ಬೆಳಗಾವಿ 28: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾ ಘಟಕ ಅಮವಾಸ್ಯೆಯ ಅನುಭಾವಗೋಷ್ಠಿ ಅನುಭಾವ ಸೋಮವಾರ ದಿ.30ರಂದು ಸಾಯಂಕಾಲ 5.30ಗಂಟೆಗೆ ಲಿಂಗಾಯತ ಭವನ, ಶಿವಬಸವನಗರ ಬೆಳಗಾವಿಯಲ್ಲಿ ಜರುಗುವುದು.
ಶ್ರೀಮ.ನಿ.ಪ್ರ.ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು, ಕಾರಂಜಿಮಠ, ಬೆಳಗಾವಿ ಇವರು ಸಾನಿಧ್ಯ ವಹಿಸುವರು. ಶರಣೆ ಮೀನಾಕ್ಷಿ ಸುರೇಶ ಭಾಂಗಿ(ಸೂಡಿ) ಸರಕಾರಿ ಪ್ರೌಢಶಾಲೆಯ ಶಿಕ್ಷಕಿಯರು ಸಾಹಿತಿ ಕಿತ್ತೂರ ಇವರು “ಬಸವಣ್ಣ ಮತ್ತು ಏಸುಕ್ರಿಸ್ತ ತೌಲನಿಕ ಚಿಂತನೆ” ಎಂಬ ವಿಷಯದ ಮೇಲೆ ಅನುಭಾವ ನೀಡಲಿದ್ದಾರೆ. ಜಿಲ್ಲಾ ಅಧ್ಯಕ್ಷರಾದ ಶರಣೆ. ರತ್ನಪ್ರಭಾ ಬೆಲ್ಲದ ಇವರು ಅಧ್ಯಕ್ಷತೆ ವಹಿಸುವರು, ಕಾರಣ ಎಲ್ಲ ಬಸವಾಭಿಮಾನಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿ ಅಮವಾಸ್ಯೆಯ ಅನುಭಾವಗೋಷ್ಠಿ ಕಾರ್ಯಕ್ರಮಕ್ಕೆ ಭಾಗವಹಿಸಬೇಕೆಂದು ಪ್ರಧಾನ ಕಾರ್ಯದರ್ಶಿ ವಿನಂತಿಕೊಂಡಿದ್ದಾರೆ.