ಜ್ಞಾನದ ಹಸಿವು ಮುಖ್ಯ , ವಿದ್ಯಾರ್ಥಿಗಳಲ್ಲಿ ಓದುವ ಹಂಬಲ ಇರಬೇಕು: ಉಪ್ಪಿನ ಗಣಪತಿ
Ambedkar Jayanti celebration at Kumta First Grade College:
ಕುಮಟಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ:
ಕಾರವಾರ(ಕುಮಟಾ) 15: ಅಂಬೇಡ್ಕರ್ ಅವರಂತೆ ಜ್ಞಾನದ ಹಸಿವು ಮುಖ್ಯ . ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಓದುವ ಹಂಬಲ ಇರಬೇಕು ಎಂದು ಕುಮಟಾಕಸಾಪ ಮಾಜಿ ಅಧ್ಯಕ್ಷ ಶ್ರೀಧರ ಉಪ್ಪಿನ ಗಣಪತಿ ಅಭಿಪ್ರಾಯಪಟ್ಟರು.
ಕುಮಟಾದ ಸರ್ಕಾರಿ ಕುಮಟಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬರ ಭಾವಚಿತ್ರಕ್ಕೆ ನಮಿಸಿ, ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣ ದಿಂದ ಜೀವನದಲ್ಲಿ ಮಹತ್ವದ ಸಾಧನೆ ಮಾಡಿ, ಸಂವಿಧಾನ ರಚಿಸಿದರು ಎಂದರು. ಕುಮಟಾ ಪದವಿ ಕಾಲೇಜಿನ ಪ್ರಾಚಾರ್ಯೆ ವಿಜಯಾ ಡಿ.ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಮನುಷ್ಯನಲ್ಲಿ ದಡ್ಡತನ ಇದ್ದರೂ ಪರವಾಗಿಲ್ಲ, ಆದರೆ ಸಣ್ಣತನ ಇರಬಾರದು. ಮನುಷ್ಯ ತನ್ನ ಗೌರವ ಕಳೆದು ಕೊಳ್ಳುವುದು ಸಣ್ಣತನದಿಂದ ಎಂದರು. ಮಂದಿರದಲ್ಲಿ ಕುಳಿತ ದೇವರು ತನ್ನ ದೀಪವನ್ನು ತಾನೇ ಹಚ್ಚಿಕೊಳ್ಳಲಿಲ್ಲ ಎಂದ ಮೇಲೆ ನಮ್ಮ ಬಾಳಲ್ಲಿ ಹೇಗೆ ಬೆಳಕು ನೀಡಬಲ್ಲ ಎಂಬ ವೈಚಾರಿಕತೆಯನ್ನು ಯುವಜನರ ಮುಂದಿಟ್ಟರು. ನಿಮಗೆ ಪ್ರವೇಶ ನೀಡದ ದೇವಸ್ಥಾನಗಳಿಗೆ ಹೋಗಿ ಗುಲಾಮರಾಗುವ ಬದಲು , ಗ್ರಂಥಾಲಯಗಳಿಗೆ ಹೋಗಿ ವಿದ್ವಾಂಸರಾಗಿ ಎಂದು ಅಂಬೇಡ್ಕರ್ ಹೇಳುತ್ತಿದ್ದರು. ಸ್ವಾತಂತ್ರ್ಯ ,ಸಮಾನತೆ ಮತ್ತು ಭಾತೃತ್ವವನ್ನು ಬೋಧಿಸುವ ಧರ್ಮವನ್ನು ನಾನು ಇಷ್ಟಪಡುತ್ತೇನೆ ಎಂಬ ಅಂಬೇಡ್ಕರ್ ಮಾತನ್ನು ನೆನಪಿಟ್ಟುಕೊಳ್ಳೊಣ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಶಿವಾನಂದ ಗೌಡ, ವಿದ್ಯಾರ್ಥಿ ಕಾರ್ಯದರ್ಶಿ ಜ್ಞಾನೇಶ್ ಇದ್ದರು. ಕಾಲೇಜಿನ ಉಪನ್ಯಾಸಕರಾದ ಸಂದೇಶ್ ಎಚ್., ಶಿಲ್ಪಾ ಬಿ.ಎಂ. , ಉಷಾ ರಾಣಿ , ಶ್ಯಾಮಲಾ,ಶಾಂತಿ, ಡಿ.ಎಂ.ನಾಯ್ಕ, ಪವನ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 