ಲೋಕದರ್ಶನ ವರದಿ
ಕಾರವಾರ 16: ಕಳೆದ 15 ವರ್ಷದಿಂದ ಅನೇಕ ದಲಿತ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು, ಸಂಸದನಾಗಿ ಆಯ್ಕೆಯಾದಲ್ಲಿ ಅರಣ್ಯ ಇಲಾಖೆಯ ಭೂಮಿಯ ಅತಿಕ್ರಮಣದಾರ ರೈತರಿಗೆ ಭೂಮಿ ಹಕ್ಕಿನ ಪಟ್ಟಾ ಕೊಡಿಸಲು ಹೋರಾಡುವುದು ಮೊದಲ ಆದ್ಯತೆ ಎಂದು ಚಿದಾನಂದ ಹರಿಜನ ಹೇಳಿದರು.
ಕಾರವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಮಾಡಿದ ಅವರು ಪಕ್ಷೇತರ ಅಭ್ಯಥರ್ಿಯಾಗಿ ಕೆನರಾ ಲೋಕಸಭಾ ಚುನಾವಣೆಗೆ ಸ್ಪಧರ್ಿಸಿದ್ದೇನೆ. ಕನರ್ಾಟಕ ರಾಜ್ಯ ಅನ್ನದಾತ ರೈತಸಂಘ ಮತ್ತು ಹಸಿರು ಸೇನೆ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದು, ಅದರ ರಾಜ್ಯಾಧ್ಯಕ್ಷನಾಗಿ ಹಲವು ಹೋರಾಟ ಮಾಡುತ್ತಿದ್ದೇನೆ ಎಂದರು.
ಬಡ ಕುಟುಂಬಗಳಿಗೆ ನಿವೇಶನ ಮನೆ ಕೊಡುವುದು, ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ಅನುಷ್ಠಾನ ಮಾಡುವುದು, ಮೀನುಗಾರರ, ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವುದು ನನ್ನ ಆದ್ಯತೆಯಾಗಿದೆ. ಅಲ್ಲದೇ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡುತ್ತೇನೆ ಎಂದರು. ಎಲ್ಲಾ ಕೃಷಿಕರಿಗೆ ನೇಗಿಲನ್ನು ಉಚಿತವಾಗಿ ಹಂಚುದು ಹಾಗೂ ರೈತರ ಸಾಲ ಸಂಪೂರ್ಣ ಮನ್ನಾ ಮಾಡಲು ಹೋರಾಡುವೆ ಎಂದರು. ರಾಜಕೀಯ ಪಕ್ಷಗಳ ನಾಯಕರು ಜನರ ಬೇಡಿಕೆಗಳ ಬಗ್ಗೆ ಮಾತೇ ಆಡುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಲಿದ್ದೇವೆ ಎಂದು ಹೇಳುತ್ತಿಲ್ಲ. ಪರಸ್ಪರರು ತೆಗಳುತ್ತಾ ಕಾಲ ತಳ್ಳಿದ್ದಾರೆ. ಹಾಗಾಗಿ ಮತದಾರರು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯಥರ್ಿಗಳನ್ನು ತಿರಸ್ಕರಿಸಲಿದ್ದಾರೆ. ಪಕ್ಷೇತರ ಅಭ್ಯಥರ್ಿಗೆ ಒಂದು ಛಾನ್ಸ ಕೊಡಲಿದ್ದಾರೆಂದರು.
ನೋಟಾಕ್ಕೆ ಹಾಕುವ ಮತಗಳನ್ನು ನನಗೆ ಹಾಕಲಿ ಎಂದ ಅವರು ಹೊಸವರಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಅರಣ್ಯ ಅತಿಕ್ರಮಣ ಸಕ್ರಮಾತಿ ಹೋರಾಟದಲ್ಲಿ ಮುರುಡೇಶ್ವರದಿಂದ ಕಾರವಾರದತನಕ ಪಾದಯಾತ್ರೆ ಮಾಡುವಾಗ ನಾನು ಇದ್ದೆ. ಅನೇಕ ರೈತ ಸಂಘಟನೆಗಳು ಮಾರಿ ಕೊಂಡಿವೆ. ಅವುಗಳಿಂದ ಬೇಸತ್ತು ಪ್ರತ್ಯೇಕ ರೈತ ಸಂಘಟನೆ ಮಾಡಿದೆ ಎಂದರು.
ಕನರ್ಾಟಕ ರಾಜ್ಯ ಅನ್ನದಾತ ರೈತಸಂಘ ಮತ್ತು ಹಸಿರು ಸೇನೆಯ ಪ್ರಧಾನ ಕಾರ್ಯದಶರ್ಿ ದತ್ತಾತ್ರೇಯ ಅನಂತ ಭಟ್ಟ ಮಾತನಾಡಿ ಬ್ರಿಟಿಷರು ಇದ್ದಾಗ ಜನಸಂಖ್ಯೆ ಆಧರಿಸಿ ಅರಣ್ಯ ಭೂಮಿಯನ್ನು ಕೃಷಿಗೆ ನೀಡಿದ್ದರು. ಅದು 15 ಸಾವಿರ ಎಕರೆ. ನಂತರ ಮೈಸೂರು ರಾಜ್ಯದ ಆಡಳಿತ ಇರುವಾಗ 50 ಸಾವಿರ ಎಕರೆ ಅರಣ್ಯ ಭೂಮಿಯನ್ನು ರೈತರ ಬಳಕೆಗೆ ನೀಡಿದರು. ಆದರೆ ಇವತ್ತು ಉತ್ತರ ಕನ್ನಡದ ಜನಸಂಖ್ಯೆ ಹೆಚ್ಚಿದೆ. ಇದಕ್ಕೆ ಅನುಗುಣವಾಗಿ ಸಕರ್ಾರಗಳು ಕೃಷಿ ಭೂಮಿ ಹೆಚ್ಚಿಸಬೇಕು.
ಅರಣ್ಯ ಅತಿಕ್ರಮಣ ಭೂಮಿಗೆ ಪಟ್ಟಾ ನೀಡಿ ಅದನ್ನು ರೈತರಿಗೆ ನೀಡಿದರೆ ರೈತರು ನೆಮ್ಮದಿಯಿಂದ ಇರುತ್ತಾರೆ. ಎಷ್ಟೋ ಬಡವರಿಗೆ ಇವತ್ತು ಮನೆಯಿಲ್ಲ. ಕೃಷಿ ಮಾಡುವ ಭೂಮಿಗೆ ಪಟ್ಟಾ ಇಲ್ಲ ಎಂದರು. ಆದರೆ ಹಿಂದೆ ಅಧಿಕಾರದಲ್ಲಿದ್ದ ಯುಪಿಎ, ಈಗಿನ ಬಿಜೆಪಿ ನೇತೃತ್ವದ ಎನ್ಡಿಎ ರೈತರಿಗಾಗಿ ಏನು ಮಾಡಲಿಲ್ಲ . 2006ರಲ್ಲಿ ಅರಣ್ಯ ಅತಿಕ್ರಮಣ ಸಕ್ರಮಕ್ಕೆ ಗ್ರೀನ್ ಸಿಗ್ನಲ್ ನೀಡಿ ಕಾನೂನು ರೂಪಿಸಲಾಗಿದೆ. ಆದರೆ ಅದರ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಆಸಕ್ತಿಯಿಲ್ಲ, ಬಡವರಿಗೆ ಸ್ವಾತಂತ್ರ್ಯ ನಂತರ 72 ವರ್ಷದಿಂದ ಅನ್ಯಾಯ ಮಾಡಲಾಗಿದೆ. ಈಗಲೂ ಅಸಮಾನತೆ ಮುಂದುವರಿದಿದೆ ಎಂದು ದತ್ತಾತ್ರೇಯ ಭಟ್ ನೋವು ವ್ಯಕ್ತ ಮಾಡಿದರು. ಹಾಗಾಗಿ ನಾವು ಹೊಸ ಮುಖವನ್ನು ಆರಿಸಿ ತರುತ್ತೇವೆ ಎಂದರು. ಭೀಮಶಿ ವಾಲ್ಮೀಕಿ, ರಾಜು ಕುಂದರಗಿ ಇದ್ದರು.