ಯಮಕನಮರಡಿ ಕ್ಷೇತ್ರದ ಮುಚ್ಚಂಡಿ ಮತ್ತು ಅಷ್ಟೆ ಗ್ರಾಮಗಳ ಅಭಿವೃದ್ಧಿಗೆ ಮಹತ್ವದ ಹೆಜ್ಜೆ

ಯಮಕನಮರಡಿ ಕ್ಷೇತ್ರದ ಮುಚ್ಚಂಡಿ ಮತ್ತು ಅಷ್ಟೆ ಗ್ರಾಮಗಳ ಅಭಿವೃದ್ಧಿಗೆ ಮಹತ್ವದ ಹೆಜ್ಜೆ  An important step for the development of Mukhandi and Ashte villages in Yamakanamaradi constituency

ಲೋಕದರ್ಶನ ವರದಿ 

ಯಮಕನಮರಡಿ 21 : ಇವತ್ತು ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತ ಕ್ಷೇತ್ರದಲ್ಲಿ ಬರುವ ಮುಚ್ಚಂಡಿ ಗ್ರಾಮದಲ್ಲಿ ಮಹಾಲಕ್ಷ್ಮಿ ಮತ್ತು ಮಾರಗಾಯಿ ದೇವಿಯ ಜಾತ್ರೆಯ ಸುಸಂದರ್ಭದಲ್ಲಿ ಸುಮಾರು 1.30 ಕೋಟಿ ರೂಪಾಯಿ ವೆಚ್ಚದ ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ, 18 ಲಕ್ಷ ರೂಪಾಯಿ ವೆಚ್ಚದ ಮರಾಠಿ ಪ್ರಾಥಮಿಕ ಶಾಲಾ ಸುಧಾರಣೆ ಹಾಗೂ 25 ಲಕ್ಷ ರೂಪಾಯಿ ವೆಚ್ಚದ ಕಲ್ಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಚಾಲನೆ ನೀಡಿದರು.  

ಅದೇ ರೀತಿ ಅಷ್ಟೆ ಗ್ರಾಮದಲ್ಲಿಯೂ ಅಭಿವೃದ್ಧಿಯ ಪರ್ವ ಮುಂದುವರಿದಿದ್ದು, ಒಟ್ಟು 1.71 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಸಿಸಿ ರಸ್ತೆಗಳು, ಚರಂಡಿ ವ್ಯವಸ್ಥೆ, ರಸ್ತೆ ಡಾಂಬರೀಕರಣ ಸೇರಿದಂತೆ ಅಂದಾಜು 38 ಲಕ್ಷ ರೂಪಾಯಿ ವೆಚ್ಚದಲ್ಲಿ ಕನ್ನಡ ಮತ್ತು ಮರಾಠಿ ಶಾಲಾ ಕಟ್ಟಡಗಳು ಹಾಗೂ ಅಂದಾಜು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀ ಕಲ್ಮೇಶ್ವರ ದೇವಸ್ಥಾನದ ಕಟ್ಟಡದ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು. ಗ್ರಾಮೀಣ ಭಾಗದ ಮೂಲಸೌಕರ್ಯಗಳನ್ನು ಬಲಪಡಿಸುವ ಮೂಲಕ ಜನರ ಜೀವನಮಟ್ಟವನ್ನು ಸುಧಾರಿಸಲು ಈ ಯೋಜನೆಗಳು ಪೂರಕವಾಗಿದ್ದು, ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಇರುವ ನಮ್ಮ ಬದ್ಧತೆಯನ್ನು ಈ ಕಾರ್ಯಕ್ರಮಗಳು ಸಾಬೀತುಪಡಿಸಿವೆ.