ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮಕ್ಕೆ ಮನವಿ

ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮಕ್ಕೆ ಮನವಿ  Appeal for action against those who obtained fake caste certificates

ಬೆಳಗಾವಿ 09: ಪರಿಶಿಷ್ಟ ಪಂಗಡ (ST)  ತಳವಾರ ಎಂದು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡವರ ಹಾಗೂ ಪ್ರಮಾಣ ಪತ್ರ ನೀಡಿದ ಅಧಿಕಾರಿ-ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೋಮವಾರ (ಫೆ.09) ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ರಾಜ್ಯಾಧಕ್ಷ್ಯ ಮಹೇಶ ಶಿಹಿಗಳ್ಳಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು. 

ವಾಲ್ಮೀಕಿ ನಾಯಕ ಸಮುದಾಯದ ಸಂಘಟನೆಗಳು ನಿರಂತರವಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ವಿಷಯದನ್ವಯ ಉಚ್ಚ ನ್ಯಾಯಾಲಯದ ಆದೇಶದಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯವರು 11 ಭಾರಿ ನೆನಪೊಲೆಗಳನ್ನು ನೀಡಿದರು ಸಹ ಮಾನ್ಯ ಬೆಳಗಾವಿ ಜಿಲ್ಲಾಧಿಕಾರಿಗಳು ಯಾವುದೆ ತಹಶೀಲ್ದಾರರು ನ್ಯಾಯ ಬದ್ಧ ಕ್ರಮಗಳನ್ನು ಜರುಗಿಸಿರುವುದಿಲ್ಲ ಇದರಿಂದ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ.ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ರವರ ಆದೇಶದಲ್ಲಿ ಬೇಡ, ವಾಲ್ಮೀಕಿ, ನಾಯಕ ಮತ್ತು ನಾಯ್ಕಡ ಸಮುದಾಯಕ್ಕೆ ಸೇರಿದ ತಳವಾರರಿಗೆ ಹೊರತುಪಡಿಸಿ ಅನ್ಯ ಸಮಾಜದ ತಳವಾರರಿಗೆ ಕಾನೂನು ಬಾಹಿರವಾಗಿ ಪರಿಶಿಷ್ಟ ಪಂಗಡದ (ಖಖಿ) ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡ ವ್ಯಕ್ತಿಗಳ ವಿರುದ್ಧ ಹಾಗೂ  ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಿದ ತಹಶೀಲ್ದಾರ ಮತ್ತು ಸಿಬ್ಬಂದಿಗಳ ವಿರುದ್ಧ  ಸೂಕ್ತ ಕ್ರಮ ಕೈಗೊಳ್ಳಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುತ್ತಾರೆ.karnataka schedululed castes schedule tribes and other backward classes Reservation of appointment Etc . Act 1990 ರಲ್ಲಿ ಜಿಲ್ಲಾಧಿಕಾರಿಗಳಾದ ತಮಗೆ ಆದಿಕಾರವನ್ನು ಪ್ರದತ್ತ ಮಾಡಿದೆ ಎಂದು ಸ್ಪಷ್ಟ ಪಡಿಸಿರುತ್ತಾರೆ ಹಾಗೂ ಈ ಆದಿಕಾರದ ಕುರಿತಾಗಿ ಮಾನ್ಯ ಉಚ್ಚ ನ್ಯಾಯಾಲಯದ ತಿಠಿ 13777 / 2023 ರ The Deputy commissioner may stay The Execution of Any such Decision or Order Pending the Exercise of the powers under sub section (1) in respect thereoff  ಎಂತಲೂ ಕಾಯ್ದೆ 4ಈ ಅಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ  ನಿರ್ದೇಶನವಿರುತ್ತದೆ. ಹೀಗಿರುವಾಗ ಕಾನೂನನ್ನು ಉಲ್ಲಂಘಿಸಿ ನಿಜವಾದ ಪರಿಶಿಷ್ಟ  ಪಂಗಡದ (ST)  ಸಮುದಾಯಕ್ಕೆ ಸೇರದ ಅನ್ಯ ಸಮುದಾಯದವರಿಗೆ ಅಂದರೆ ಅಂಬಿಗ, ಬೆಸ್ತ , ಭೆಸ್ತ, ಸುಣಗಾರ (ಪ್ರವರ್ಗ -1) ಮೊದಲಾದವರಿಗೆ ತಳವಾರ ಎಂದು ಸುಳ್ಳು ಖಖಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿರುವ ವ್ಯಕ್ತಿಗಳ ಜಾತಿ ಪ್ರಮಾಣ ಪತ್ರಗಳನ್ನು  ಕೂಡಲೆ ರದ್ದು ಪಡಿಸಬೇಕು.ಅಂಥವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ . ಹಾಗೂ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡಿದೇ ಅಧಿಕಾರಿ ಸಿಬ್ಬಂದಿಗಳ ಮೇಲೆ ಕಾಯ್ದೆಯಲ್ಲಿ  ಈ ವರೆಗೆ ಯಾವ ಕ್ರಮವನ್ನು ಜರುಗಿಸಲಾಗಿಲ್ಲ. ಸುಳ್ಳು ಜಾತಿ ಪ್ರಮಾಣ ಪತ್ರ ಆಧಾರದ ಮೇಲೆ ಈವರೆಗೆ ಎಷ್ಟು ಜನರಿಗೆ ಸಿಂಧುತ್ವ ಪ್ರಮಾಣ ಪತ್ರ ವಿತರಿಸಲಾಗಿದೆ ಎಂದು ಮನವಿ ಮಾಡಿಕೊಂಡರು.  

ಈ ವಿಚಾರವಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ರವರಿಗೂ  ಮನವಿ ಸಲ್ಲಿಸಲಾಯಿತು. ಹಾಗೂ ಸರ್ಕಾರದ ಅದಿನ ಕಾರ್ಯದರ್ಶಿಗಳು ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ರವರ ಹೊರಡಿಸಿದ ಆದೇಶ ಪ್ರತಿಗಳನ್ನು ಕೂಡ ಲಗ್ಗತ್ತಿಸಿ ಮನವಿ ಮಾಡಲಾಯಿತು.  

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲೇಶ್ ಮುಳಗಶಿ, ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಲಕ್ಷ್ಮಣ ಬಾಗಡಿ,=ಬೆಳಗಾವಿ ನಗರ ಅಧ್ಯಕ್ಷ ಮಂಜು ತಳವಾರ, ಬೆಳಗಾವಿ ನಗರ ಉಪಾದ್ಯಕ್ಷ ಸಚಿನ್‌.ಕೆ, ಸಂಘಟನೆಯ ಕಾರ್ಯಕರ್ತರಾದ ಶುಭಂ ತಳವಾರ ಹಾಗೂ ಆದರ್ಶ ದನದಮಣಿ ಹಾಗೂ ಇನ್ನುಳಿದ ಪದಾದಿಕಾರಿಗಳು ಉಪಸ್ಥಿತರಿದ್ದರು. 


Belgavi