ಗೋ ರಕ್ಷಣೆ ಮತ್ತು ರಾಷ್ಟ್ರೀಯ ಪ್ರಾಣಿ ಎಂದು ಘೋಷನೆಗೆ ಆಗ್ರಹಿಸಿ ಮನವಿ
Appeal demanding protection of cows and declaration as national animal
ಲೋಕದರ್ಶನ ವರದಿ
ಮೂಡಲಗಿ 29: ದೇಶಾದ್ಯಂತ ಹಮ್ಮಿಕೊಂಡಿರುವ ಗೋಮಾತೆಯ ಗೌರವದ ಅಭಿಯಾನದ ಹಿನ್ನಲೇ ಗೋ ಭಕ್ತರು ಮೂಡಲಗಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ, ಪ್ರದಾನ ಮಂತ್ರಿಗಳಿಗೆ, ರಾಜ್ಯದ ರಾಜ್ಯಪಾಲರಿಗೆ ಮತ್ತ ಮುಖ್ಯಮಂತ್ರಿಗಳಿಗೆ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲು, ರಾಷ್ಟ್ರೀಯ ಪ್ರಾಣಿ ಮತ್ತು ಎಪ್ರಿಲ್ 27 ರಂದು ಗೋಮಾತಾ ಗೌರವ ದಿನ ಘೋಷನೆಗೆ ಆಗ್ರಹಿಸಿ ಗೋ ಭಕ್ತರ ಸಹಿ ಸಂಗ್ರಹ ಪತ್ರದೊಂದಿಗೆ ಮನವಿ ಅರ್ಿಸಲಾಯಿತು.
ಹಿಂದೂ ಸಂಘಟನೆಯ ಮುಖಂಡ ಬಸು ಪಡ್ತರಿ ಮಾತನಾಡಿ, ಭಾರತೀಯ ಸಂಸ್ಕೃತಿ, ಆರ್ಥಿಕತೆ, ಮಾಣವ ಆರೋಗ್ಯ, ವಿಷಮುಕ್ತ ಕೃಷಿ ಮತ್ತು ಪರಿಸರ ಸಮತೋಲನದಲ್ಲಿ ಹಸುವಿನ ಸ್ಥಾನವು ಅತ್ಯಂತ ಮಹತ್ವದ್ದಾಗಿದೆ, ಶತಮಾನಗಳಿಂದಲೂ ಗೋ-ವಂಶವು ಭಾರತೀಯ ಪರಂಪರೆಯ ಜೀವನಾಡಿಯಾಗಿದೆ. ಪ್ರಸ್ತುತ ಪರರಿಸ್ಥಿಯಲ್ಲಿ ಗೋವಿಗೆ ಸರಿಯಾದ ಸಂರಕ್ಷಣೆ ಮತ್ತು ಉತ್ತೇಜನದ ಕೊರತೆಯಿಂದಾಗಿ ಗೋ-ವಂಶದ ಸ್ಥಿತಿ ಶೋಚನೀಯವಾಗಿ. ಭಾರತ ಭೂಮಿಯಲ್ಲಿ ಎಲ್ಲ ಗೊ-ವಂಶಗಳು ಆರೋಗ್ಯಕರವಾಗಿ, ಸಂತೋಷವಾಗಿ, ಗೌರವಯುತವಾಗಿ ಮತ್ತು ಸುರಕ್ಷಿತವಾಗಿರಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಗೋ ಹತ್ಯೆ ನಿಷೇದ ಕಾನೂನು ಮತ್ತು ಗೋಮಾತ ದಿನ ಘೊಷನೆ ಮಾಡಬೇಕೆಂದು ಆಗ್ರಹಿಸಿದರು.
ಗೋಕಾಕ ಹಿಂದೂ ಜಾಗರಣ ವೇದಿಕೆ ಸಂಚಾಲಕ ಅಂಕುಶ ರೇಣುಕಿ, ಶ್ರೀರಾಮ ಸೇನಾ ಗೋಕಾಕ ತಾಲೂಕ ಅಧ್ಯಕ್ಷ ಸಂಜು ಬಾಗೇವಾಡಿ, ಸಂಘಟನೆ ಕಾರ್ಯದರ್ಶಿ ನಂದು ಗರೀಬ, ಮೂಡಲಗಿ ತಾಲೂಕಾ ಬಜರಂಗ ದಳ ಪ್ರಮುಖರಾದ ಮಾಂತೇಶ ಮುಗಳಖೋಡ, ದುಂಡಪ್ಪ ಹಳ್ಳೂರ, ರಜನಿಕಾಂತ ನಾಯಿಕ, ಸಂದೀಪ ಸಾನವಾಲೆ, ಕೃಷ್ಣಾ ಸಾನವಾಲೆ, ಸಚೀನ ಸಾನವಾಲೆ, ಮೂಡಲಗಿ ತಾಲೂಕಾ ವಿ.ಎಚ್.ಪಿ ಧರ್ಮ ರಕ್ಷಕ ದಾನು ತಂಬೂರಿ ಸೇರಿದಂತೆ ಅನೇಕ ಹಿಂದು ಸಂಘಟನೆಯ ಕಾರ್ಯಕರ್ತರು ಮತ್ತು ಗೋ ಭಕ್ತರು ಉಪಸ್ಥಿತರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 