2018 ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಕಟ

ಬೆಂಗಳೂರು, ಜ.10, 2018 ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸಿದರು. ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ಆಯುಕ್ತ ಸಿದ್ದರಾಮಪ್ಪ, ನಿರ್ಮಾಪಕ ಬಸಂತಕುಮಾರ್ ಪಾಟೀಲ್, ಮುಖ್ಯಮಂತ್ರಿಗಳ ಸಲಹೆಗಾರ ಲಕ್ಷ್ಮೀನಾರಾಯಣ , ನಿರ್ದೇಶಕ ಜೋಸೈಮನ್ ಉಪಸ್ಥಿತರಿದ್ದರು.

ಜೀವಮಾನಸಾಧನೆ ಪ್ರಶಸ್ತಿ

ಡಾ.ರಾಜಕುಮಾರ್ ಪ್ರಶಸ್ತಿ-ಜೆ.ಕೆ.ಶ್ರೀನಿವಾಸಮೂರ್ತಿ.

ಪುಟ್ಟಣ್ಣ ಕಣಗಾಲ್ ಪ್ರಶಸ್ತಿ-ಪಿ.ಶೇಷಾದ್ರಿ.

ಡಾ.ವಿಷ್ಣುವರ್ಧನ್ ಪ್ರಶಸ್ತಿ-ಬಿ.ಎಸ್.ಬಸವರಾಜು

ನಿರ್ದೇಶಕ ಜೋಸೈಮನ್ ಅಧ್ಯಕ್ಷತೆಯ ಸಮಿತಿ 152 ಚಿತ್ರಗಳನ್ನು ವೀಕ್ಷಿಸಿ ಪ್ರಶಸ್ತಿಗಳನ್ನು ಶಿಫಾರಸ್ಸು ಮಾಡಿದೆ. ಜೀವಮಾನ ಸಾಧನೆ ಪ್ರಶಸ್ತಿಯನ್ನು ಬಸಂತಕುಮಾರ್ ಪಾಟೀಲ್ ಅಧ್ಯಕ್ಷತೆ ಸಮಿತಿ ಆಯ್ಕೆ ಮಾಡಿದೆ.

ಅತ್ಯುತ್ತಮ ನಟಿ-ಮೇಘನಾರಾಜ್(ಇರುವುದೆಲ್ಲವ ಬಿಟ್ಟು)

ಅತ್ಯುತ್ತಮ ಪೋಷಕ ನಟ-ಬಾಲಾಜಿ ಮನೋಹರ್(ಚೂರಿಕಟ್ಟೆ)

ಅತ್ಯುತ್ತಮ ಪೋಷಕ ನಟಿ-ವೀಣಾ ಸುಂದರ್(ಆಕರಾಳ ರಾತ್ರಿ)

ಅತ್ಯುತ್ತಮ ಕಥೆ- ಹರೀಶ್ ಎಸ್(ನಾಯಿಗೆರೆ)

ಅತ್ಯುತ್ತಮ‌ ಚಿತ್ರಕಥೆ- ಪಿ.ಶೇಷಾದ್ರಿ(ಮೂಕಜ್ಜಿಯ ಕನಸು)

ಅತ್ಯುತ್ತಮ ಸಂಭಾಷಣೆ-ಶಿರೀಷಾ ಜೋಷಿ(ಸಾವಿತ್ರಿಬಾಯಿ ಪುಲೆ)

ಅತ್ಯುತ್ತಮ ಛಾಯಾಗ್ರಹಣ- ನವೀನ್ ಕುಮಾರ್ .ಐ(ಅಮ್ಮಚ್ಚಿಯೆಂಬ ನೆನಪು)

ಅತ್ಯುತ್ತಮ ಸಂಗೀತ ನಿರ್ದೇಶನ- ರವಿಬಸ್ರೂರ್(ಕೆಜಿಎಫ್)

ಅತ್ಯುತ್ತಮ ಸಂಕಲನ- ಸುರೇಶ್ ಆರ್ಮುಗಂ( ತ್ರಾಟಕ)

ಅತ್ಯುತ್ತಮ ಬಾಲನಟ- ಮಾಸ್ಟರ್ ಆರೆನ್( ರಾಮನ ಸವಾರಿ)

ಅತ್ಯುತ್ತಮ ಬಾಲನಟಿ- ಬೇಬಿ ಸಿಂಚನಾ( ಅಂದವಾದ).

ಅತ್ಯುತ್ತಮ ಕಲಾ ನಿರ್ದೇಶನ- ಶಿವಕುಮಾರ್ ಜೆ(ಕೆಜಿಎಫ್)

ಅತ್ಯುತ್ ಗೀತರಚನೆ- ಬರಗೂರು ರಾಮಚಂದ್ರಪ್ಪ(ಬಯಲಾಟದ ಭೀಮಣ್ಣ)

ಅತ್ಯುತ್ತಮ ಹಿನ್ನೆಲೆ ಗಾಯಕ- ಸಿದ್ದಾರ್ಥ ಬೆಳ್ಮುಣ್ಣು(ಸಂತಕವಿ ಕನಕದಾಸರ ರಾಮಧಾನ್ಯ)

ಅತ್ಯುತ್ತಮ ಹಿನ್ನೆಲೆ ಗಾಯಕಿ- ಕಲಾವತಿ ದಯಾನಂದ(ದೇಯಿ ಬೈದೇತಿ)

ತೀರ್ಪುಗಾರರ ವಿಶೇಷ ಪ್ರಶಸ್ತಿ- ಅನಂತರಾಯಪ್ಪ(ಸಮಾನತೆಯ ಕಡೆಗೆ)

ಅತ್ಯುತ್ತಮ ನಿರ್ಮಾಣ ನಿರ್ವಾಹಕ- ವಿ.ಥಾಮಸ್(ಅಬ್ಬೆ ತುಮಕೂರು ಸಿದ್ದಪುರುಷ ವಿಶ್ವಾರಾಧ್ಯರು)

ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿ-"ಆ ಕರಾಳ ರಾತ್ರಿ"

ಎರಡನೆ ಅತ್ಯುತ್ತಮ ಚಿತ್ರ-ರಾಮನ ಸವಾರಿ.

ಮೂರನೆ ಅತ್ಯುತ್ತಮ ಚಿತ್ರ-ಒಂದಲ್ಲಾ ಎರಡಲ್ಲಾ

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ-ಸಂತಕವಿ ಕನಕದಾಸರ ರಾಮಧಾನ್ಯ

ಅತ್ಯುತ್ತಮ ಮನರಂಜನಾಚಿತ್ರ-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು.

ಅತ್ಯುತ್ತಮ ಮಕ್ಕಳ ಚಿತ್ರ-ಹೂವುಬಳ್ಳಿ

ನಿರ್ದೇಶಕರ ಪ್ರಥಮ ನಿರ್ದೆಶನದ ಅತ್ಯುತ್ತಮ ಚಿತ್ರ-ಬೆಳಕಿನ‌ಕನ್ನಡಿ

ಅತ್ಯುತ್ತಮ‌ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ-ದೇಯಿ ಬೈದೇತಿ(ತುಳು)