ದೇಶ ವಿರೋಧಿಗಳಿಗೆ ಗುಂಡಿಕ್ಕಬೇಕು ; ಸಿ.ಟಿ.ರವಿ

ಬೆಂಗಳೂರು.ಜ ೨೯ :     ದೇಶ ವಿರೋಧಿಗಳಿಗೆ   ಗುಂಡಿಕ್ಕಬೇಕೆ  ಹೊರತು  ಅವರಿಗೆ  ಬಿರಿಯಾನಿ  ಒದಗಿಸಬಾರದು ಎಂದು  ಹೇಳುವ  ಮೂಲಕ   ರಾಜ್ಯ ಪ್ರವಾಸೋಧ್ಯಮ ಸಚಿವ  ಸಿ.ಟಿ. ರವಿ,   ಸಿಎಎ  ವಿರೋಧಿ ಹೋರಾಟಗಾರರ ವಿರುದ್ದ   ದೆಹಲಿ ಚುನಾವಣಾ ಸಭೆಯಲ್ಲಿ  ಗುಂಪಿನಿಂದ “ದೇಶದ್ರೋಹಿಗಳಿಗೆ ಗುಂಡಿಕ್ಕಿ”   ಎಂದು ಘೋಷಣೆ  ಕೂಗಿಸಿ ವಿವಾದಕ್ಕೀಡಾಗಿರುವ  ಕೇಂದ್ರ   ಹಣಕಾಸು  ರಾಜ್ಯ  ಸಚಿವ ಅನುರಾಗ್ ಠಾಕೂರ್  ಅವರಿಗೆ  ಬೆಂಬಲ ವ್ಯಕ್ತಪಡಿಸಿ    ಟ್ವೀಟ್ ಮಾಡಿದ್ದಾರೆ.

ದೇಶದ್ರೋಹಿಗಳ ವಿರುದ್ದ  ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್  ವಿರುದ್ಧ  ದಾಳಿ ನಡೆಸುತ್ತಿರುವವರು,   ಅಜ್ಮಲ್ ಕಸಬ್, ಯಾಕೂಬ್ ಮೆಮೂನ್ ಗೆ   ಮರಣ ದಂಡನೆಯನ್ನು ವಿರೋಧಿಸಿದ್ದವರು.  ತುಕ್ಡೆ ತುಕ್ಡೆ ಗ್ಯಾಂಗ್  ಬೆಂಬಲಿಸಿದ್ದರು, ಸಿಎಎ  ವಿರುದ್ದ ಸುಳ್ಳು ಹಬ್ಬಿಸುತ್ತಿರುವವರು.  ಹಾಗಾಗಿ    ಅಂತಹ  ದೇಶ ದ್ರೋಹಿಗಳ ಮೇಲೆ   ಗುಂಡು ಹಾರಿಸಬೇಕು,   ಬರಿಯಾನಿ ನೀಡಬೇಕಾಗಿಲ್ಲ.    ನಾನು  ಅನುರಾಗ್ ಠಾಕೂರ್  ಅವರ ಪರ ಬೆಂಬಲಕ್ಕೆ  ನಿಲ್ಲುತ್ತೇನೆ  ಎಂದು  ಸಚಿವ  ಸಿ. ಟಿ.  ರವಿ  ಟ್ವೀಟ್ ನಲ್ಲಿ ಹೇಳಿದ್ದಾರೆ.

ಪೌರತ್ವ  ತಿದ್ದುಪಡಿ ಕಾಯ್ದೆ  ವಿರೋಧಿಗಳ    ಬಗ್ಗೆ     ಸಚಿವ ರವಿ ಮಾತ್ರ    ರಾಜ್ಯದಲ್ಲಿ   ಹೇಳಿಕೆ ನೀಡುತ್ತಿಲ್ಲ,  ರಾಜ್ಯದ  ಹಲವು  ಪ್ರಮುಖ  ಸಚಿವರು, ಶಾಸಕರು, ಬಿಜೆಪಿ ನಾಯಕರಿಂದಲೂ    ವಿವಾದಾತ್ಮಕ  ಹೇಳಿಕೆ   ನೀಡುತ್ತಿದ್ದಾರೆ.

ಪಕ್ಷಕ್ಕೆ ಇಂತಹ  ಇರುಸು ಮುರುಸಿನ ಹೇಳಿಕೆಗಳ    ಹಿನ್ನಲೆಯಲ್ಲಿ  ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್,  ಪಕ್ಷದ  ಸಚಿವರು ಹಾಗೂ ಶಾಸಕರಿಗೆ    ವಿವಾದಾತ್ಮಕ ಹೇಳಿಕೆ  ನೀಡುವುದನ್ನು  ನಿಲ್ಲಿಸಿ,  ಸಂಯಮ ವಹಿಸಿ,  ತಮ್ಮ ಕ್ಷೇತ್ರ ಹಾಗೂ ಇಲಾಖೆಗಳ ಕಾರ್ಯಗಳ ಕಡೆ ಗಮನ ಹರಿಸಬೇಕು ಎಂದು ಅಂತರಿಕ ಸಭೆಗಳಲ್ಲಿ  ಸೂಚಿಸಿದ್ದಾರೆ ಎಂದು ಹೇಳಲಾಗಿದೆ.