ಅರ್ಹ ಕಾರ್ಡಗಳನ್ನು ರದ್ದುಗೊಳಿಸಿರುವ ಆಹಾರ ಇಲಾಖೆ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಮನವಿ

ಅರ್ಹ ಕಾರ್ಡಗಳನ್ನು ರದ್ದುಗೊಳಿಸಿರುವ ಆಹಾರ ಇಲಾಖೆ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಮನವಿ Appeal demanding suspension of Food Department officials who cancelled eligible cards

ಗದಗ-28, ಗದಗ-ಬೆಟಗೇರಿ ನಗರದ ಬಡವರ, ಕೊಲಿಕಾರ್ಮಿಕರ ಹಾಗೂ ಸ್ಲಂ ಜನರ ಬಿಪಿಎಲ್ ಕಾರ್ಡಗಳನ್ನು ರದ್ದುಗೊಳಿಸಿರುವ ಆಹಾರ ಇಲಾಖೆ ಅಧಿಕಾರಿಗಳ ಜನವಿರೋಧಿ ಕ್ರಮವನ್ನು ಖಂಡಿಸಿ ಹಾಗೂ ವಿನಾಕಾರಣ ಅರ್ಹ ಫಲಾನುಭವಿಗಳ ಸಾವಿರಾರು ಕಾರ್ಡಗಳನ್ನು ರದ್ದುಗೊಳಿಸಿರುವ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರನ್ನು ಕೊಡಲೇ ಅಮಾನತು ಮಾಡಬೇಕೆಂದು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ನೀಡಿ ಆಗ್ರಹಿಸಿದರು. 

ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್‌.ಮಾನ್ವಿ ಮಾತನಾಡಿ ಗದಗ ಆಹಾರ ಇಲಾಖೆ ಅಧಿಕಾರಿಗಳು ಏಕಾಏಕಿಯಾಗಿ ಗದಗ-ಬೆಟಗೇರಿ ನಗರ ಮತ್ತು ಗದಗ ತಾಲೂಕು ಪ್ರದೇಶದಲ್ಲಿ ವಾಸವಾಗಿರುವ ಬಡ, ಕೊಲಿಕಾರ್ಮಿಕ ಹಾಗೂ ಸ್ಲಂ ಪ್ರದೇಶದಲ್ಲಿ ಕನಿಷ್ಟ ಮಟ್ಟದ ಸೌಲಭ್ಯಗಳು ಇಲ್ಲದೇ ವಾಸವಾಗಿರುವ ಸಾವಿರಾರು ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಿದ್ದರಿಂದ ಬಡವರು ಪಡಿತರ  ಆಹಾರ ಧಾನ್ಯಗಳು ಸಿಗದೇ ಬೀದಿಗೆ ತಂದಿರುವುದು ನಾವು ಖಂಡಿಸುತ್ತಙೇವೆ. ಈ ಹಿಂದೆ ಆಹಾರ ಇಲಾಖೆ ಇಚೇರಿ ಮುಂದೆ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಅನ್ಯಾಯಕ್ಕೆ ಒಳಗಾದ ಸಾವಿರಾರು ಕುಟುಂಬಗಳೊಂದಿಗೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರದ ಆದೇಶದಂತೆ ಅನರ್ಹ ಕಾರ್ಡಗಳನ್ನು ರದ್ದು ಮಾಡಿದ್ದೇವೆ ಎಂದು ಬೇಜವಾಬ್ದಾರಿ ಉತ್ತರವನ್ನು ನೀಡಿ ಇದು ನಾವು ಮಾಡಿಲ್ಲ ನಮ್ಮ ಮೇಲ್ದಾಕಾರಿಗಳಾದ ಆಹಾರ ಇಲಾಖೆ ಉಪನಿರ್ದೇಶಕರ ಸೊಚನೆ ಮೇರೆಗೆ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಾರ್ಡಗಳನ್ನು ರದ್ದು ಮಾಡಿದೇವೆ ಎಂದು ಹಾರೈಕೆ ಉತ್ತರ ನೀಡಿದ್ದಾರೆ. ಗದಗ-ಬೆಟಗೇರಿ ಶಹರದ 2304 ಬಡವರ ಕಾರ್ಡಗಳು ಮತ್ತು ಗದಗ ಗ್ರಾಮೀಣ ಭಾಗದ 1478 ಕಾರ್ಡಗಳನ್ನು ಈ ಕುಟುಂಬಗಳ ವಾರ್ಷಿಕ ಆದಾಯ 1 ಲಕ್ಷ 20 ಸಾವಿರ ಇದೆ ಎಂದು ಕಳೆದ 30 ವರ್ಷಗಳ ಹಿಂದಿನ ಮಾನದಂಡಗಳನ್ನು ಇಟ್ಟುಕೊಂಡು ಆಹಾರ ಇಲಾಖೆಯಿಂದ ಬಡ ಕುಟುಂಬಗಳ ಆಧಾರ ಸ್ತಂಭವಾಗಿರುವ ಪಡಿತರ ಚೀಟಿಗಳನ್ನು ರದ್ದುಗೊಳಿಸಿದ್ದಾರೆ, ಉಳ್ಳವರ ಪಡಿತರ ಚೀಟಿಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿ ರದ್ದುಗೊಳಿಸಲಿ ನಮ್ಮಗೆ ಯಾವುದೇ ಅಭಿಯಂತರ ಇಲ್ಲ, ಆದರೆ ಅಧಿಕಾರಿಗಳು ಯಾವುದೇ ಸಮೀಕ್ಷೆಯನ್ನು ನಡೆಸದೇ, ಮುಂಚಿತವಾಗಿ ಫಲಾನುಭವಿಗಳಿಗೆ ನೋಟಿಸ್ ನೀಡದೇ, ಪಡಿತರ ಅಂಗಡಿಗಳ ಮುಂದೆ ರದ್ದುಗೊಂಡಿರುವ ಪಡಿತರ ಚೀಟಿಗಳ ಮಾಹಿತಿಯನ್ನು ಹಚ್ಚದೇ ಏಕಾಏಕಿಯಾಗಿ ನಗರದ ಸಾವಿರಾರು ಕಾರ್ಡಗಳನ್ನು ರದ್ದುಗೊಳಿಸಿ 2 ತಿಂಗಳಾದರು ಸಹ ಆಹಾರ ಇಲಾಖೆ ಅಧಿಕಾರಿಗಳ ಮೇಲೆ ಕ್ರಮವನ್ನು ತೆಗೆದುಕೊಳ್ಳದೇ ಬಡ ಜನರಿಗೆ ಅನ್ಯಾಯ ಮಾಡುತ್ತಿರುಬವುದನ್ನು ಖಂಡನೀಯವಾಗಿದೆ. ಪಡಿತರ ಚೀಟಿಗಳು ರದ್ದುಗೊಂಡಿರುವ ವಿಷಯ ತಿಳಿದು ಸಾವಿರಾರು ಬಡ ಕುಟುಂಬಗಳು ಕಣ್ಣೀರು ಹಾಕುತ್ತಿದ್ದಾರೆ. ಸಾವಿರಾರು ಬಡ ಕುಟುಂಬಗಳು ಪಡಿತರ ಚೀಟಿಯ ಮೂಲಕ ಅನ್ನ ಭಾಗ್ಯ ಯೋಜನೆಯಿಂದ ಆಹಾರ ಧಾನ್ಯಗಳನ್ನು ಪಡೆದುಕೊಂಡು ತಮ್ಮ ಕುಟುಂಬದ ಉಪಜೀವನವನ್ನು ಸಾಗಿಸುತ್ತ ಬಂದಿದ್ದಾರೆ, ಆದರೆ ಆಹಾರ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ಇವತು ಸಾವಿರಾರು ಬಡ ಕುಟುಂಬಗಳಿಗೆ ಒಂದು ಹೊತ್ತು ಅನ್ನಕ್ಕೊ ಇಲ್ಲದೇ ಉಪವಾಸ ಬಿಳುವ ಸ್ಥಿತಿ ನಿರ್ಮಾಣವಾಗಿದೆ, ಕೇಂದ್ರ ಸರ್ಕಾರದ ಪಡಿತರ ಚೀಟಿಗಳ ರದ್ದುಗೊಳಿಸಲು ಬಂದಿರುವ ಮಾರ್ಗ-ಸೊಚಿಯನ್ನು ಮರು ಪರೀಶಿಲ್ಲಿಸಲು ಹೇಳಿದ್ದೇವೆ ಎಂದು ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ.

ರಾಜ್ಯದ ಆಹಾರ ಇಲಾಖೆ ಸಚಿವರಾದ ಕೆ.ಮುನಿಯಪ್ಪ ಅವರು ರಾಜ್ಯದಲ್ಲಿ ಬಿಪಿಎಲ್ ಕಾರ್ಡಗಳನ್ನು ಎಪಿಎಲ್ ಗೆ ಪರಿವರ್ತನೆ ಮಾಡಲು ಇದರ ಮಾನದಂಡನೆ ಕುರಿತು ಪರೀಶೀಲನೆ ಮಾಡಲಾಗುತ್ತದೆ, ಕೇಂದ್ರ ಸರ್ಕಾರವು ಪಡಿತರ ಚೀಟಿಗಳ ವಿತರಣೆ ಮಾರ್ಗಸೊಚಿಗಳನ್ನು ಹೊರಡಿಸುತ್ತದೆ ಅರ್ಹತಾ ಮಾನದಂಡಗಳನ್ನು ಪರಿಷ್ಕರಿಸುವುದು ಸರ್ಕಾರದ ಪರೀಶೀಲನೆಯಲ್ಲಿದೆ ಇದನ್ನು  ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ, ಆದರೆ ಗದಗ ಆಹಾರ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರದ ಸೊಚನೆಯನ್ನು ಸರಿಯಾಗಿ ತಿಳಿದುಕೊಳ್ಳದೇ ತಮ್ಮ ಮನಬಂದಂತೆ ಏಕಾಏಕಿಯಾಗಿ ಸಾವಿರಾರು ಕಾರ್ಡಗಳನ್ನು ರದ್ದುಗೊಳಿಸಿ ಬಡ ಕುಟುಂಬಗಳನ್ನು ಬೀದಿಗೆ ತಂದಿದ್ದಾರೆ. ರಾಜ್ಯದ ಯಾವ ಜಿಲ್ಲೆಯಲ್ಲಿ ಅಥವಾ ರಾಜ್ಯದ ಯಾವ ತಾಲೂಕು ಕೇಂದ್ರಗಳಲ್ಲಿ ಸಹ ಒಂದು ಕಾರ್ಡ ರದ್ದು ಮಾಡಿಲ್ಲ. ಆದರೆ ಗದಗ-ಬೆಟಗೇರಿ ನಗರದಲ್ಲಿ ಸರ್ಕಾರದ ಸೊಚನೆಯನ್ನು ಸರಿಯಾಗಿ ಗಮನಿಸದೇ ಆಹಾರ ಇಲಾಖೆ ಅಧಿಕಾರಿಗಳು ಸಾವಿರಾರು ಕಾರ್ಡಗಳನ್ನು ರದ್ದು ಮಾಡಿರುವುದು ಬಡಜನರ ವಿರೋಧಿ ನೀತಿಯಾಗಿದೆ. ಕೊಡಲೇ ಇದಕ್ಕೆ ಕಾರಣರಾಗಿರುವ ಆಹಾರ ಇಲಾಖೆ ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ಕೈಗೊಂಡು ಇಂತಹ ಬೇಜವಾಬ್ದಾರಿ ಮತ್ತು ಬಡವರ ವಿರೋಧಿ ಆಹಾರ ಇಲಾಖೆ ಸಹಾಯಕ ನಿರ್ದೇಶಕರನು ತಕ್ಷಣ ಅಮಾನತು ಮಾಡಬೇಕು, ಈಗ ರದ್ದುಗೊಂಡಿರುವ ಕಾರ್ಡಗಳನ್ನು ಮರು ಪರೀಶೀಲ್ಲನೆ ನಡೆಸುವರೆಗೊ ಅನ್ಯಾಯಕ್ಕೆ ಒಳಗಾಗಿರುವ ಬಡ ಕುಟುಂಬಗಳಿಗೆ ತಕ್ಷಣ ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಆಹಾರ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡದೇ ಇದ್ದಲ್ಲಿ ಮತ್ತು ರದ್ದುಗೊಂಡಿರುವ ಕಾರ್ಡಗಳಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳದೇ ಇದ್ದಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿ ಸಹಕಾರದಲ್ಲಿ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಸಾವಿರಾರು ಕುಟುಂಬಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಲಾಗಿದೆ. 

ಮನವಿ ನೀಡುವ ಸಂದರ್ಭದಲ್ಲಿ ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ. ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮುಖಂಡರಾದ ಮೌಲಾಸಾಬ ಗಚ್ಚಿ, ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೆಹಬೂಬಸಾಬ ಬಳ್ಳಾರಿ, ಸಲೀಂ ಹರಿಹರ, ಶೇಖಪ್ಪ ರೋಣ, ಖಾಜಾಸಾಬ ಇಸ್ಮಾಯಿಲನವರ, ಗೌಸಸಾಬ ಅಕ್ಕಿ, ಮೆಹಬೂಬ ಮುಲ್ಲಾ, ಬಸವರಾಜ ಕಳಸದ, ರಿಜ್ವಾನ ಮುಲ್ಲಾ, ಮಕ್ತುಮಸಾಬ ಮುಲ್ಲಾನವರ ಹಾಗೂ ನೂರಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.