ಸ್ಯಾಂಟಿಯಾಗೊನಲ್ಲಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು, ಜಲ ಫಿರಂಗಿ ಪ್ರಯೋಗ

ಸ್ಯಾಂಟಿಯಾಗೊ, ಅ 23: ಚಿಲಿಯ ರಾಜಧಾನಿಯಲ್ಲಿ ಕಫ್ಯರ್ೂ ಮಧ್ಯೆ ಬೀದಿಗಳಿಗೆ ಇಳಿದಿರುವ  ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಪ್ರಯೋಗಿಸಿದ್ದಾರೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.  ಮಂಗಳವಾರ ಸೆಂಟ್ರಲ್ ಪ್ಲಾಜಾ ಬಾಕ್ವೆಡಾನೊದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರದರ್ಶನಕಾರರು ಜಮಾಯಿಸಿದ್ದರು. ಈ ಪೈಕಿ ಕೆಲವರು ಕಫ್ಯರ್ೂ ನಡುವೆಯೂ ಮೆರವಣಿಗೆ ಮುಂದಾದಾಗ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಪ್ರಯೋಗಿಸಿ ಉಳಿದ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.  ಸ್ಯಾಂಟಿಯಾಗೊದಲ್ಲಿ ಮಂಗಳವಾರ ಸಂಜೆಯಿಂದ ಕಫ್ಯರ್ೂ ಜಾರಿಗೆ ಬಂದಿದೆ ಎಂದು ಚಿಲಿ ಅಧಿಕಾರಿಗಳು ಪ್ರಕಟಿಸಿದ್ದಾರೆ. ಅಲ್ಲದೆ, ಕಾನ್ಸೆಪ್ಷನ್ ಮತ್ತು ವಾಲ್ಪಾರೈಸೊದಲ್ಲಿ  ಬುಧವಾರ ಮುಂಜಾನೆವರೆಗೆ ಕಫ್ಯರ್ೂ ಜಾರಿಯಲ್ಲಿದೆ.  ಸ್ಯಾಂಟಿಯಾಗೊದಲ್ಲಿ ಗುಂಪನ್ನು ಚದುರಿಸಲು ಪೊಲೀಸರ ಕ್ರಮದ ನಂತರ ಕೆಲ ಪ್ರತಿಭಟನಾಕಾರರು ಬಾಕ್ವೆಡಾನೊ ಚೌಕಕ್ಕೆ ಮರಳಿದರು ಎಂದು ಸ್ಪುಟ್ನಿಕ್ ವರದಿಗಾರರು ತಿಳಿಸಿದ್ದಾರೆ.   ಈ ತಿಂಗಳ 18 ರಂದು ಚಿಲಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಯೋಜಿತ ಸುರಂಗಮಾರ್ಗ ಶುಲ್ಕ ಹೆಚ್ಚಳದ ವಿರುದ್ಧದ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದಿವೆ.  ಪ್ರತಿಭಟನಾಕಾರರು ಸುರಂಗಮಾರ್ಗ ನಿಲ್ದಾಣಗಳು ಮತ್ತು ಬಸ್ಸುಗಳಿಗೆ ಬೆಂಕಿ ಹಚ್ಚಿದ್ದಾರೆ.    ಅ 20 ರಿಂದ ಶುರುವಾದ ಪ್ರತಿಭಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ. ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಯೋಜಿತ ಸುರಂಗಮಾರ್ಗ ಶುಲ್ಕ ಹೆಚ್ಚಳವನ್ನು ವಾಪಸ್ ಪಡೆಯುವುದಾಗಿ ಪಿನೆರಾ ಎರಡು ದಿನಗಳ ಹಿಂದೆ ಹೇಳಿದ್ದರು. ಆದರೂ, ರಾಜಧಾನಿ ಸ್ಯಾಂಟಿಯಾಗೊ, ವಾಲ್ಪಾರೈಸೊ ಮತ್ತು ಕಾನ್ಸೆಪ್ಷನ್ನಲ್ಲಿ ಗಲಭೆಗಳು ಮುಂದುವರೆದಿವೆ.