ಏ.2ರಂದು ಅಮ್ಮಿನಬಾವಿ ಬಸವಣ್ಣ ದೇವರ ಜಾತ್ರೆ
Amminabavi Basavanna Deva Fair on 2nd April
ಲೋಕದರ್ಶನ ವರದಿ
ಧಾರವಾಡ 31: ತಾಲೂಕಿನ ಅಮ್ಮಿನಬಾವಿ ಗ್ರಾಮದ ಗುಡಿ ಓಣಿಯಲ್ಲಿರುವ ಪ್ಯಾಟಿ ಬಸವಣ್ಣ(ನಂದೀಶ್ವರ) ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಏ.2ರಂದು ಹೊಸ ವಸಂತದ ಮೊದಲ ಪೌರ್ಣಿಮೆ ‘ದವನದ ಹುಣ್ಣಿಮೆ’ಯ ದಿನ(ಗುರುವಾರ) ಜರುಗಲಿದೆ. ಇದಕ್ಕೆ ಪೂರಕವಾಗಿ ಮುನ್ನಾದಿನ(ಬುಧವಾರ) ರಾತ್ರಿ 8 ಗಂಟೆಗೆ ಉಚ್ಛಾಯ ಬಂಡಿ ಉತ್ಸವ ವಿವಿಧ ಜನಪದ ವಾದ್ಯಗಳ ಸಮೇತ ನಡೆಯಲಿದ್ದು, ಅಂದು ದೇವಾಲಯದಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯುವುದು.
ಗುರುವಾರ(ಏ.2) ಪ್ರಾತಃಕಾಲದಲ್ಲಿ ಬಸವಣ್ಣ(ನಂದೀಶ್ವರ) ದೇವರ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಹಾಗೂ ಮಹಾಮಂಗಳಾರತಿ ಜರುಗುವುದು. ನಂತರ ಅಪರಾಹ್ನ ಅನ್ನಸಂತರೆ್ಣ ನಡೆಯುವುದು.
ರಥೋತ್ಸವ : ಗುರುವಾರ ಸಂಜೆ 4 ಗಂಟೆಗೆ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಓರ್ವ ಜಂಗಮ ಮೂರ್ತಿ ಸಮೇತ ಗ್ರಾಮದ ಹಕ್ಕು-ಬಾಬುಗಳ ಗಣ್ಯರೊಂದಿಗೆ ಅಲಂಕೃತ ರಥೋತ್ಸವ ನಂದಿಕೋಲು, ಪಲ್ಲಕ್ಕಿ, ಕರಡಿ ಮಜಲು, ಭಜನೆಗಳ ಸಮೇತ ಆರಂಭಗೊಳ್ಳುವುದು. ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ರಥೋತ್ಸವದ ಕೊನೆಗೆ ವರ್ಷದ ಆಗು-ಹೋಗುಗಳ ಕುರಿತು ಹೇಳಿಕೆ ಹೇಳುವರೆಂದು ದೇವಾಲಯದ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ ಹುಲ್ಲೂರ, ಉಪಾಧ್ಯಕ್ಷ ಶಿವಾನಂದ ಕಡ್ಲೆಪ್ಪನವರ, ಕಾರ್ಯದರ್ಶಿ ಬಸವರಾಜ ಬೂದಿಹಾಳ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 