2024 - 25 ನೇ ಸಾಲಿನ ಹತ್ತಿ ಬೆಳೆಯ ಸಮೀಕ್ಷಾ ವರದಿ ಮತ್ತು ವಿಮಾ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಮನವಿ
Appeal demanding the issuance of a cotton crop survey report and insurance compensation for the 2024
ಲೋಕದರ್ಶನ ವರದಿ
ವಿಜಯಪುರ 09 : ತಾಳಿಕೋಟಿ ತಾಲೂಕಿನಲ್ಲಿ 2024 / 25 ನೇ ಸಾಲಿನ ಹತ್ತಿ ಬೆಳೆಯ ಸಮೀಕ್ಷಾ ವರದಿ ಮತ್ತು ವಿಮಾ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ತಾಲೂಕಾ ಘಟಕ ತಾಳಿಕೋಟಿ ವತಿಯಿಂದ ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಳಿಕೋಟಿ ತಾಲೂಕಾ ಅಧ್ಯಕ್ಷರಾದ ಬಾಲಪ್ಪಗೌಡ ಲಿಂಗದಳ್ಳಿ, ಉಪಾಧ್ಯಕ್ಷರಾದ ರಾಮನಗೌಡ ಹಾದಿಮನಿ ಜಂಟಿಯಾಗಿ ಮಾತನಾಡಿ, 2024/25 ನೇ ಸಾಲಿನಲ್ಲಿ ತಾಳಿಕೋಟಿ ತಾಲೂಕಿನಾದ್ಯಂತ ಸಮಾರು 5000 ಕ್ಕಿಂತ ಹೆಚ್ಚು ರೈತರು ಬೆಳೆ ವಿಮೆಯಡಿ ನೋಂದಣಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಹತ್ತಿ ಬೆಳೆಗೆ ಸಂಬಂಧಿಸಿದಂತೆ ವಿಮಾ ಕಂಪನಿಯಿಂದ ಬೆಳೆ ಸಮೀಕ್ಷಾ ವರದಿಯೂ ಇಲ್ಲ ಮತ್ತು ಯಾವದೇ ವಿಮಾ ಪರಿಹಾರವು ಬಂದಿರುವುದಿಲ್ಲ.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ವಿಮಾ ಕಂಪನಿಯ ಅಧಿಕಾರಿಗಳಿಗೆ ಹಲವಾರು ಭಾರಿ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ ಕೂಡಲೇ ಮನವಿಗೆ ಸ್ಪಂದಿಸಿ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಮುಂಚೆ ಮನವಿ ನೀಡಲಾಗಿದೆ. ಜೂ. 15 ರ ವರೆಗೆ ಪರಿಹಾರ ನೀಡುವುದಾಗಿ ಓರಿಯಂಟಲ್ ವಿಮಾ ಕಂಪನಿಯವರು ಭರವಸೆ ನೀಡಿದ್ದಾರೆ. ಅದರಂತೆ ಪರಿಹಾರ ಕೊಡದಿದ್ದರೆ ಅವರ ಕಂಪನಿಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಅಶೋಕ ಉಪ್ಪಲದಿನ್ನಿ, ರಾಜು ವಾಲೀಕಾರ, ದೇಸಾಯಿ ಬೆನ್ನಟ್ಟಿ, ಅರುಣ ಕುಮಾರ ಪಾಟೀಲ, ನಾಗಪ್ಪ ಹಿರೂರ, ಮಾಳಪ್ಪ ಬೂದಿಹಾಳ, ಯಲ್ಲಪ್ಪ ಬಮ್ಮನಹಳ್ಳಿ, ಬಿ. ಜೆ. ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 