ಮೇಕಲಮರಡಿ ಗ್ರಾಮದಲ್ಲಿ ಯಶಸ್ವಯಾಗಿ ಜರುಗಿದ ಪಶು ಆರೋಗ್ಯ ಶಿಬಿರ

ಮೇಕಲಮರಡಿ ಗ್ರಾಮದಲ್ಲಿ ಯಶಸ್ವಯಾಗಿ ಜರುಗಿದ ಪಶು ಆರೋಗ್ಯ ಶಿಬಿರ  Animal health camp held successfully in Mekalamaradi village

ನೇಸರಗಿ 24: ಬೈಲಹೊಂಗಲ ತಾಲ್ಲೂಕಿನ ಮೇಕಲಮರಡಿ ಗ್ರಾಮದಲ್ಲಿ ಫೆ. 23 ರಂದು ಐಸಿಎಆರ್‌ಹಿಕೆಎಲ್‌ಇ ಕೃಷಿ ವಿಜ್ಞಾನಕೇಂದ್ರ, ಮತ್ತಿಕೊಪ್ಪ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೈಲಹೊಂಗಲ ಇವರ ಸಹಯೋಗದಲ್ಲಿ ಪಶು ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮವು 2025ಹಿ 2026ನೇಸಾಲಿನ ಎಸ್‌ಸಿಎಸ್‌ಪಿ ಉಪಯೋಜನೆಯಡಿ ನಡೆಯಿತು. ಶಿಬಿರದ ಸಂಯೋಜಕರಾಗಿ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನತಜ್ಞ ಡಾ. ಗುರುರಾಜ ಕೌಜಲಗಿ ಕಾರ್ಯನಿರ್ವಹಿಸಿದರು. ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ ಇಲಾಖೆಯ ಹಿರಿಯ ಪಶುವೈದ್ಯಾಧಿಕಾರಿ ಡಾ. ಸುಧರ್ಶನ ಗಡಾದ ತಾಂತ್ರಿಕ ಸಹಕಾರ ನೀಡಿದರು.

ಎಸ್‌ಸಿಎಸ್‌ಪಿ  ಉಪ ಯೋಜನೆಯಡಿ ಆಯೋಜಿಸಲಾದ ಪಶು ಆರೋಗ್ಯ ಶಿಬಿರದ ಸಂದರ್ಭದಲ್ಲಿ ವಿಜ್ಞಾನಿ (ಪಶುವಿಜ್ಞಾನ) ಡಾ. ಗುರುರಾಜ ಕೌಜಲಗಿ ಅವರು ರೈತರನ್ನು ಉದ್ದೇಶಿಸಿ ಮಾತನಾಡಿ ಈ ಯೋಜನೆಯ ಮುಖ್ಯ ಉದ್ದೇಶವು ಪರಿಶಿಷ್ಟ ಜಾತಿ ಸಮುದಾಯದರೈತರಿಗೆ ಪಶುಸಂಗೋಪನೆ ಕ್ಷೇತ್ರದಲ್ಲಿ ಆರ್ಥಿಕ ಮತ್ತು ತಾಂತ್ರಿಕ ಸಹಾಯ ಒದಗಿಸಿ ಅವರ ಜೀವನ ಮಟ್ಟವನ್ನು ಸುಧಾರಿಸುವುದಾಗಿದೆ ಎಂದು ಹೇಳಿದರು. ಪಶುಗಳ ನಿಯಮಿತ ಲಸಿಕೆ, ಕೃಮಿನಾಶಕ ಓಷಧಿ ನೀಡುವುದು, ಖನಿಜ ಮಿಶ್ರಣ ಮತ್ತು ಸಮತೋಲನ ಆಹಾರದ ಮಹತ್ವವನ್ನು ವಿವರಿಸಿದರು.

ಹಾಲು ಉತ್ಪಾದನೆ ಹೆಚ್ಚಿಸಲು ಮತ್ತು ಪ್ರಜನನ ಸಮಸ್ಯೆಗಳನ್ನು ತಪ್ಪಿಸಲು ಸರಿಯಾದ ನಿರ್ವಹಣೆ ಅಗತ್ಯವೆಂದು ತಿಳಿಸಿದರು. ವಿಶೇಷವಾಗಿ ಹಸು, ಎಮ್ಮೆ, ಕುರಿ ಮತ್ತು ಮೇಕೆಗಳಲ್ಲಿ ಸಾಮಾನ್ಯವಾಗಿ ಕಾಣುವ ರೋಗಗಳ ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಉಚಿತ ಚಿಕಿತ್ಸಾ ಸೇವೆ, ಲಸಿಕೆ, ಕ್ರಿಮೀನಾಶಕ ಹಾಗೂ ಖನಿಜ ಮಿಶ್ರಣ ವಿತರಣೆ ಮಾಡಲಾಯಿತು.

ಈ ಶಿಬಿರದಲ್ಲಿ ಮೇಕಲಮರಡಿ ಗ್ರಾಮದ ಸುಮಾರು 30 ಪರಿಶಿಷ್ಟ ಜಾತಿರೈತರು ಭಾಗವಹಿಸಿದ್ದು, ಒಟ್ಟು 50ಕ್ಕೂ ಹೆಚ್ಚು ದನ, ಎಮ್ಮೆ, ಕುರಿ ಮತ್ತು ಮೇಕೆಗಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಯಿತು. ಪಶುಗಳಿಗೆ ಕೀಟನಾಶಕ, ಓಷಧಿ (ಡೀವಾಮಿಂರ್ಗ್), ಖನಿಜ ಮಿಶ್ರಣ ವಿತರಣೆ, ಹೊರಪರೋಪ ಜೀವಿ ನಿಯಂತ್ರಣ ಸಲಹೆ ಹಾಗೂ ಸಂತಾನೋತ್ಪತ್ತಿ ಸಮಸ್ಯೆಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು.

ರೈತರಿಗೆ ವೈಜ್ಞಾನಿಕ ಪಶುಸಂಗೋಪನೆ, ಸಮತೋಲನ ಆಹಾರ ಪದ್ಧತಿ, ಲಸಿಕೆ ವೇಳಾಪಟ್ಟಿ ಹಾಗೂ ಹಾಲು ಉತ್ಪಾದನೆ ಹೆಚ್ಚಿಸುವ ವಿಧಾನಗಳ ಕುರಿತುಜಾಗೃತಿ ಮೂಡಿಸಲಾಯಿತು. ಶಿಬಿರದ ಕಾರ್ಯಚರಣೆಯಲ್ಲಿ ಶ್ರೀ ಸುರೇಶ ತಲ್ಲೂರ ಹಾಗೂ ಶ್ರೀ ವಿನೋದಕರಡಿಗುದ್ದಿ ಸಹಕರಿಸಿದರು.ಈ ಪಶು ಆರೋಗ್ಯ ಶಿಬಿರವು ಗ್ರಾಮೀಣರೈತರಿಗೆ ಪಶು ಆರೋಗ್ಯ ಸಂರಕ್ಷಣೆ ಕುರಿತು ಅರಿವು ಮೂಡಿಸಿ, ಪಶು ಉತ್ಪಾದಕತೆ ಹಾಗೂ ರೈತರಆದಾಯ ಹೆಚ್ಚಿಸಲು ಸಹಾಯಕವಾಯಿತುಎಂದು ಸಂಘಟಕರು ತಿಳಿಸಿದರು.