ಧಾರವಾಡ : ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಸಾಧನಕೇರಿಯ ಬೇಂದ್ರೆ ಭವನದಲ್ಲಿ ದಿ. 15ರಂದು ಜರುಗಿದ ಮಾಸಿಕ ಭಾವಗೀತ ಸಂಜೆ ಕಾರ್ಯಕ್ರಮವು ವೈವಿಧ್ಯಮಯ ಗೀತೆಗಳ ಪ್ರಸ್ತುತಿಯೊಂದಿಗೆ ಯಶಸ್ವಿಯಾಗಿ ಜರುಗಿತು.
ಬಳ್ಳಾರಿಯ ಗಾಯಕಿ ಕವಿತಾ ವಸಂತ ಗಂಗೂರ ಅವರು ಅಂಬಿಕಾತನಯದತ್ತರ ರಚನೆಗಳಾದ 'ಒಂದೆ ಬಾರಿ ನನ್ನ ನೋಡಿ', 'ಬಾ ಭೃಂಗವೇ', 'ಹೆಣ್ಣು ಗಂಡಿಗೆ ಚೆಲುವು', ' ಕೊಡುವುದೇನು ಕೊಂಬುದೇನು', 'ಇಳಿದು ಬಾ ತಾಯಿ' ಮುಂತಾದ ಜನಪ್ರೀಯ ಗೀತೆಗಳನ್ನು ಮತ್ತು ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರ 'ಇಷ್ಟುಕಾಲ ಒಟ್ಟಿಗಿದ್ದು', ಎಂ.ಆರ್.ಕಮಲಮ್ಮ ರಚನೆಯ 'ಅಮ್ಮ ಹಚ್ಚಿದ ಹಣತೆ' ಹಾಗೂ 'ಎಲ್ಲಿ ಹೋಗುವೆ ನೀ', 'ನಾ ನಿನ್ನ ಕಂಡಾಗ ಎಷ್ಟೊಂದು ಗೆಲವಿತ್ತು' ಮುಂತಾದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳ ಮನರಂಜಿಸಿದರು.
ತಬಲಾದಲ್ಲಿ ನಿಸಾರ್ ಅಹಮ್ಮದ ಹಾಗೂ ಹಾರ್ಮೋನಿಯಂದಲ್ಲಿ ಬಸವರಾಜ ಹಿರೇಮಠ, ಕೀ ಬೋರ್ಡದಲ್ಲಿ ಇಂದ್ರಕುಮಾರ ಉತ್ತಮ ಸಾಥ್ ನೀಡಿದರು. ಆರಂಭದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಬಾಳಿಕಾಯಿ ನಿರೂಪಿಸಿ ವಂದಿಸಿದರು.
ಗಣ್ಯರಾದ ಡಾ.ಸಂಗಮನಾಥ ಲೋಕಾಪೂರ, ಕೆ.ವಿ.ಹಾವನೂರ, ಡಾ.ಶ್ರೀಧರ ಕುಲಕರ್ಣಿ, ಸುರೇಶ ಹಾಲಭಾವಿ, ಶಾಂತವೀರಪ್ಪ ಪವಾಡಶೆಟ್ಟರ, ವಾಸುದೇವ ಕೊಣ್ಣೂರ, ಎಂ.ಸಿದ್ಧಲಿಂಗಸ್ವಾಮಿ, ಎಸ್.ಬಿ.ಮಲ್ಲನಗೌಡರ, ಎಂ.ಬಿ.ಶಶಿಕಾಂತ, ಪ್ರಹ್ಲಾದ ಮಿಟ್ಟಿ, ಎಸ್.ಎಸ್.ಬಂಗಾರಿಮಠ, ಪದ್ಮಾವತಿ ಬೇಂದ್ರೆ, ಡಾ.ಪಾರ್ವತಿ ಹಾಲಭಾವಿ, ಭಾರತಿ ಪರ್ವತೀಕರ, ಶಿಲ್ಪಾ ನವಲಿಮಠ, ಜಯಶ್ರೀ ಕೊಣ್ಣೂರ ಮುಂತಾದವರು ಉಪಸ್ಥಿತರಿದ್ದರು.