ಆನಂದವನ್ನೇ ಕಳೆದುಕೊಂಡಿರುವ ಆನಂದಪುರ ರಸ್ತೆಗಳು
Anandpur roads have lost their joy
ಲೋಕದರ್ಶನ ವರದಿ
ಯಮಕನಮರಡಿ 27: ಸಮೀಪದ ಹತ್ತರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆನಂದಪುರ ಗ್ರಾಮಕ್ಕೆ ಹೋಗುವ ರಸ್ತೆ ಮೇಲೆ ತುಂಬಿ ತುಳುಕುತ್ತಿರುವ ಕೊಳಚೆ ನೀರು ಸದರಿ ಆನಂದಪುರ ಬಡಾವಣೆಗೆ ಅಭಿವೃದ್ಧಿ ಮಾಡುವುದಕ್ಕಾಗಿ ಸಚಿವರು ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡಿದರು ಸಹಿತ ಅಲ್ಲಿ ರಸ್ತೆಗಳು ಮಾತ್ರ ಅಭಿವೃದ್ಧಿ ಹೊಂದಿರುವುದಿಲ್ಲ ಹೀಗಾಗಿ ಅಲ್ಲಿಯ ಜನರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ ದೇವಸ್ಥಾನಗಳಿಗೆ ಹೋಗುವ ರಸ್ತೆಗಳ ಮೇಲೆ ನಿಂತಿರುವ ಕೊಳಚೆ ನೀರು ಅಲ್ಲದೆ ಕಿತ್ತು ಹೋಗಿರುವ ಕಾಂಕ್ರೀಟ್ ರಸ್ತೆಗಳು ಸಮರ್ಕ ನೀರಿನ ವ್ಯವಸ್ಥೆ ಇಲ್ಲದೆ ಇದ್ದ ಕಾರಣ ಎಲ್ಲಿ ಬೇಕಾದರೂ ನೀರು ಪೋಲಾಗುತ್ತಿದೆ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು
ಸಹಿತ ಯಾವುದೇ ತರದ ಪರಿಹಾರ ಕಾಣುತ್ತಿಲ್ಲ ರಾಜಕೀಯ ಮುಖಂಡರು ಕಣ್ಣೆತ್ತಿ ನೋಡದೆ ಇರುವುದೊಂದು ವಿಷಾದನೀಯ ಸಂಗತಿಯಾಗಿದೆ ಕೇವಲ ತಮ್ಮ ತಮ್ಮ ಪ್ರತಿಷ್ಟಿಗಾಗಿ ಆರೋಪ ಪ್ರತಿ ಆರೋಪ ಇವುಗಳ ಮಾತ್ರ ಕೇಳಿ ಬರುತ್ತವೆ ಹೀಗಾಗಿ ಅಲ್ಲಿಯ ಜನರು ಮುಂಬರುವ ಗ್ರಾಂಪಂ ತಾಪಂ ಚುನಾವಣೆಗಳಲ್ಲಿ ಸಮರ್ಕ ಉತ್ತರ ನೀಡುವುದಕ್ಕಾಗಿ ಸಿದ್ದರಾಗಿದ್ದಾರೆ ಕೇವಲ ಕನಸಿನ ಕೂಸಾಗಿರುವ ಅಭಿವೃದ್ಧಿ ಕಾಮಗಾರಿಗಳು ಎದ್ದು ಕಾಣುತ್ತಿವೆ ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿ ಆನಂದಪುರ ಗ್ರಾಮವು ಒಂದು ಮಾದರಿ ಗ್ರಾಮವಾಗಬೇಕಾಗಿತ್ತು ಆದರೆ ಇದು ಮಾದರಿ ಗ್ರಾಮವಾಗದೆ ತೆಗ್ಗು ಕೊಳೆಚೆ ನೀರಿನಿಂದ ತುಂಬಿ ತುಳುಕುವ ಗ್ರಾಮವಾಗಿದೆ ಕೇವಲ ಇಲ್ಲಿ ಆರೋಪ ಪ್ರತಿ ಆರೋಪ ಗಳೇ ಹೆಚ್ಚಾಗಿ ಕಾಣುತ್ತಿವೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 