ಚನ್ನರಾಯಪಟ್ಟಣ ಹೋಬಳಿಯ ಭೂಮಿ ಭೂಸ್ವಾಧೀನ ಕೈಬಿಡಲು ಒತ್ತಾಯಿಸಿ ಮನವಿ
Appeal demanding abandonment of land acquisition in Channarayapattana hobli
ವಿಜಯಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ಸುಮಾರು 1777 ಎಕರೆ ಭೂಮಿ ಪೂರ್ಣ ಭೂಸ್ವಾಧೀನದಿಂದ ಕೈಬಿಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಸಂಯುಕ್ತ ಹೋರಾಟ ಸಮಿತಿ ಕರ್ನಾಟಕ ಜಂಟಿಯಾಗಿ ವಿಜಯಪುರ ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ ಮಾತನಾಡಿ, ಸುಮಾರು 1195 ದಿನಗಳಿಂದ ಬಲವಂತದ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಅಂತಿಮ ಹಂತ ತಲುಪಿದ್ದು ಜುಲೈ 15 ರಂದು ಕರ್ನಾಟಕ ಸರ್ಕಾರ ವಚನ ಭ್ರಷ್ಟವಾಗದೆ ರೈತರ ತಿರ್ು ಕೈಗೊಳ್ಳಲು ಶೀಘ್ರ ಮಧ್ಯ ಪ್ರವೇಶಿಸುವಂತೆ ದೇಹಲಿಯ ಕಾಂಗ್ರೆಸ್ ವರಿಷ್ಠರಿಗೆ ಆಗ್ರಹಿಸುವೆ. ದೇವನಹಳ್ಳಿಯ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ 13 ಹಳ್ಳಿಯ ರೈತರು ನಾವು ಪ್ರಾಣವನ್ನಾದರೂ ಕೊಟ್ಟೆವು ಭೂಮಿಯನ್ನು ಕೊಡುವುದಿಲ್ಲವೆಂದು 3 ವರ್ಷಗಳಿಂದ ಮೀರಿದ ಹೋರಾಟ ನಡೆಸುತ್ತಿರುವುದು ತಮಗೆ ತಿಳದಿದೆ ಇಲ್ಲಿ ಭೂ ಒಡೆತನ ಮಾರಟದ ಪ್ರಶ್ನೆ ಮಾತ್ರ ಅಡಗಿಲ್ಲ ಇದು ಬೆಂಗಳೂರು ಮಹಾನಗರಕ್ಕೂ ಸೇರಿ ರಾಜ್ಯಕ್ಕೆ ಆಹಾರ, ತರಕಾರಿ, ಹಣ್ಣು, ಹಾಲೂ, ಹೂವನ್ನು ಸಮೃದ್ಧವಾಗಿ ಬೆಳೆದು ಪೂರೈಸುವ ಫಲವತ್ತಾದ ಭೂ ಪ್ರದೇಶವಾಗಿರುವದರಿಂದ ನಮ್ಮೆಲ್ಲರ ಆಹಾರ ಮತ್ತು ಪೌಷ್ಠಿಕಾಂಶ ಭದ್ರತೆಯ ವಿಚಾರ ಕೂಡಾ ಇಲ್ಲಿ ಅಡಗಿರುತ್ತದೆ. ಹಾಗಾಗಿ ಎಲ್ಲ ವರ್ಗ ಸಮುದಾಯಗಳ ಬೆಂಬಲ ಸಹಾನುಭೂತಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ರಾಜ್ಯ ಸಮಿತಿಯೂ ಈ ಹೋರಾಟಕ್ಕೆ ನಿರಂತರ ರೈತರ ಪರವಾಗಿರುತ್ತದೆ. ಕೈಗಾರಿಕೆ ಅಭಿವೃದ್ಧಿಗಾಗಿ ಕೆ.ಐ.ಡಿ.ಬಿ. ರೈತರಿಂದ ಭೂಮಿ ವಶಪಡಿಸಿಕೊಳ್ಳುತ್ತಿರುವ ಈ ವ್ಯವಸ್ಥೆಯೇ ಸಮರ್ಕವಾಗಿಲ್ಲ ಪಾರದರ್ಶಕದ ಕೊರೆತೆ ಅವ್ಯವಹಾರಗಳಿಗೆ ದಾರಿಮಾಡಿಕೊಡುವ ಹಾಗಿದೆ ಇವೆಲ್ಲವನ್ನು ಈತ್ತೀಚಿನ ಸಿ.ಎ.ಜಿ. ವರದಿ ಬಹಿರಂಗ ಪಡಿಸಿರುತ್ತದೆ ಮಾತ್ರವಲ್ಲ ಉಚ್ಚನಾಯಾಲಯ ಕೂಡಾ ಮಧ್ಯ ಪ್ರವೇಶಿಸಿ ಸರ್ಕಾರದ ವಿರುದ್ಧ ತೀರ್ು ನೀಡಿರುವ ವಿಚಾರಗಳೆಲ್ಲವನ್ನು ವಿವರವಾಗಿ ಪ್ರಸ್ತಾಪಿಸಲಾಗಿದೆ. ರಾಜ್ಯದ ಭೂಸುಧಾರಣೆ ಕಾಯ್ದೆಗೆ ಹಿಂದಿನ ಸರ್ಕಾರ ತಂದಿರುವ ಮಾರಕ ತಿದ್ದುಪಡಿಗಳನ್ನು ಸರಿಪಡಿಸಿ ರೈತಪರ ನೀತಿ ನಿಲುವುಗಳನ್ನು ರೂಪಿಸುವ ಭರವಸೆಯನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಸಿಸಲಾಗಿರುತ್ತದೆ. ಹಾಗಿದ್ದರೂ ಎರಡೂವರೆ ವರ್ಷಗಳ ಅವಧಿ ಮುಗಿದರೂ ಸರ್ಕಾರ ಗಮನ ಹರಿಸದೆ ಕೊಟ್ಟಿರುವ ವಚನ ಪಾಲಿಸುತ್ತಿಲ್ಲ ಹಾಗಾಗಿ ಅಹಿಂದಪರ ಮುಖ್ಯಮಂತ್ರಿಗಳು ಕೂಲಂಕುಷವಾಗಿ ಪರಿಗಣಿಸಿ ರೈತರ ಭೂಮಿಯನ್ನು ರೈತರಿಗೆ ಹಸ್ತಾಂತರಿಸಬೇಕು ಇಲ್ಲವಾದಲ್ಲಿ ರೈತರಪರವಾಗಿ ಭೂಮಿ ಹೋರಾಟವನ್ನು ರಾಜ್ಯಾದ್ಯಾಂತ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಖಂಡ ಅಪ್ಪಾಸಾಹೇಬ ಯರನಾಳ, ಭೀ. ಭಗವಾನ ರೆಡ್ಡಿ ಮಾತನಾಡಿದರು.
ಬೆಳಗಾವಿ ವಿಭಾಗೀಯ ಸಂಚಾಲಕ ಸಂಜು ವೈ. ಕಂಬಾಗಿ, ಜಿಲ್ಲಾ ಸಂಚಾಲಕ ಶಿವು ಮೇಲಿನಮನಿ, ಮಹಿಳಾ ಒಕ್ಕೂಟದ ಸಂಚಾಲಕಿ ಸವಿತಾ ವಗ್ಗರ, ಸುನಂದಾ ದೊಡಮನಿ, ಯಲ್ಲಪ್ಪ ಕಾಂಬಳೆ, ಸಂತೋಷ ಭಾಸ್ಕರ, ನಕುಶಾ ಕಾಂಬಳೆ, ಹುಚ್ಚಪ್ಪ ಲೋಕುರ, ಸಾಯಬಣ್ಣ ದಳಪತಿ, ಗೋವಿಂದ ದೊಡಮನಿ, ವಿಶ್ವಾಸ ಕಾಂಬಳೆ, ವಿಠ್ಠಲ ಕಡೇಮನಿ, ರಾಜು ಮೇತ್ರಿ, ವಿಜಯಕುಮಾರ ಅರಕೇರಿ, ರಾಯಪ್ಪ ಕನ್ನೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 