ಅಂಬಿಗರ ಚೌಡಯ್ಯ ಜಯಂತಿ ಆಚರಣೆ
Ambigara Chowdaiah Jayanti Celebration
ಹೂವಿನ ಹಡಗಲಿ 21: ಬಸವಣ್ಣನವರಿಂದ ಲಿಂಗ ದೀಕ್ಷೆ ಪಡೆದು ಜನಸಾಮಾನ್ಯರ ಬದುಕನ್ನು ವಚನಗಳ ಮೂಲಕ ಅನಾವರಣಗೊಳಿಸಿದ ಚೌಡಯ್ಯ ರವರ ನಡೆ ನುಡಿ ಅನುಸರಿಸಬೇಕು ಎಂದು ಶಿಕ್ಷಕಿ ವೈ ಜಯಮ್ಮ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಬುಧವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆಯಲ್ಲಿ ಮಾತನಾಡಿದರು.12 ನೇ ಶತಮಾನದ ಶರಣ ಪರಂಪರೆ ಮೈಗೂಡಿಸಿಕೊಂಡಿದ್ದರು ಎಂದರು.ಶಿಕ್ಷಕ ಪಂ ವಾಣಿ ಗಿಡ್ಡಾನಾಯ್ಕ್ ಚೌಡಯ್ಯ ರವರ ವಚನಗಳನ್ನು ಪ್ರಸ್ತುತ ಪಡಿಸಿದರು.ವಿದ್ಯಾರ್ಥಿನಿ ಸೊಪ್ಪಿನ ಪೂರ್ವಿ ಅಂಬಿಗರ ಚೌಡಯ್ಯ ರವರ ಕುರಿತು ಮಾಹಿತಿ ಹಂಚಿಕೊಂಡರು.ಮುಖ್ಯ ಗುರು ಸುರೇಶ ಅಂಗಡಿ ಶಿಕ್ಷಕರಾದ ಎಸ್ ದ್ವಾರಕೀಶ್ ರೆಡ್ಡಿ ಸ್ವಾಮಿನಾಥ ರಾಮಸ್ವಾಮಿ, ಬಸಪ್ಪ ಕೆ ಆನಂದ್ ಜಿ ಗೀತಾ ಪಿ ಎಂ ಪ್ರತಿಮಾ ಎನ್ ರೇಖಾ ಎಸ್ ಸಂಗಮೇಶ ಸುಂಕದ ಪ್ರಸಾದ್ ಸಂತೋಷ್ ಕುಮಾರ್ ಎಸ್ ರಾಕೇಶ್ ರೆಡ್ಡಿ ಇತರರು ಇದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 