ಗಣತಿ ಕಾರ್ಯಕ್ಕೆ ಮೊದಲು ದಿನವೇ ಕೈಕೊಟ್ಟ ಆ್ಯಪ್ ಸರ್ವರ್ ಸಮಸ್ಯೆ
App server issue that occurred the day before the census
ಹೂವಿನ ಹಡಗಲಿ 23: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೋಮವಾರ ಆರಂಭವಾದ ಮೊದಲ ದಿನವೇ ಸಮೀಕ್ಷೆ ಗೆ ರೂಪಿಸಿದ್ದ ಆ್ಯಪ್ ನ ತಾಂತ್ರಿಕ ದೋಷ ಮತ್ತು ಸರ್ವರ್ ಸಮಸ್ಯೆ ಎದುರಾಯಿತು. ಸಮೀಕ್ಷೆ 2025 ಗಣತಿ ಕಾರ್ಯ ತಹಸಿಲ್ದಾರ ಜಿ ಸಂತೋಷ್ ಕುಮಾರ್ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿದರು.
ಪಟ್ಟಣದ 23 ನೇ ಡಿವಿಜನ್ ಹಳ್ಳದ ರಸ್ತೆಯಲ್ಲಿ ಊಳಿಗದ ಹನುಮೇಶ ಇವರ ಕುಟುಂಬ ಗಣತಿ ಮಾಡುವುದರ ಮೂಲಕ ಚಾಲನೆಯನ್ನು ನೀಡಿದರು. ಸಮೀಕ್ಷೆಗೆ ನಿಖರವಾದ ಮಾಹಿತಿ ಕುಟುಂಬದವರು ನೀಡಿ ಸಹಕರಿಸಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಪೂಜಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಧಿಕಾರಿ ರಮೇಶ್ ,ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೊಟ್ರಗೌಡ ಅಯ್ಯನಗೌಡ್ರ, ಗಣತಿದಾರ ಗುರುಬಸವನಗೌಡ, ಶಿಕ್ಷಕ ಪಕೀರ ಸಾಬ್ ಇದ್ದರು. ಹೂವಿನ ಹಡಗಲಿ ತಾಲೂಕಿನಲ್ಲಿ ಒಟ್ಟು 407 ಗಣತಿ ಬ್ಲಾಕ್ ಗಳಿದ್ದು, 407 ಗಣತಿದಾರರು ಮತ್ತು 35 ಮೇಲ್ವಿಚಾರಕರು 9 ಜನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ.ಸೆಪ್ಟೆಂಬರ್ 22.9. 25 ರಿಂದ 07.09.25 ರವರೆಗೆ ಗಣತಿ ಕಾರ್ಯ ನಡೆಯುತ್ತದೆ ಎಂದು ತಹಶೀಲ್ದಾರ್ ಜಿ ಸಂತೋಷ್ ಕುಮಾರ್ ತಿಳಿಸಿದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 