ಚೀನಾವನ್ನು ವಿಭಜಿಸುವ ಯಾವುದೇ ಪ್ರಯತ್ನ ವ್ಯರ್ಥ : ಕ್ಸಿ

ಕಠ್ಮಂಡು, ಅಕ್ಟೋಬರ್ 13:     ಚೀನಾವನ್ನು ವಿಭಜಿಸಲು ಪ್ರಯತ್ನಿಸುವವರನ್ನು ಹತ್ತಿಕ್ಕಲಾಗುವುದು ಮತ್ತು ಅಂತಹ ಪ್ರಯತ್ನಗಳನ್ನು ಬೆಂಬಲಿಸುವ ಯಾವುದೇ ಬಾಹ್ಯ ಶಕ್ತಿಗಳನ್ನು ಚೀನಾದ ಜನರು ಹಗಲುಗನಸಿನವರೆಂದು ಪರಿಗಣಿಸುತ್ತಾರೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭಾನುವಾರ ಹೇಳಿದರು. 

ನೇಪಾಳಿ ಪ್ರಧಾನಿ ಕೆ.ಪಿ. ಶರ್ಮಾ ಜೊತೆ ಕ್ಸಿ ಮಾತುಕತೆ ನಡೆಸಿದರು. ತನ್ನ ದೇಶವು ಚೀನಾವನ್ನು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವಲ್ಲಿ ದೃಢವಾಗಿ ಬೆಂಬಲಿಸುತ್ತದೆ ಮತ್ತು ಒಂದು ಚೀನಾ ನೀತಿಯನ್ನು ಎತ್ತಿಹಿಡಿಯುವಲ್ಲಿ ದೃಢವಾಗಿ ನಿಂತಿದೆ ಎಂದು ಶರ್ಮಾ ಒಲಿ ಹೇಳಿದರು. 

ಚೀನಾ ವಿರುದ್ಧದ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ತನ್ನ ಯಾವುದೇ ಭೂಪ್ರದೇಶವನ್ನು ಬಳಸಲು ನೇಪಾಳ ಎಂದಿಗೂ ಅನುಮತಿಸುವುದಿಲ್ಲ ಎಂದು ಶರ್ಮಾ ಭರವಸೆಯಿತ್ತರು. 

ಒಂದು ಚೀನಾ ನೀತಿಯನ್ನು ದೃಢವಾಗಿ ಪಾಲಿಸಿದ್ದಕ್ಕಾಗಿ ಮತ್ತು ಚೀನಾದ ಪ್ರಮುಖ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಚೀನಾಕ್ಕೆ ಅದು ನೀಡಿದ ದೃಢವಾದ ಬೆಂಬಲಕ್ಕಾಗಿ ನೇಪಾಳವನ್ನು ತನ್ನ ದೇಶವು ಮೆಚ್ಚುತ್ತದೆ ಎಂದು ಕ್ಸಿ ಒತ್ತಿ ಹೇಳಿದರು. 

ನೇಪಾಳ ಮತ್ತು ಚೀನಾವನ್ನು ನಿಜವಾದ ಸ್ನೇಹಿತರು ಮತ್ತು ಪಾಲುದಾರರೆಂದು ಕರೆದ ಒಲಿ, ಉಭಯ ದೇಶಗಳು ಯಾವಾಗಲೂ ಪರಸ್ಪರ ಗೌರವಿಸುತ್ತಿವೆ, ಪರಸ್ಪರ ಬೆಂಬಲಿಸುತ್ತಿವೆ ಮತ್ತು ಇನ್ನೊಬ್ಬರ ಆಂತರಿಕ ವ್ಯವಹಾರಗಳಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ, ಅವರ ಸಾಂಪ್ರದಾಯಿಕ ಸ್ನೇಹವನ್ನು ಮುರಿಯಲಾಗದು ಎಂದು ಹೇಳಿದರು. 

ಬಾಹ್ಯ ಸನ್ನಿವೇಶಗಳು ಎಷ್ಟೇ ಬದಲಾದರೂ, ಚೀನಾದ ಬಗ್ಗೆ ನೇಪಾಳದ ಸ್ನೇಹಪರ ನೀತಿ ಮತ್ತು ಸ್ನೇಹ ಸಂಬಂಧಗಳ ಅಭಿವೃದ್ಧಿಯು ಬದಲಾಗದೆ ಉಳಿಯುತ್ತದೆ ಎಂದು ಒಲಿ ಹೇಳಿದರು.