ಮಕ್ಕಳ ಜ್ಞಾರ್ನಾಜನೆ ಜೊತೆಗೆ ಕಲಿಕಾ ಮಟ್ಟವೂ ವೃದ್ಧಿಗೊಳ್ಳಲಿದೆ..ಎ.ತಾಂಡವ ಕೃಷ್ಣ

ಮಕ್ಕಳ ಜ್ಞಾರ್ನಾಜನೆ ಜೊತೆಗೆ ಕಲಿಕಾ ಮಟ್ಟವೂ ವೃದ್ಧಿಗೊಳ್ಳಲಿದೆ..ಎ.ತಾಂಡವ ಕೃಷ್ಣ Along with the growth of children's knowledge, the level of learning will also increase..A.Tandava K

ಲೋಕದರ್ಶನ ವರದಿ

ಕಂಪ್ಲಿ 13: ತಾಲೂಕಿನ ಎಮ್ಮಿಗನೂರನ ವೆಂಕಯ್ಯ ಮೆಮೋರಿಯಲ್ ಶಾಲೆಯಲ್ಲಿ  ನರ್ಸರಿ ತರಗತಿಯಿಂದ 2ನೇ ತರಗತಿ ವಿದ್ಯಾರ್ಥಿಗಳ ವರ್ಷವೀಡೀ ಕಲಿಕೆಯ ಫಲಕಗಳ ಜ್ಞಾನದ ಪ್ರದರ್ಶನ ಕಾರ್ಯಕ್ರಮ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.ಶಾಲಾ ಮುಖ್ಯಸ್ಥೆ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಕಲಿಕಾ ಹಂತದಲ್ಲಿ ಒಳ್ಳೆಯ ಶಿಕ್ಷಣ ನೀಡಿದರೆ, ಮುಂದಿನ ದಿನದಲ್ಲಿ ಮಕ್ಕಳ ಜ್ಞಾರ್ನಾಜನೆ ಜೊತೆಗೆ ಕಲಿಕಾ ಮಟ್ಟವೂ ವೃದ್ಧಿಗೊಳ್ಳಲಿದೆ. ಮಕ್ಕಳಲ್ಲಿ ಹಲವು ಪ್ರತಿಭೆಗಳು ಅಡಗಿಕೊಂಡಿದ್ದು, ಅವುಗಳನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು, ಪ್ರತಿಯೊಂದು ಮಗುವಿನಲ್ಲೂ ಇದೇ ರೀತಿ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಮಾತೇ ಇದೆಯಲ್ಲ. ಅದನ್ನು ಗುರುತಿಸಿ ಬೆಳೆಸುವ ಕೆಲಸವನ್ನು ಪೋಷಕರು ಅಥವಾ ಶಿಕ್ಷಕರು ಮಾಡಬೇಕಾಗುತ್ತದೆ ಎಂದರು. 

ಶಾಲಾ ಸಂಸ್ಥಾಪಕ ಎ.ತಾಂಡವ ಕೃಷ್ಣ ಮಾತನಾಡಿ, ಮಕ್ಕಳ ಭೌತಿಕ ಮತ್ತು ಮಾನಸಿಕ, ಜ್ಞಾನಾತ್ಮಕ ಮೌಲ್ಯಯುತ ಶಿಕ್ಷಣವನ್ನು ನಾವು ನೀಡುವುದರ ಮೂಲಕ ಮುಂದಿನ ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಕಾರ್ಯಕ್ರಮ ಆಕರ್ಷಣೆಯಾಗಿತ್ತು.ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಎ.ಸುನಿತ, ಮುಖ್ಯಗುರು ಕೆ.ಎಚ್‌.ರಾಮು, ಶಿಕ್ಷಕ ಬರ್ಮಾ, ಪಾಲಕರಾದ ರಾಜಸಾಬ್‌. ಬಿ.ಜಡಿಮೂರ್ತಿ, ವೀರೇಶ್, ಓರ್ವಾಯಿ, ಪಲ್ಲವಿ, ಶಾರದಾ, ನೀಲಮ್ಮ, ಲಕ್ಷ್ಮೀನಾರಾಯಣ, ವಿಜಯಲಕ್ಷ್ಮಿ, ಶಾಂಭವಿ, ಗೀತಾ ಹಾಗೂ ರಾಯವಣಿ,  ಶಿಕ್ಷಕ ವೃಂದದವರು, ಮಕ್ಕಳು ಸೇರಿದಂತೆ ಪೋಷಕರು ಇದ್ದರು.