ರಿಯಾದ್, ಡಿ 8 : ಅಮೆರಿಕ ಮತ್ತು ಸುಡಾನ್ ರಾಯಭಾರಿಗಳನ್ನು ಹಂಚಿಕೊಳ್ಳಲು ನಿರ್ಧರಿಸಿದ್ದು ಎರಡು ದಶಕಗಳ ನಂತರ ರಾಜತಾಂತ್ರಿಕ ಸಂಬಂಧ ಉತ್ತಮಗೊಂಡಿದೆ ಎಂದು ಸೌದಿ ಅರೆಬಿಯಾ ಸಂತಸ ವ್ಯಕ್ತಪಡಿಸಿದೆ. ಪ್ರಸ್ತುತ ಸುಡಾನ್ ಸ್ಥಿತಿಗತಿಗಳು ನಿರ್ಣಾಯಕ ಹಂತ ಗಮನದಲ್ಲಿರಿಸಿ ಸುಡಾನ್ ಗೆ ಅಮೆರಿಕ ರಾಯಭಾರಿಯ ನೇಮಕವಾಗಿದೆ ಎಂದು ಸೌದಿ ಅರೆಬಿಯಾ ವಿದೇಶಾಂಗ ಸಚಿವಾಲಯ ತಿಳಿಸಿದೆ. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ರಾಷ್ಟ್ರಗಳ ಪಟ್ಟಿಯಿಂದ ಸುಡಾನ್ ಹೆಸರು ತೆಗೆದು ಹಾಕಲು ಸಹ ಇದು ನಿರ್ಣಾಯಕ ಹೆಜ್ಜೆಯಾಗಿದೆ. ಈ ಮೂಲಕ ದೇಶದ ಮೇಲೆ ವಿಧಿಸಿರುವ ಆರ್ಥಿಕ ನಿರ್ಬಂಧಗಳ ಬಗ್ಗೆ ಮರುಪರಿಶೀಲನೆ ಸಾಧ್ಯವಾಗಲಿದೆ ಎಂದು ಸೌದಿ ಅರೆಬಿಯಾ ಅಭಿಪ್ರಾಯಪಟ್ಟಿದೆ. ಆಫ್ರಿಕಾ ದೇಶದಲ್ಲಿ ಸ್ಥಿರತೆಕಾಯ್ದುಕೊಳ್ಳಲು ಅಮೆರಿಕ ಪಟ್ಟಿ ಮಾಡಿರುವ ಭಯೋತ್ಪಾದಕ ರಾಷ್ಟ್ರಗಳಿಂದ ಸುಡಾನ್ ಅನ್ನು ತೆಗೆದುಹಾಕಲು ಕಾರ್ಯನಿರ್ವಹಿಸುತ್ತಿರುವುದಾಗಿ ಅಕ್ಟೋಬರ್ ನಲ್ಲಿ ಸೌದಿ ಅರೇಬಿಯಾ ಕಳೆದ ಅಕ್ಟೋಬರ್ ನಲ್ಲಿ ತಿಳಿಸಿತ್ತು.