ಹತ್ತಿಯಲ್ಲಿ ಸಸ್ಯ ಹೇನು ಬಾಧೆ: ಆರಂಭಿಕ ಹಂತದಲ್ಲೇ ನಿಯಂತ್ರಿಸಿ
Aphid infestation in cotton: Control at the early stage
ಆಲಮೇಲ 05: ಈ ವರ್ಷದ ಮುಂಗಾರು ಹಂಗಾಮು ರೈತರಿಗೆ ಆಶಾದಾಯಕವಾಗಿಲ್ಲದಿದ್ದರೂ ಸಹ ರೈತರು ಬಿತ್ತನೆ ಕೈಗೊಂಡಿದ್ದಾರೆ. ಜೂನ್ ತಿಂಗಳ ಮಳೆಯ ಕೊರತೆ ಹೊರತಾಗಿಯೂ ಸಹ ಜುಲೈ ತಿಂಗಳಿನ ಮಳೆಯು ರೈತನಿಗೆ ಅನುಕೂಲವಾಗಿತ್ತು ಆದರೆ ಈ ಹವಾಮಾನ ಅನುಕೂಲದ ಜೊತೆಗೆ ಹತ್ತಿಯಲ್ಲಿ ಸಸ್ಯ ಹೇನಿನ ಭಾದೆ ಹೆಚ್ಚಾಗುತ್ತಿದೆ. ಹತ್ತಿ ಬೆಳೆಯಲ್ಲಿ ರಸ ಹೀರುವ ಕೀಟಗಳ ಪೈಕಿ ಸಸ್ಯ ಹೇನು ಪ್ರಮುಖ ಕೀಟವಾಗಿದೆ. ಹತ್ತಿ ಬೆಳೆಯ ಆರಂಭಿಕ ಹಂತದಿಂದಲೂ ಕಂಡುಬರುವ ಈ ಕೀಟವು ಅನುಕೂಲಕರ ಹವಾಮಾನ ಪರಿಸ್ಥಿತಿಯಲ್ಲಿ ತ್ವರಿತವಾಗಿ ವೃದ್ಧಿಯಾಗುತ್ತದೆ. ಸಸ್ಯ ಹೇನು ಗಿಡದ ರಸವನ್ನು ಹೀರುವುದರಿಂದ ಎಲೆಗಳ ಬೆಳವಣಿಗೆ ಕುಂಠಿತವಾಗುವುದಲ್ಲದೆ, ತೀವ್ರ ಬಾಧೆಯ ಸಂದರ್ಭದಲ್ಲಿ ಹತ್ತಿ ಬೆಳೆಯ ಇಳುವರಿಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ರೈತರು ಆರಂಭಿಕ ಹಂತದಲ್ಲಿಯೇ ಸಸ್ಯ ಹೇನಿನ ಬಾಧೆಯನ್ನು ಗುರುತಿಸಿ ಸೂಕ್ತ ನಿರ್ವಹಣಾ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಆಲಮೇಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾದ ಅನೀಲದೇವ ದಶವಂತ ಅವರು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 