ಹಳೆಯ ವಿದ್ಯಾರ್ಥಿಯಿಂದ ಶಾಲೆಗೆ 350 ಸ್ಟೀಲ್ ಬಾಟಲ್ಗಳ ಕೊಡುಗೆ

ಹಳೆಯ ವಿದ್ಯಾರ್ಥಿಯಿಂದ ಶಾಲೆಗೆ 350 ಸ್ಟೀಲ್ ಬಾಟಲ್ಗಳ ಕೊಡುಗೆ  Alumnus donates 350 steel bottles to the school

ಲೋಕದರ್ಶನ ವರದಿ

ಕಂಪ್ಲಿ, ಆ.7: ತಾಲ್ಲೂಕಿನ ದೇವಸಮುದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿ ಹಾಗೂ ಸೊಸೈಟಿ ನಿರ್ದೇಶಕ, ದಾನಿ ಜಿ. ಗಣೇಶಗೌಡ ಅವರು 350 ಸ್ಟೀಲ್ ಬಾಟಲ್ಗಳನ್ನು ಕೊಡುಗೆಯಾಗಿ ನೀಡಿದರು.  ಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಸೇವನೆಗೆ ಅನುಕೂಲವಾಗುವಂತೆ ಬಾಟಲ್ಗಳ ಕೊರತೆ ಇರುವುದನ್ನು ಗಮನಿಸಿ ಈ ಸಹಾಯ ಮಾಡಲಾಗಿದೆ ಎಂದು ಗಣೇಶಗೌಡ ತಿಳಿಸಿದರು.  

ಈ ಶಾಲೆಯಲ್ಲಿ ತಾವು ವಿದ್ಯಾಭ್ಯಾಸ ಮಾಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಸ್ಟೀಲ್ ಬಾಟಲ್ಗಳನ್ನು ವಿತರಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.  

ಈ ಸಂದರ್ಭದಲ್ಲಿ ಮುಖಂಡರಾದ ಅಳ್ಳಳ್ಳಿ ವೀರೇಶ್, ಕಡೇಮನೆ ಪಂಪಾಪತಿ, ಜಿ. ಮಲ್ಲಿಗೌಡ, ಬಸವನಗೌಡ, ಮುಖ್ಯಗುರು ಯೋಗರಾಜ್, ಸಹಶಿಕ್ಷಕರಾದ ಎಸ್‌. ಮಲ್ಲಿಕಾರ್ಜುನ, ಮಲ್ಲಯ್ಯ, ರುದ್ರಯ್ಯಮಠ, ಬಸವನಗೌಡ, ರಾಮಚಂದ್ರ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.