ಅಮ್ಮಿನಬಾವಿಂ ಗುರುಶಾಂತ ಜಾತ್ರಾ ಮಹೋತ್ಸವ ; ಉಚಿತ ಆರೋಗ್ಯ ತಪಾಸಣೆ ಯಶಸ್ವಿ
Amminabavin Gurushantha Jatra Festival; Free health check-up a success
ಲೋಕದರ್ಶನ ವರದಿ
ಧಾರವಾಡ 18 : ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.14, 15 ಮತ್ತು 16 ರಂದು ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಯಶಸ್ವಿಯಾಗಿ ಜರುಗಿದವು.
ಮಾ.14 ರಂದು ಎಸ್.ಡಿ.ಎಂ. ನಾರಾಯಣ ಹಾರ್ಟ ಸೆಂಟರ್ ವತಿಯಿಂದ ಹೃದಯ ರೋಗತಜ್ಞ ಡಾ. ವಿನಯಕುಮಾರ ಪಿ. ಅವರ ತಂಡವು ಬಿ.ಪಿ., ಆರ್‌ಬಿಎಸ್, ಇಸಿಜಿ ಮತ್ತು ಎಕೋ ತಪಾಸಣೆಯನ್ನು ಮಾಡಿದ್ದು, ಸುಮಾರು 178 ಜನರು ಪ್ರಯೋಜನ ಪಡೆದರು.
ಮಾ.15ರ ಶಿಬಿರದಲ್ಲಿ ನಗರದ ಶಿವಾಜಿ ಸರ್ಕಲ್ ಬಳಿ ಇರುವ ಆರ್ಥೋ ಕೇರ್ ಕ್ಲಿನಿಕ್ ವತಿಯಿಂದ ಎಲುಬು-ಕೀಲು ತಜ್ಞ ವೈದ್ಯ ಡಾ.ವಿಕಾಸ ತಿಗಡಿ ಅವರು ಮಂಡಿನೋವು, ಕೀಲು ಸವಕಳಿ, ಬೆನ್ನು ಮೂಳೆ ಮತ್ತು ಕುತ್ತಿಗೆ ನೋವು, ಕೈ-ಕಾಲು ಸೆಳೆತ, ಎಲುಬು ಹಾಗೂ ನರರೋಗಗಳು, ವಕ್ರಕಾಲು, ಸಂದಿವಾತ, ಅರ್ಥೋಸ್ಕೋಪಿ ಚಿಕಿತ್ಸೆಗಳೂ ಸೇರಿದಂತೆ ಸುಮಾರು 86 ಜನರು ಚಿಕಿತ್ಸೆ ಹಾಗೂ ವೈದ್ಯಕೀಯ ಸಲಹೆಗಳನ್ನು ಪಡೆದರು.
ಮಾ.16 ರಂದು ಇಲ್ಲಿಯ ಲೈನ್ ಬಜಾರದ ಸಿಂಚನಾ ಕಣ್ಣು ಮತ್ತು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ವತಿಯಿಂದ ನೇತ್ರ ತಜ್ಞ ಡಾ. ಮಹೇಶ ಎನ್. ಬಿ. ಅವರು 84 ಜನರಿಗೆ ಉಚಿತ ನೇತ್ರ ತಪಾಸಣೆ ನಡೆಸಿ, 4 ಜನರಿಗೆ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದರು. ಶಿಬಿರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ತಜ್ಞ ವೈದ್ಯರನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಗೌರವಿಸಿ ಆಶೀರ್ವದಿಸಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 