ಹಳೆ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ‌್ಯಕ್ರಮ ಕಲಿಸಿದ ಗುರುಗಳಿಗೆ ಪಾದ ಪೂಜೆ ಮಾಡಿದ ವಿದ್ಯಾರ್ಥಿಗಳು
Alumni reunion and Guru Vandana program organized by alumni Students worshipped the feet of their
ಹಳೆ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ‌್ಯಕ್ರಮ
ಕಲಿಸಿದ ಗುರುಗಳಿಗೆ ಪಾದ ಪೂಜೆ ಮಾಡಿದ ವಿದ್ಯಾರ್ಥಿಗಳು
ಬೀಳಗಿ 03: ಹಳೇ ನೆನಪು, ಹಳೇ ಸ್ನೇಹ ಚಿರಕಾಲವು ಸಂತಸ ನೀಡುವ ಸಂಗತಿ, ಇದನ್ನೆಲ್ಲ ನೆನಪಿಸಿಕೊಂಡರೆ ನಮಗೆ ಥಟ್ ಅಂತ ನೆನಪಿಗೆ ಬರುವುದು ಶಾಲೆ, ವಿದ್ಯಾರ್ಥಿ ಜೀವನದ ಬಹುಪಾಲು ಶಾಲೆಯಲ್ಲಿ ಕಳೆದಿರುತ್ತೇವೆ,ಪ್ರತಿಯೊಬ್ಬ ವಿದ್ಯಾರ್ಥಿ/ನಿಗೆ ತಮ್ಮ ಹಳೆಯ ಸ್ನೇಹಿತರನ್ನು ಭೇಟಿ ಆಗಬೇಕು, ಆ ಹಳೆಯ ನೆನಪುಗಳನ್ನು ಮೇಲಕು ಹಾಕುತ್ತ ಕುಳಿತರೆ ಮತ್ತೆ ವಿದ್ಯಾರ್ಥಿ ಜೀವನಕ್ಕೆ ಹೋಗಬೇಕು ಅಂತ ಅನಿಸುತ್ತದೆ, ಈ ಕನಸು ನನಸು ಮಾಡಿಕೊಳ್ಳುವುದರ ಸಲುವಾಗಿ ತಾಲೂಕಿನ ಕೊರ್ತಿ (ಪು.ಕೇ)ದಲ್ಲಿ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ 2005-06 ನೇ ಸಾಲಿನ ಏಳನೇ ತರಗತಿ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಏರಿ್ಡಸಿ, ಸುಮಾರು 19 ವರ್ಷ ನಂತರವೂ ವಿದ್ಯೆ ಕಲಿಸಿದ ಗುರುವಿನ ಮಹತ್ವ ಅರಿತು, ಅವರಿಗೆ ವಂದಿಸುವ ಕಾರ್ಯ ಮಾಡಿ ಹಳೆ ನೆನಪುಗಳನ್ನ ಮೆಲುಕು ಹಾಕಿ ಸಂಭ್ರಮಿಸಿದರು.
ಬೆಳಿಗ್ಗೆ 11 ಗಂಟೆಗೆ ಕಲಿಸಿದ ಗುರುಗಳನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಕರೆ ತರಲಾಯಿತು,ನಂತರ ಶಾಲೆಯ ಮುಖ್ಯ ದ್ವಾರ ದಿಂದ ಗುರುಗಳ ಮೇಲೆ ಹೂ ಮಳೆ ಗೈದು ವೇದಿಕೆಗೆ ಕರೆ ತರಲಾಯಿತು. ಸ,ಹಿ,ಪ್ರಾ, ಶಾಲೆ ಕೊರ್ತಿ ಪು. ಕೇ ದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಸಿಗೆ ನೀರು ಎರೆಯುವುದರ ಮೂಲಕ ಶಾಲೆಯ ಮುಖ್ಯ ಶಿಕ್ಷಕ ಎ ಆರ್ ಭಜಂತ್ರಿ ಉದ್ಘಾಟಿಸಿದರು. ಒಟ್ಟು ಸ್ನೇಹಿತರನ್ನು ಒಂದೇ ವೇದಿಕೆಯ ಮೇಲೆ ತೋರಿಸುವ ಬೃಹತ್ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದೆ.
ತಮಗೆ ಕಲಿಸಿದ ಗುರುಗಳಾದ ವಿಶ್ರಾಂತ ಶಿಕ್ಷಕ ಎಸ್ ಬಿ ಬಡಿಗೇರ,ಸಹ ಶಿಕ್ಷಕ ಎಸ್ ಎಸ್ ಬಡಿಗೇರ,ಪಿಕೆ ಹಡಗಲಿ,ಎಸ್ ಎಚ್ ಲಮಾಣಿ,ಗುರುಮಾತೆ ಆರ್ ಪಿ ಹಿರೇಮಠ,ಎಂ ಎಂ ರೋಣದ ಇವರಿಗೆ ಪದಾ ಪೂಜೆ ಮಾಡಿ ಗೌರವ ಸಲ್ಲಿಸಿದರು.್ಖಕೋಟ್ ್ಖಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕಾದ್ರೆ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ಶಿಕ್ಷಣ ಪಡೆದು, ಉಜ್ವಲ ಜೀವನ ನಿರ್ಮಿಸಬೇಕಾದರೆ ಗುರುವಿನ ಮಾರ್ಗದರ್ಶನ ಇದ್ದಾಗ ಮಾತ್ರ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ, ಇವತ್ತಿನ ಈ ಸುಂದರ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಗಳನ್ನು ನೋಡಿ ನನಗೂ ಸಂತಸವಾಯಿತು. ಎಸ್ ಎಸ್ ಬಡಿಗೇರ, ಸಹ ಶಿಕ್ಷಕರು ಎಚ್ ಪಿ ಎಸ್ ಕೊರ್ತಿ ಗದ್ದನಕೇರಿ (ಮುರನಾಳ) ಶ್ರೀಮಳೆ ರಾಜೇಂದ್ರ ಮಠದ ಜಗನ್ನಾಥ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಅಧ್ಯಕ್ಷ ಬಸಪ್ಪ ಜರಾಳಿ, ಉಪಾಧ್ಯಕ್ಷೇ ವಿಜಯಲಕ್ಷ್ಮಿ ವಿ ದೇಸಾಯಿ, ರೇವಣಪ್ಪ ಅಂಬಿಗೇರ, ಹಣಮಂತ ಮಳಗಾವಿ, ಚಿನ್ನಪ್ಪ ವಾಗಾತಿ, ಕಲ್ಲವ್ವ ದಳವಾಯಿ ಸೇರಿ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 