"ಹಸಿವು ಮುಕ್ತ ಕರ್ನಾಟಕದ ಸಂಕಲ್ಪ ಅನ್ನಭಾಗ್ಯದಿಂದ ಸಾಕಾರ"
Annabhagya Anugraha: The path to a prosperous, hunger-free society
ಲೋಕದರ್ಶನ ವರದಿ
ಅನ್ನಭಾಗ್ಯ ಅನುಗ್ರಹ ಹಸಿವಿಲ್ಲದ ಸಮಾಜದ ಸುಭಿಕ್ಷ ದಾರಿಹೊರಹ
ಗದಗ 17 : ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಜನಪರ ಯೋಜನೆಯಾಗಿ ಗುರುತಿಸಿಕೊಂಡಿರುವ ಅನ್ನಭಾಗ್ಯ ಯೋಜನೆ, ಆಹಾರ ಭದ್ರತೆಯನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿ ಜಾರಿಗೆ ತಂದಿರುವ ಐತಿಹಾಸಿಕ ಕಾರ್ಯಕ್ರಮವಾಗಿದೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿ ಹಸಿವು ಮತ್ತು ಅಪೌಷ್ಟಿಕತೆಯನ್ನು ನಿವಾರಿಸುವ ಉದ್ದೇಶದಿಂದ ಆರಂಭವಾದ ಈ ಯೋಜನೆ ಇಂದು ರಾಜ್ಯದ ಲಕ್ಷಾಂತರ ಜನರ ಬದುಕಿಗೆ ಆಶಾಕಿರಣವಾಗಿದೆ.
ಅನ್ನಭಾಗ್ಯ ಯೋಜನೆಯ ಪ್ರಮುಖ ಉದ್ದೇಶ ಬಡತನ ರೇಖೆ ಕೆಳಗಿನ ಕುಟುಂಬಗಳಿಗೆ ನಿರಂತರ ಆಹಾರ ಭದ್ರತೆ ಒದಗಿಸುವುದು. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಅರ್ಹ ಕುಟುಂಬಗಳಿಗೆ ಉಚಿತ ಅಕ್ಕಿ ಹಾಗೂ ಧಾನ್ಯ ವಿತರಣೆ ಮಾಡಲಾಗುತ್ತಿದ್ದು, ಇದು ದಿನನಿತ್ಯದ ಬದುಕಿನಲ್ಲಿ ದೊಡ್ಡ ಆಧಾರವಾಗಿದೆ.
ಆಹಾರಕ್ಕಾಗಿ ಖರ್ಚಾಗುವ ಮೊತ್ತ ಕಡಿಮೆಯಾಗುವುದರಿಂದ ಕುಟುಂಬಗಳ ಆರ್ಥಿಕ ಒತ್ತಡ ತಗ್ಗಿ, ಉಳಿದ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸುವ ಅವಕಾಶ ಸಿಕ್ಕಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕಾರ್ಮಿಕರು, ದಿನಗೂಲಿ ಅವಲಂಬಿತ ಕುಟುಂಬಗಳು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಅನ್ನಭಾಗ್ಯ ಯೋಜನೆ ನಿಜವಾದ ಜೀವಾಳವಾಗಿದೆ. ಹಂಗಾಮಿನ ಕೆಲಸದ ಅನಿಶ್ಚಿತತೆಯ ನಡುವೆ ಕನಿಷ್ಠ ಆಹಾರ ಭದ್ರತೆ ದೊರಕುವುದು ಕುಟುಂಬಗಳಿಗೆ ಆತ್ಮವಿಶ್ವಾಸ ನೀಡಿದೆ.
ನಗರ ಪ್ರದೇಶಗಳಲ್ಲಿಯೂ ಕಡಿಮೆ ಆದಾಯದ ಜನರಿಗೆ ಈ ಯೋಜನೆ ಬದುಕಿನ ಗುಣಮಟ್ಟವನ್ನು ಸುಧಾರಿಸಿದೆ. ಪೌಷ್ಟಿಕ ಆಹಾರದ ಲಭ್ಯತೆ ಹೆಚ್ಚಿದಂತೆ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯ ಮೇಲೂ ಧನಾತ್ಮಕ ಪರಿಣಾಮ ಕಂಡುಬರುತ್ತಿದೆ.
ಯೋಜನೆಯ ಜಾರಿಗೆ ಸರ್ಕಾರ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುತ್ತಿದೆ. ಡಿಜಿಟಲ್ ರೇಷನ್ ಕಾರ್ಡ್, ಆಧಾರ್ ಲಿಂಕೇಜ್ ಹಾಗೂ ಆನ್‌ಲೈನ್ ಮೇಲ್ವಿಚಾರಣೆ ವ್ಯವಸ್ಥೆಯಿಂದ ಪಾರದರ್ಶಕತೆ ಹೆಚ್ಚಿದ್ದು, ಅಕ್ರಮಗಳಿಗೆ ಕಡಿವಾಣ ಬಿದ್ದಿದೆ.
ನ್ಯಾಯಬೆಲೆ ಅಂಗಡಿಗಳ ಜಾಲವನ್ನು ಬಲಪಡಿಸುವ ಮೂಲಕ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಧಾನ್ಯ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ನಿರಂತರ ಪರೀಶೀಲನೆ ಮತ್ತು ಸುಧಾರಣೆಗಳಿಂದ ಯೋಜನೆಯ ವಿಶ್ವಾಸಾರ್ಹತೆ ಹೆಚ್ಚುತ್ತಿದೆ.
ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ದೃಷ್ಟಿಯಿಂದ ಅನ್ನಭಾಗ್ಯ ಯೋಜನೆ ಮಹತ್ವದ ಮೈಲಿಗಲ್ಲಾಗಿದೆ. ಹಸಿವು ನಿರ್ಮೂಲನೆ ಮಾಡುವುದು ಕೇವಲ ಕಲ್ಯಾಣ ಕಾರ್ಯಕ್ರಮವಲ್ಲ, ಅದು ಸಮಾನತೆಯ ಸಮಾಜ ನಿರ್ಮಾಣದ ಮೂಲ ಹಂತವಾಗಿದೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಆರೋಗ್ಯ ರಕ್ಷಣೆಗೂ ಈ ಯೋಜನೆ ಪೂರಕವಾಗಿದೆ.
ಒಟ್ಟಿನಲ್ಲಿ ಅನ್ನಭಾಗ್ಯ ಯೋಜನೆ ಹಸಿವಿಲ್ಲದ ಸಮಾಜದ ಕನಸನ್ನು ನನಸಾಗಿಸುವ ದಿಕ್ಕಿನಲ್ಲಿ ಸಾಗುತ್ತಿರುವ ಜನಪರ ಚಳುವಳಿಯಾಗಿದೆ. ಆಹಾರ ಭದ್ರತೆಯ ಮೂಲಕ ಮಾನವೀಯ ಮೌಲ್ಯಗಳನ್ನು ಉಳಿಸಿ, ಸಮಾನತೆ ಮತ್ತು ಸುಭಿಕ್ಷತೆಯ ರಾಜ್ಯ ನಿರ್ಮಾಣಕ್ಕೆ ಈ ಯೋಜನೆ ಬಲವಾದ ಭದ್ರ ಬುನಾದಿ ಹಾಕುತ್ತಿದೆ. ಬಡವರ ಬದುಕಿಗೆ ನೆಮ್ಮದಿ ತುಂಬುತ್ತಿರುವ ಅನ್ನಭಾಗ್ಯ ಯೋಜನೆ ಸರ್ಕಾರದ ಜನಪರ ಆಡಳಿತದ ಜೀವಂತ ಉದಾಹರಣೆಯಾಗಿದೆ.
ಅನ್ನಭಾಗ್ಯ ಯೋಜನೆ ಬಡವರ ಹೊಟ್ಟೆತುಂಬಿಸುವ ಸರ್ಕಾರದ ಮಾನವೀಯ ಬದ್ಧತೆಯ ಸಂಕೇತವಾಗಿದೆ. ಆಹಾರ ಭದ್ರತೆ ಇಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ. ಪ್ರತಿಯೊಬ್ಬ ಅರ್ಹ ಕುಟುಂಬಕ್ಕೂ ಧಾನ್ಯ ತಲುಪಿಸುವುದು ನಮ್ಮ ಸರ್ಕಾರದ ಆದ್ಯತೆ.
-ಎಚ್ ಕೆ ಪಾಟೀಲ
ಗದಗ ಜಿಲ್ಲಾ ಉಸ್ತುವಾರಿ ಸಚಿವರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 