ಅಂಗನವಾಡಿ ಫೆಡರೇಶನ್ 6ನೇ ತಾಲೂಕು ಸಮ್ಮೇಳನ ಸೀರೆ ಬೀಡಿ, ಗೌರವಯುತ ವೇತನ ಕೊಡಿ- ಬಿ.ಅಮ್ಜದ್

ಅಂಗನವಾಡಿ ಫೆಡರೇಶನ್ 6ನೇ  ತಾಲೂಕು ಸಮ್ಮೇಳನ ಸೀರೆ ಬೀಡಿ, ಗೌರವಯುತ ವೇತನ ಕೊಡಿ- ಬಿ.ಅಮ್ಜದ್  Anganwadi Federation 6th Taluk Conference Saree Beedi, Pay Respectful Salary - B. Amjad

ಲೋಕದರ್ಶನ ವರದಿ

ಹೂವಿನಹಡಗಲಿ 16:  ಕಳೆದ ಮೂರು ವರ್ಷಗಳಿಂದಲೂ ಕನಿಷ್ಟ ವೇತನ ಹೆಚ್ಚಳ ಮಾಡಿಲ್ಲ 2023 ರಲ್ಲಿ ಘೋಷಿಸಿದಂತೆ ಆರನೇ ಗ್ಯಾರಂಟಿ ವೇತನ ಹೆಚ್ಚಳ ಜಾರಿ ಮಾಡದೇ  ಬಜೆಟ್ ನಲ್ಲಿ ಎರಡು ಸೀರೆಯನ್ನು ಕೊಡುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರು.ಸಹಾಕಿಯರನ್ನು ನಿರ್ಲಕ್ಷ್ಯ ಮಾಡುವ ಜತೆಗೆ ಸರಕಾರ ಶೋಷಣೆ ಮಾಡುತ್ತದೆ  ಎಂದು ಕ.ರಾ.ಅ.ಕ.ಸಂಘಟನೆಯ ರಾಜ್ಯಾದ್ಯಕ್ಷ ಬಿ.ಅಮ್ಜದ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯ ಅಂಗನವಾಡಿ ಕಾರ್ಯ ಕರ್ತೆಯರು,ಸಹಾಯಕಿಯರ ಫೆಡರೇಶನ್ ಮತ್ತು ಎಐಟಿಯುಸಿ ಸಹಯೋಗ ದಲ್ಲಿ ಪಟ್ಟಣದ ಎಸ್‌.ಆರ್‌.ಎಂ.ಪಿಪಿ ಪ.ಕಾಲೇಜಿನಲ್ಲಿ ಸೋಮವಾರ ಆರನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಅಂಗನವಾಡಿ ಕಾರ್ಯ ಕರ್ತೆಯರನ್ನು  ಸರ್ಕಾರ ಜನಗಣತಿ, ಜಾತಿಗಣತಿ, ಆರೋಗ್ಯ ಸೇರಿದಂತೆ ಎಲ್ಲಾ ಸೇವೆಗಳಿಗೆ, ಸರ್ವೇಗಳಿಗೆ ಬಳಸಿಕೊಳ್ಳುವ ನಮ್ಮನ್ನು ಸರ್ಕಾರಗಳು ಅಲಕ್ಷಿಸುತ್ತಿದ್ದಾರೆ. ನಮಗೆ ನೀವು ಭಿಕ್ಷೆಯ ರೀತಿಯಲ್ಲಿ ಕೊಡುವ ಸೀರೆ ಬೇಡ. ನಮ್ಮ ಕೆಲಸಕ್ಕೆ ಗೌರವಯುತವಾದ ವೇತನ ಕೊಡಿ" ಎಂದು ಆಗ್ರಹಿಸಿದರು. ಭಾರತ ದೇಶದಲ್ಲಿ ಅಪೌಷ್ಟಿಕತೆ ಯಿಂದ ನರಳುತ್ತಿದ್ದಾರೆ ಆದರಲ್ಲಿ ಗುಜರಾತ ರಾಜ್ಯದ ಲ್ಲಿ  ಎರಡು ಲಕ್ಷ ಮಕ್ಕಳು ಇದ್ದಾರೆ. ಮಹಿಳೆಯರಿಗೆ ರಕ್ತ ಹೀನಾತೆ,ಲಿಂಗ ತಾರತಮ್ಯ, ಶೋಷಣೆ ಆಗುತ್ತದೆ ಇತ್ತ ಕೇಂದ್ರ ಸರ್ಕಾರ ಶೇ.33 ರಷ್ಟು ಮೀಸಲಾತಿ ಮಸೂದೆ ಕೂಡಲೇ ಜಾರಿ ಮಾಡಲು ಸಂಘಟನೆಯ ಮೂಲಕ ಹೋರಾಟ ಮಾಡಬೇಕು ಎಂದರು.

ಅಂಗನವಾಡಿ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ  ಕಾಂ.ಜಯಮ್ಮ ಅಸಂಘಟಿತ ಹಾಗೂ ಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ ಗೌರವಧನ ಬೇಡ, ಕನಿಷ್ಟ ವೇತನ ಕೊಡಿ ಎಂದರು. ಅಂಗನವಾಡಿ ಫೆಡರೇಶನ್ ತಾಲೂಕು ಅದ್ಯಕ್ಷೆ ಬಿ.ಜಯಲಕ್ಷ್ಮಿ ಅದ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ಕಮ್ಯುನಿಸ್ಟ್‌ ಜಿಲ್ಲಾ ಕಾರ್ಯದರ್ಶಿ ಹೆಚ್‌.ಎಂ.ಸಂತೋಷ, ಎಸ್‌.ಆರ್‌.ಎಂ.ಪಿ.ಪಿ.ಕಾಲೇಜಿನ ಪ್ರಾಚಾರ್ಯ ಎಂ.ವಿಜಯಕುಮಾರ,ಭಾರತೀಯ ಮಹಿಳಾ ಒಕ್ಕೂಟ ಅದ್ಯಕ್ಷೆ ಕೆ.ರೇಣುಕಮ್ಮ, ಎಐಟಿಯುಸಿ ರಾಜ್ಯ ಮಂಡಳಿ ಸದಸ್ಯ ಹಲಗಿ ಸುರೇಶ್ ,ಎಐಟಿಯುಸಿ ತಾಲೂಕು ಕಾರ್ಯದರ್ಶಿ ಬಸವರಾಜ ಸಂಶಿ,

ಕಟ್ಟಡ ಕಾರ್ಮಿಕ ಸಂಘದ ಅದ್ಯಕ್ಷ ಬಿ.ಜಂಗ್ಲಿಸಾಬ್, ಅದಾಬಿತಫೆ ಜಿಲ್ಲಾ ದ್ಯಕ್ಷೆ ಹೆಚ್‌.ಅನುಸೂಯಮ್ಮ, ದೇವದಾಸಿ ಸಂಘದ ಅದ್ಯಕ್ಷೆ ಹೆಚ್‌.ದಂಡೆಮ್ಮ, ಅಂಗನವಾಡಿ ಫೆಡರೇಶನ್  ನಾನಾ ತಾಲೂಕು ಅದ್ಯಕ್ಷರು,ಮುಖಂಡರು.ಅಂಗನವಾಡಿ ಕಾರ್ಯ ಕರ್ತೆಯರು, ಸಹಾಯಕಿಯರು ಸಮ್ಮೇಳನ ದಲ್ಲಿ ಭಾಗವಹಿಸಿದ್ದರು. ಬೇಡಿಕೆಗಳು: ವೇತನ ಪರಿಷ್ಕರಣೆ, ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ಸುರಕ್ಷಿತ ಕೆಲಸದ ವಾತಾವರಣದ ಕುರಿತು ನಿರ್ಣಯ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.ಮೈಲಾಮ್ಮ ಸ್ವಾಗತಿಸಿದರು, ಎನ್‌.ಮಂಜುಳಾ ಪ್ರಾಸ್ತಾವಿಕ ಮಾತನಾಡಿದರು, ಅಪರ್ಣ ನಿರೂಪಿಸಿದರು. ಇಪ್ಟಾ ತಂಡದ ಕಾಂ. ಎಡಿ ದ್ವಾರಕೀಶ್, ಪಿ.ಚಮಾನಸಾಬ್ ಕ್ರಾಂತಿ ಗೀತೆ ಹೇಳಿದರು.