ಮುಂಗಾರು ಹಂಗಾಮಿನ ಹಾನಿಗೊಳಗಾದ ತೊಗರಿ ಬೆಳೆ ಬೇಕಾಬಿಟ್ಟಿ ಸಮೀಕ್ಷೆ ವಿರೋಧಿಸಿ ಮನವಿ
Appeal against survey on damaged togari crop during monsoon season
ವಿಜಯಪುರ 30: ಮುಂಗಾರು ಹಂಗಾಮಿನ ಹಾನಿಗೊಳಗಾದ ತೊಗರಿ ಬೆಳೆ ಬೆಳೆಯನ್ನು ಬೇಕಾಬಿಟ್ಟಿ ಸಮೀಕ್ಷೆ ಮಾಡುತ್ತಿರುವುದನ್ನು ವಿರೋಧಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ನವ ನಿರ್ಮಾಣ ಸೇನೆ ಜಂಟಿಯಾಗಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಅತಿಯಾದ ಮಳೆಯಿಂದ ಜಿಲ್ಲೆಯಾದ್ಯಂತ ಶೆ. 90 ರಷ್ಟು ಹಾಳಾಗಿದ್ದು ಹಾಳಾದ ತೊಗರಿ ಬೆಳೆಗಳನ್ನು ವೀಕ್ಷಣೆ ಮಾಡಿ ಹಾಳಾದ ತೊಗರಿ ಬೆಳೆಯ ಸ್ಥಿತಿಗತಿ ಕುರಿತು ವಿಮಾ ಕಂಪನಿಯವರು ರೈತರ ಜಮೀನುಗಳಿಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದಾರೆ. ಆದರೆ ಸರಿಯಾದ ರೀತಿಯಲ್ಲಿ ಜಿಪಿಎಸ್ ಮಾಡುತ್ತಿಲ್ಲ. ಮತ್ತು ಮಳೆಯಿಂದ ಹಾನಿಗೊಳಗಾದ ಜಮೀನುಗಳ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ದಾಖಲು ಮಾಡಿಕೊಳ್ಳುತ್ತಿಲ್ಲ. ಕೇವಲ ಶೇಕಡಾವಾರು ದಾಖಲು ಮಾಡಿಕೊಳ್ಳುತ್ತಿದ್ದಾರೆ ಮತ್ತು ರೈತರಿಂದ ಖಾಲಿ ಫಾರ‌್ಮದಲ್ಲಿ ಸಹಿ ಪಡದುಕೊಳ್ಳುತ್ತಿದ್ದಾರೆ. ಅದನ್ನು ನಂತರ ತಮ್ಮ ಮನಸ್ಸಿಗೆ ಬಂದಂತೆ ಭರ್ತಿ ಮಾಡುತ್ತಾರೆ. ಇದೊಂದು ರೀತಿ ವಿಮಾ ಕಂಪನಿಯವರು ರೈತರ ಕಣ್ಣಿಗೆ ಮಣ್ಣೆರೆಚುವ ಹುನ್ನಾರ ನಡೆಸುತ್ತಿದ್ದಾರೆ. ಆದ್ದರಿಂದ ಈ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳು ಕೂಡಾ ಈ ರೀತಿ ರೈತರಿಗೆ ಮೋಸವಾಗುವುದನ್ನು ತಡೆಯಲು ಮುಂದಾಗುತ್ತಿಲ್ಲ. ಕಾರಣ ಜಿಲ್ಲಾಡಳಿತವೆ ಖುದ್ದಾಗಿ ಸಮೀಕ್ಷೆ ಮಾಡಿ ಸೂಕ್ತ ವರದಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಶೇಷರಾವ ಮಾನೆ, ಕೆ.ಕೆ.ಬನ್ನಟ್ಟಿ, ರೈತರಾದ ರಾಮನಗೌಡ ಹಾದಿಮನಿ, ಬಸವರಾಜ ಮಸರಕಲ್ಲ, ಬಸಪ್ಪ ತೋಟದ, ಗುರುರಾಜ ಪಂಚಾಳ, ಡಾ. ಎನ್.ಐ.ಪಾಟೀಲ, ಎಂ.ವಾಲೀಕಾರ, ಎಂ.ಎಂ.ಖಲಾಸಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 