ಸಮಾಧಿ ನೆಲಸಮ ಮಾಡಿದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಮನವಿ

ಸಮಾಧಿ ನೆಲಸಮ ಮಾಡಿದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಮನವಿ Appeal demanding strict action against those who demolished graves

ತಾಳಿಕೋಟಿ 14: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಬೆಂಗಳೂರಿನಲ್ಲಿರುವ ಸಮಾಧಿ ಸ್ಥಳವನ್ನು ನೆಲಸಮ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ವಿಷ್ಣುವರ್ಧನ್ ಅಭಿಮಾನಿ ಬಳಗದ ಪದಾಧಿಕಾರಿಗಳು ಬುಧವಾರ ತಹಸಿಲ್ದಾರ್ ಡಾ.ವಿನಯಾ ಹೂಗಾರ ಇವರಿಗೆ ಮನವಿ ಸಲ್ಲಿಸಿದರು. 

ಪ್ರತಿಭಟನೆಯನ್ನು ಮಾಡುವುದರ ಮುಖಾಂತರ ವಿಷ್ಣುವರ್ಧನ್ ಅವರ ಸರ್ಕಲ್ ಪೂಜೆ ಮಾಡಿಕೊಂಡು ಭಾವಚಿತ್ರಕ್ಕೆ ಮಾಲೆಯನ್ನು ಹಾಕಿ ಅಲ್ಲಿಂದ ತಹಶಿಲ್ದಾರ್ ಆಫೀಸ್ ಗೆ ಹೋಗಿ ಮನವಿ ಪತ್ರವನ್ನು ಅಪಾರ ಅಭಿಮಾನಿಗಳೊಂದಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಸೋಮಶೇಖರಯ್ಯ ಹಿರೇಮಠ ಅವರು ಮಾತನಾಡಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರು ನಡೆದು ಬಂದ ಹಾದಿಯನ್ನು ನೋಡಿದಾಗ ಅವರ ಕೊಡುಗೆ ಕರ್ನಾಟಕಕ್ಕೆ ಅಪಾರವಿದೆ ಆ ನಿಟ್ಟಿನಲ್ಲಿ ವಿಷ್ಣುವರ್ಧನ್ ಅವರು ಅಪ್ಪಟ ಒಬ್ಬ ಆಧ್ಯಾತ್ಮಿಕ ಜೀವಿಯಾಗಿ ಸಿನಿಮಾ ನಟನಾಗಿ ಸಮಾಜ ಸೇವಕನಾಗಿ ಬಡವರ ಪಾಲಿನ ಆಶಾಕಿರಣವಾಗಿ ಅವರ ಸೇವೆ ಅನನ್ಯವಾದದ್ದು ಜೊತೆಗೆ ಹೆಚ್ಚು ಸಿನಿಮಾಗಳನ್ನು ನಟಿಸಿ ಅತ್ಯದ್ಭುತವಾದ ಕೊಡುಗೆ ನೀಡಿ ರಾಜ್ಯದ ತುಂಬಾ ಅಷ್ಟೇ ಅಲ್ಲ ದೇಶ ವಿದೇಶದಲ್ಲಿಯೂ ಸಹಿತ ಅವರ ಅಭಿಮಾನಿಗಳು ಹೊಂದಿದ್ದಾರೆ ಅದಕ್ಕಾಗಿ ಅವರ ಸಮಾಧಿ ಸ್ಥಳವನ್ನು ನೆಲಸಮ ಮಾಡಿದ ವ್ಯಕ್ತಿಯನ್ನು ಕಂಡುಹಿಡಿದು ಅವರನ್ನು ಗಡಿಪಾರು ಮಾಡಬೇಕೆಂದು ಶಿಕ್ಷೆ ನೀಡಬೇಕೆಂದು ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಮತ್ತೆ ಪುನರಾವರ್ತನೆ ಪುಣ್ಯ ಭೂಮಿ ಕಟ್ಟಡ ಆಗಬೇಕೆಂದು ತಿಳಿಸಿದರು. 

ಈ ಸಂದರ್ಭದಲ್ಲಿ ಅಭಿಮಾನಿಗಳಾದ ದತ್ತು (ಕರ್ಣ ಅಟೋ)ರಮೇಶ್ ಪತ್ತಾರ, ಜಿ ಎಮ್ ಪಾಟೀಲ,ಶಹಾ ಪಟೇಲ ಅರಸನಾಳ, ಈರಣ್ಣ ಮಸ್ತರ್, ಶಿವಲಿಂಗು ಒಕ್ಕಲಿ, ಶಿವಸಂಗಪ್ಪ ಬಿರಾದಾರ,ತೇಜುಕುಮಾರ ಹಿರೇಮಠ,ಶರಣು ಕಲಾಲ,ಪರಶುರಾಮ ಮದ್ದರಕಿ,ಅಮಿನಸಾ ಜಮಾದಾರ, ರವಿ ಬಡಿಗೇರ, ಮುತ್ತು ಬಾರಿಕೆರೆ,ಪವನ್ ಸಾಲೋಡಗಿ, ಅಮರೇಶ ಹಿರೇಮಠ,ಚಿದಾನಂದ ಹಿರೇಮಠ,ಭಿಮಶೇನ್ ವಡಗೇರಿ, ಸತಿಶ್ ನಾಯ್ಕೋಡಿ, ಬಸವಂತರಾಯ ಜಿ ಸಿ,ರಾಘವೇಂದ್ರ ಎಚ್, ಸಾಗರ ಬಿರಾದಾರ, ಯಶವಂತ ಹಿರೇಮಠ ಮತ್ತಿತರರು ಭಾಗವಹಿಸಿದ್ದರು.