧಿಕಾರಿಯವರಿಗೆ ಕಳುಹಿಸುವುದಾಗಿ ತಿಳಿಸಿದರು.
ಅಂಗನವಾಡಿ. ಗ್ರಾಮ ಪಂಚಾಯತ, ಬಿಸಿಯೂಟ ನೌಕರರು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ತಾಲೂಕಾ ಪಂಚಾಯತ ಆವರಣದಲ್ಲಿ ಸೇರಿ ಅಲ್ಲಿಂದ ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಆಗಮಿಸಿ ಅಭಾಜಿ ವೃತ್ತದ ಬಳಿ ಕೇಂದ್ರ ಸರಕಾರದ ಪ್ರತಿಕೃತಿ ದಹನ ಮಾಡಲಾಯಿತು. ಪ್ರತಿಭಟನೆಯಲ್ಲಿ ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ಮನವಿ ಸಲ್ಲಿಸುವಾಗ ಅಂಗನವಾಡಿ ನೌಕರರ ಸಂಘದ ತಾಲೂಕ ಅಧ್ಯಕ್ಷೆ ಚನ್ನಮ್ಮ ಗಡಕರಿ ಗ್ರಾ.ಪಂ.ನೌಕರರಸಂಘದ ಅಧ್ಯಕ್ಷ ಬಾಬು ಗೇನಾನಿ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಭಾರತಿ ಜೋಗನ್ನವರ, ಆಯೇಷಾ ದೇಸಾಯಿ, ಮಹಾದೇವಿ ತರಾಳ, ಮಂಜುಳಾ ಬಕಾಜೆ, ನಾಗರತ್ನಾ ನಾಯಿಕ, ಕೃಷ್ಣಾ ಸಲಗರೆ, ತೋಳೆ, ಮಾಲಾ ಪತ್ತಾರ, ಸಾಧನಾ ಶಿರಗೂರೆ,
ಸೇರಿದಂತೆ ಅಂಗನವಾಡಿ, ಗ್ರಾಮ ಪಂಚಾಯತ, ಬಿಸಿಯೂಟ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರತಿಭಟನೆಯಿಂದ ಹಾರೂಗೇರಿ-ಚಿಕ್ಕೋಡಿ ಮುಖ್ಯ ರಸ್ತೆ ಅರ್ಧಾ ತಾಸುಗಳವರೆಗೆ ಬಂದ ಇದ್ದ ಕಾರಣ ಸಾರಿಗೆ ಸಂಚಾರಕ್ಕೆ ಅಸ್ತವ್ಯಸ್ತವಾಯಿತು. ಬಸ್ಸುಗಳು, ದ್ವಿಚಕ್ರ ವಾಹನಗಳು ಸೇರಿದಂತೆ ಇನ್ನಿತರ ವಾಹನ ಸಂಚಾರ ಬಂದ ಆಗಿತ್ತು. 12ರಾಯಬಾಗ2 -ಪಟ್ಟಣದ ಅಭಾಜಿ ವೃತ್ತದ ಹತ್ತಿರ ಕೇಂದ್ರ ಸರಕಾರದ ವಿರುದ್ಧ ಅಂಗನವಾಡಿ, ಗ್ರಾಮ ಪಂಚಾಯತ, ಬಿಸಿಯೂಟ ನೌಕರರು ಪ್ರತಿಭಟಿಸಿ ಕೇಂದ್ರ ಸರಕಾರದ ಪ್ರತಿಕೃತಿ ದಹಿಸಿ ತಹಶೀಲ್ದಾರ ಮಹಾದೇವ ಸನಮುರಿಯವರಿಗೆ ಮನವಿ ಸಲ್ಲಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 