ಫಿಜಿಯಲ್ಲಿ 5 ತೀವ್ರತೆಯ ಭೂಕಂಪ

ನ್ಯೂಯಾರ್ಕ್, ಫೆ 3, ಫಿಜಿಯಲ್ಲಿ ಲಾಂಬಾಸಾದಿಂದ 240 ಕಿಲೋಮೀಟರ್ ಆಗ್ನೇಯದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ. ಭಾನುವಾರ ಗ್ರೀನ್ ವಿಚ್ ಕಾಲಮಾನ 21.52.36 ರ ಸಮಯದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5 ರಷ್ಟು ದಾಖಲಾಗಿತ್ತು ಎಂದು ಇಲಾಖೆ ಹೇಳಿದೆ.17.69 ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿ 178.78 ಡಿಗ್ರಿ ಪಶ್ಚಿಮ ರೇಖಾಂಶದಲ್ಲಿ 558.28 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಹೇಳಲಾಗಿದೆ. ಈವರೆಗೆ ಯಾವುದೇ ಸಾವು – ನೋವಿನ ಬಗ್ಗೆ ವರದಿಯಾಗಿಲ್ಲ.