ಪಂಚಮಸಾಲಿಗಳ ಮೇಲಿನ ದೌರ್ಜನ್ಯ ಖಂಡಿಸಿ ನಡೆಯುವ ಹೋರಾಟಕ್ಕೆ ಬೆಂಬಲ ನೀಡಲೆಂದು ಜನತೆಗೆ ಮನವಿ
ಯರಗಟ್ಟಿ 11: ಕೃಷಿ ಕಾಯಕ ಕೃತ್ಯದಲ್ಲಿ ನಿರತವಾದ ಮುಗ್ದ ಹಾಗೂ ಸಕಲ ಜೀವಿಗಳಿಗೆ ಅನ್ನ ನೀಡೊ ರೈತ ಸಮುದಾಯ ಪಂಚಮಸಾಲಿಗಳು ತಮ್ಮ ನ್ಯಾಯಬದ್ದ ಮೀಸಲಾತಿ ಕೇಳಲಿಕ್ಕೆ ಬಂದವರ ಮೇಲೆ ಪೋಲಿಸರನ್ನ ಛೂ ಬಿಟ್ಟು ದೌರ್ಜನ್ಯ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆಲವೆ ದಿನಗಳಲ್ಲಿ ತಕ್ಕ ಪಾಠ ಪಂಚಮಸಾಲಿಗಳು ನೀಡಲಿದ್ದಾರೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಈರಣ್ಣಾ ಹೂಲ್ಲೂರ ಅಕ್ರೋಶ ವ್ಯಕ್ತಪಡಿಸಿದ್ದಾರೆ.ಮಾಧ್ಯಮ ಪ್ರಕಟಣೆ ಹೊರಡಿಸಿದ, ಶಾಂತ ರೀತಿಯಾಗಿ ಮುಖ್ಯಮಂತ್ರಿಗಳಿಗೆ ಮನವಿ ಅರ್ಿಸಲು ಸುವರ್ಣ ವಿಧಾನಸೌಧದ ಕಡೆ ನಡೆದಾಗ ಹೋರಾಟವನ್ನು ಹತ್ತಿಕ್ಕಲೂ ವಾರದಿಂದ ಸಂಚು ನಡೆಸಿದ್ದ ಕಾಂಗ್ರೆಸ್ ಸರ್ಕಾರ ಇಂದು ತನ್ನ ಕುಚ್ಯದ್ದತನವನ್ನು ತೋರುವ ಮೂಲಕ ನೂರಾರು ಹೋರಾಟಗಾರರ ರಕ್ತ ಚಿಮ್ಮಿಸಿ ಹಲವಾರು ಚಮಸಾಲಿಗಳ ಮೇಲೆ ಬೆತ್ತ ಬೀಸಿದ ಪೋಲಿಸರ ನಡೆ ಖಂಡನೀಯ.ಪಂಚಮಸಾಲಿ ಸಮುದಾಯದ 2ಎ ಪ್ರವರ್ಗದ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟದ ಸ್ವರೂಪದ ಕುರಿತು ಈ ಮುಂಚೆಯೇ ಸರ್ಕಾರದ ಅರಿವಿಗೆ ಬಂದಿದ್ದರೂ ಯಾವುದೇ ಮುಂಜಾಗ್ರತಾ ಕ್ರಮ ವಹಿಸಿಲ್ಲ.ಸರ್ಕಾರ ಪ್ರತಿಭಟನೆಗಾಗರರನ್ನು ಕರೆದು ಮಾತನಾಡಿಸಿಲ್ಲ.ದುರುದ್ದೇಶಪೂರ್ವಕವಾಗಿ ಚಳುವಳಿಯನ್ನು ಹತ್ತಿಕ್ಕುವ ದುರಾಲೋಚನೆಯಿಂದ ಚಳುವಳಿ ನಿರತ ಅಮಾಯಕರ ಮೇಲೆ ಲಾಠಿಚಾರ್ಜ್ ಪ್ರಯೋಗಿಸಿ ಚಳುವಳಿಗಾರರು ಮಾರಣಾಂತಿಕ ಪೆಟ್ಟು ಅನುಭವಿಸಲು ಕಾರಣವಾಗಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.ಕಳೆದ ಒಂದು ವಾರದಿಂದಲೂ ಪೂಜ್ಯ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಹೋರಾಟದ ಕುರಿತು ಮಾಹಿತಿಗಳನ್ನು ಒದಗಿಸುತ್ತಲೇ ಬಂದಿದ್ದಾರೆ. ಈ ಹಂತದಲ್ಲಿ ಪೂಜ್ಯರೊಂದಿಗೆ ಸಕಾರಾತ್ಮಕ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಹುಡುಕುವ ಮಾರ್ಗೋಪಾಯಗಳನ್ನು ಕಂಡುಹಿಡಿಯದೇ ಚಳುವಳಿ ತೀವ್ರ ಸ್ವರೂಪ ಪಡೆಯಲು ಕಾರಣವಾಗಿರುವ ಕಾಂಗ್ರೆಸ್ ಸರ್ಕಾರದ ಅಸಮರ್ಥ ನಡೆ ಈ ಹಿಂದಿನ ರೈತ ಚಳುವಳಿಗಳನ್ನು ಬಗ್ಗುಬಡಿದ ಮಾದರಿಯನ್ನು ನೆನಪಿಸುತ್ತಿದೆ.ಕೂಡಲೇ ಸರ್ಕಾರ ಈ ಸಂಬಂಧವಾಗಿ ಬೇಜವಾಬ್ದಾರಿಯಿಂದ ವರ್ತಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿ, ಅಮಾಯಕರ ಮೇಲೆ ಹಲ್ಲೆ ಆಗಿರುವ ಕುರಿತು ಕ್ಷಮೆಯಾಚಿಸಲಿ. ಮಾರಣಾಂತಿಕ ಪೆಟ್ಟು ತಿಂದವರಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರವನ್ನು ಒದಗಿಸಲಿ. ಪೋಲಿಸ್ ಎಡಿಜಿಪಿ ಮತ್ತು ಕೆಲ ದರ್ ತೊರಿಸಿದ ಅಧಿಕಾರಿಗಳನ್ನು ಅಮಾನತ್ ಗೊಳಿಸಬೇಕು. ಗುರುವಾರ ರಾಜ್ಯಾಧ್ಯಂತ ಬಂದ್ ಕರೆಗೆ ಈಗಾಗಲೆ ಕರೆ ಕೊಟ್ಟಿರುವ ಪೂಜ್ಯರ ನಡೆಯಂತೆ ಪಂಚಮಸಾಲಿಗಳ ಮೇಲಿನ ದೌರ್ಜನ್ಯ ಖಂಡಿಸಿ ನಡೆಯುವ ಹೋರಾಟಕ್ಕೆ ಬೆಂಬಲ ನೀಡಲೆಂದು ಜನತೆಗೆ ಮನವಿ ಮಾಡಿದ್ದಾರೆ.