ಅಪ್ಪಣ್ಣನವರು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬ: ಎಂ ವ್ಹಿ ಗುಂಡಪ್ಪಗೋಳ

ಅಪ್ಪಣ್ಣನವರು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬ: ಎಂ ವ್ಹಿ ಗುಂಡಪ್ಪಗೋಳ Appanna was one of the pioneers of social revolution in the 12th century: M V Gundappagola

ಯರಗಟ್ಟಿ: 10 :  ಶರಣ ಹಡಪದ ಅಪ್ಪಣ್ಣನವರು ಜಾತಿ, ಧರ್ಮ, ವರ್ಣ ಹಾಗೂ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ತಹಶೀಲ್ದಾರ ಎಂ ವ್ಹಿ ಗುಂಡಪ್ಪಗೋಳ ಹೇಳಿದರು.ಗುರುವಾರ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

ಅಪ್ಪಣ್ಣನವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು. 

ಹಡಪದ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ ಮಾತನಾಡಿ, ಸರ್ಕಾರ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರುವವರು ಯಾರೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿಲ್ಲದ ಕಾರಣ ಸರ್ಕಾರದ ಸೌಲಭ್ಯ ಸಿಕ್ಕಿಲ್ಲ ಎಂದರು.ಕಾರ್ಯದರ್ಶಿ ಬಾಲಕೃಷ್ಣ ಹಡಪದ ಮಾತನಾಡಿ, ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯಿಂದ ನಮ್ಮ ಸಮಾಜಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.ಈ ವೇಳೆ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಉಪ ತಹಶೀಲ್ದಾರ ಎಸ್‌. ಬಿ. ಕುಲಕರ್ಣಿ, ಪಶು ವೈದ್ಯಾಧಿಕಾರಿ ಎಂ ವ್ಹಿ ಪಾಟೀಲ, ಆರೋಗ್ಯ ಇಲಾಖೆಯ ಮಂಜುನಾಥ ಸಿಂಗನ್ನವರ, ಸಿದ್ದಯ್ಯ ಕರ್ಜಗಿಮಠ, ಶಂಕರ ನಾವಿ, ಸಂಗಪ್ಪ ಹಡಪದ, ಈರಣ್ಣ ಹಡಪದ, ಮಂಜು ನಾವಿ, ಅಪ್ಪಣ್ಣ ನಾವಿ, ಜಗ್ಗು ನಾವಿ, ತುಕಾರಾಂ ನಾವಿ, ಚಿದಾನಂದ ಉಪ್ಪಿನ, ಸೋಮು ರೈನಾಪೂರ, ಮಹಾದೇವ ನಾವಿ, ಮುತ್ತು ಹಡಪದ, ಪಾಂಡು ರೈನಾಪೂರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.10 ಯರಗಟ್ಟಿ 01ಪೋಟೋ ಶೀರ್ಷಿಕೆಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಮಾಡಲಾಯಿತು.