ಅಂಬೇಡ್ಕರ್ ವರ್ತಮಾನದ ಬೆಳಕು: ಡಾ. ಯಲ್ಲಪ್ಪ ಹಿಮ್ಮಡಿ
Ambedkar is the light of the present: Dr. Yallappa Himmadi
ಬೆಳಗಾವಿ 14 : ದೇಶದ ದಲಿತರು, ಮಹಿಳೆಯರು ಮತ್ತು ಸಮಸ್ತ ಶೋಷಿತರಿಗೆ ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಹಕ್ಕು ಪಡೆಯಲು ಬಾಬಾ ಸಾಹೇಬ್ ಅಂಬೇಡ್ಕರ್ ವರ್ತಮಾನದ ಬೆಳಕಾಗಿದ್ದಾರೆ ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು.
ನಗರದ ಕೊಲ್ಲಾಪುರ ವೃತ್ತದ ಸಮೀಪವಿರುವ ಮಾನವ ಬಂದುತ್ವ ವೇದಿಕೆಯ ಕೇಂದ್ರ ಕಛೇರಿಯ ಸಭಾಂಗಣದಲ್ಲಿ, ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಗಳು ಏರಿ್ಡಸಿದ್ದ ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ್ ಅವರ 135 ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಅಂಬೇಡ್ಕರ್ ಅವರಿಗೆ ತಮ್ಮ ಹೋರಾಟದಲ್ಲಿ ಅಚಲ ವಿಶ್ವಾಸವಿತ್ತು, ದಲಿತರ ಸಮಸ್ಯೆಗಳು ಹಿಮಾಲಯದಂತಿವೆ. ಈ ಹಿಮಾಲಯವನ್ನು ಎದುರು ಹಾಕಿಕೊಂಡು ನಾನು ನನ್ನ ತಲೆ ಒಡೆದುಕೊಂಡರೂ ಚಿಂತೆಯಿಲ್ಲ, ಹಿಮಾಲಯ ಅಲುಗಾಡದಿದ್ದರೂ ನನ್ನ ಒಡೆದ ತಲೆ ನೋಡಿ ಏಳು ಕೋಟಿ ದಲಿತರು ಆ ಹಿಮಾಲಯವನ್ನು ನೆಲಸಮ ಮಾಡಿಯಾರು ಮತ್ತು ತಮ್ಮ ಪ್ರಾಣವನ್ನೂ ಅರ್ಿಸಿಯಾರು ಎಂದು ಗಟ್ಟಿಯಾಗಿ ನಂಬಿಕೊಂಡಿದ್ದರು ಮತ್ತು ಬದುಕಿನುದ್ದ ಹೋರಾಡಿದರು ಎಂದು ಹಿಮ್ಮಡಿ ಹೇಳಿದರು
ರವಿ ಕಾಂಬಳೆ, ಸನ್ನಿ ಬಾನ್ಸ್ , ಸಂತೋಷ್ ಪಾಟೀಲ್, ಬಸವರಾಜ ಕೋಲ್ಕಾರ್, ಶುಭಂ ಮದಾಳೆ ಇತರರು ಉಪಸ್ಥಿತರಿದ್ದರು. ಪ್ರಕಾಶ ಬೊಮ್ಮನ್ನವರ ಸ್ವಾಗತಿಸಿದರು. ಅಂಕುಶ್ ಪಾಟೀಲ್ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 