ಆಂಜನೇಯಸ್ವಾಮಿ ಉತ್ಸವದ ಮೆರವಣಿಗೆ
Anjaneyaswamy Festival procession
ಲೋಕದರ್ಶನ ವರದಿ
ಧಾರವಾಡ 04 : ತಾಲೂಕಿನ ಅಮ್ಮಿನಬಾವಿ ಗ್ರಾಮ ಪಂಚಾಯತಿ ಪಕ್ಕದಲ್ಲಿರುವ ಶ್ರೀವೀರಾಂಜನೇಯಸ್ವಾಮಿ ದೇವಾಯದಲ್ಲಿ ಹಮ್ಮಿಕೊಂಡಿದ್ದ ಹನುಮ ಜಯಂತಿ ಮಹೋತ್ಸವದ ಅಂಗವಾಗಿ ಆಂಜನೇಯಸ್ವಾಮಿ ಉತ್ಸವದ ಮೆರವಣಿಗೆ ಗ್ರಾಮದ ಎಲ್ಲಾ ಪ್ರಮುಖ ಬೀದಿಗಳಲ್ಲಿ ವಿವಿಧ ಜನಪದ ವಾದ್ಯ-ಮೇಳಗಳು ಹಾಗೂ ಮಹಿಳೆಯರ ಕುಂಭಗಳೊಂದಿಗೆ ಗುರುವಾರ ಸಂಭ್ರಮದಿಂದ ಜರುಗಿತು. ಉತ್ಸವದ ಪ್ರಮುಖ ಆಕರ್ಷಣೆಯಾಗಿ ಎಲೆಕ್ಟ್ರಾನಿಕ್ ಚಾಲಿತ ಕೃತಕ ಆನೆ ಮೆರವಣಿಗೆಯ ಮುಂಚೂಣಿಯಲ್ಲಿ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಗಮನಸೆಳೆಯಿತು. ಅಮ್ಮಿನಬಾವಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಶ್ರೀನಾರಾಯಣ ಗುರುಸ್ವಾಮೀಜಿ ಹಾಗೂ ಶ್ರೀಸಿದ್ಧಾರೂಢಮಠದ ನಾಗೇಂದ್ರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.
ಮಾಜಿ ಸೈನಿಕರಾದ ರಾಮಣ್ಣ ಕೋಳಿ, ಲಕ್ಷ್ಮಣ ಜುನ್ನಾಯ್ಕರ, ಅರ್ಜುನ ನೀರಲಕಟ್ಟಿ, ಮಹಾದೇವ ಪತ್ತಾರ, ಶಂಕರ ಚಿಕ್ಕನರಗುಂದ, ವಿವಿಧ ಸಮಾಜಗಳ ಗಣ್ಯರುಗಳಾದ ಚೆನ್ನಯ್ಯ ಹಿರೇಮಠ, ದೇವಾಲಯದ ಪ್ರಧಾನ ಅರ್ಚಕ ಶ್ರೀಕಾಂತ ಪದಕಿ, ಮಲ್ಲಪ್ಪ ಕುಸುಗಲ್ಲ, ಶಿವಾಜಿ ಕಲಾಲ, ಚಂದ್ರು ಶೆಟ್ಟರ, ಯಲ್ಲಪ್ಪ ಜಾನಕೂನವರ, ವಸಂತ ಪದಕಿ, ರಾಮು ದೇಶಪಾಂಡೆ, ಶೇಖರ ಅಕ್ಕೋಜಿ, ಯಲ್ಲಪ್ಪ ವಾಡಕರ, ರಮೇಶ ನರೇಂದ್ರ ಸೇರಿದಂತೆ ಗ್ರಾಮದ ಹಲವಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 