ಬೆಳಗಾವಿಯಲ್ಲಿ ಮತ್ತೊಂದು ಹೇಯ ಕೃತ್ಯ : ಮಹಿಳೆ, ಮಗಳ ಬಟ್ಟೆ ಬಿಚ್ವಿ ಮಾರಣಾಂತಿಕ ಹಲ್ಲೆ
ಬೆಳಗಾವಿ : ಮಹಿಳೆಯನ್ನು ನಗ್ನ ಮಾಡಿ ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ ಹಾಕಿ ರಾತ್ರಿ ಹಲ್ಲೆ ಮಾಡಿದ ವಂಟಮೂರಿ ಘಟನೆ ಮಾಸುವ ಮುನ್ನ ಬೆಳಗಾವಿ ಯಲ್ಲಿ ಮತ್ತೊಂದು ಹೇಯ್ಯ ಕೃತ್ಯ ವರದಿಯಾಗಿದೆ.
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಡ್ಡರವಾಡಿಯಲ್ಲಿ ಈ ಘಟನೆ ನಡಿದಿದ್ದು, ವಿವಾಹಿತ ಮಹಿಳೆಯೋರ್ವಳು ಗಂಡನ ಮನೆಯಲ್ಲಿ ಕಿರುಕುಳದಿಂದ ಬೇಸತ್ತು ತನ್ನ ತವರೂರಾದ ವಡ್ಡರವಾಡಿಯ ತಾಯಿಯ ಮನೆಯಲ್ಲಿ ವಾಸವಾಗಿದ್ದಾಳೆ.
ಅಲ್ಲಿ ಪಕ್ಕದ ಮನೆಯವರು ತನ್ನ ಹಾಗೂ ತನ್ನ ತಾಯಿಯ ಮೈಮೇಲಿನ ಬಟ್ಟೆ ಬಿಚ್ವಿ ಮಾರಣಾಂತಿಕ ವಾಗಿ ಹಲ್ಲೆ ಮಾಡಿದ್ದಾರೆ ಎಂದು ನೊಂದ ಮಹಿಳೆ ಮಾಳಮಾರುತಿ ಪೊಲೀರಿಗೆ ದೂರು ನೀಡಿದ್ದಾಳೆ ಎಂದು ತಿಳಿದು ಬಂದಿದೆ.