ಜಮಖಂಡಿ 15: ನಗರದ ಜೋಳದ ಬಜಾರದಲ್ಲಿ ದಲಿತ ಸೇನೆ ಕರ್ನಾಟಕ ಸಂಘಟನೆಯ ಸಹಯೋಗದಲ್ಲಿ ಡಾ,ಬಿ,ಆರ್, ಅಂಬೇಡ್ಕರ ಅವರ 134ನೇ ಜಯಂತಿಯೋತ್ಸವವನ್ನು ಅದ್ದೂರಿಯಾಗಿ ಆಚರಣೆಯನ್ನು ಮಾಡುವ ಮೂಲಕ ಭಾವಚಿತ್ರಕ್ಕೆ ಪುಷ್ಪಗಳಿಂದ ಪೂಜೆಯನ್ನು ಸಲಿಸಿ, ಮೇನಬತ್ತಿಯಿಂದ ದೀಪ ಬೆಳಗಿಸಿ. ಗೌರವ ನಮನವನ್ನು ಸಲಿಸಿದರು.
ರುದ್ರಾವಧೂತ ಮಠದ ಪೀಠಾಧಿಕಾರಿ ಕೃಷ್ಣಾನಂದ ಅವಧೂತರು, ನಗರಸಭೆ ಸದಸ್ಯ ಸಿದ್ದು ಮೀಶಿ, ದಾನೇಶ ಘಾಟಗೆ, ಶಶಿಕಾಂತ ತೇರದಾಳ, ರವಿ ದೊಡಮನಿ, ರವಿ ಶಿಂಗೆ, ಮಾಧೇವ ಕಡಕೋಳ, ಗುರುನಾಥ ತೇರದಾಳ, ಸಂಘಟನೆಯ ಜಿಲ್ಲಾಧ್ಯಕ್ಷ ಭೀಮು ಮೀಶಿ ತಾ, ಅಧ್ಯಕ್ಷ ನಿಂಗು ಮೇಳೆನ್ನವರ, ಸುರೇಶ ನಡಗೇರಿ, ಸಚೀನ ಮೀಶಿ, ನವೀನ ಭೂವಿ, ಅಸ್ಲಂ ಮುಧೋಳೆ, ಬಸವರಾಜ ಕಾಂಬಳೆ ಸೇರಿದಂತೆ ಅನೇಕರು ಇದ್ದರು.