ನವದೆಹಲಿ, ಮೇ 22, ಭಾರತದಲ್ಲಿ ಕೊರೊನಾ ವೈರಸ್ ಬೆನ್ನಲ್ಲೇ ಅಂಫಾನ್ ಚಂಡಮಾರುತದ ಮತ್ತು ಅದರಿಂದ ಉಂಟಾದ ಪ್ರವಾಹದಿಂದಾಗಿ ಬಾಂಗ್ಲಾದೇಶ ಹಾಗೂ ಭಾರತದ ಕೆಲವು ಭಾಗಗಳಲ್ಲಿ ಕನಿಷ್ಠ 19 ಮಿಲಿಯನ್ ಮಕ್ಕಳು ಅಪಾಯಕ್ಕೆ ಸಿಲುಕಕಿದ್ದಾರೆ ಎಂದು ಯುನಿಸೆಫ್ ಎಚ್ಚರಿಕೆ ನೀಡಿದೆ. ಕೊರೊನಾ ವೈರಸ್ ಭೀತಿಯ ನಡುವೆಯೂ ಅಬ್ಬರಿಸುತ್ತಿರುವ ಅಂಫಾನ್ ಚಂಡಮಾರುತದಿಂದ ನಿರಾಶ್ರಿತ ಶಿಬಿರಗಳಿಗೆ ಹೆಚ್ಚು ಜನರನ್ನು ಸ್ಥಳಾಂತರಿಸುತ್ತಿರುವ ಪರಿಣಾಮ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವ ಸಾದ್ಯತೆ ಹೆಚ್ಚಾಗಿದೆ ಎಂದು ಯುನಿಸೆಫ್ ಹೇಳಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ದಕ್ಷಿಣ ಏಷ್ಯಾದ ಯುನಿಸೆಫ್ ಪ್ರಾದೇಶಿಕ ನಿರ್ದೇಶಕ ಜೀನ್ ಗೌಗ್, ಅಂಫಾನ್ ಚಂಡಮಾರುತದ ಪರಿಣಾಮ ಬಾಂಗ್ಲಾದೇಶ ಹಾಗೂ ಭಾರತದ ಕೆಲವು ಪ್ರದೇಶಗಳಲ್ಲಿ ಮಕ್ಕಳು ಮತ್ತು ಅವರ ಕುಟುಂಬಗಳನ್ನು ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರ ಮಾಡುವುದರಿಂದ ಭವಿಷ್ಯದಲ್ಲಿ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ,