ಕಲ್ಮಠದ ಅಭಿವೃದ್ಧಿ ಜೊತೆಗೆ ಮೂಲಭೂತ ಸೌಕರ್ಯ ಕಲ್ಪಿಸಿರುವೆ : ಹೆಚ್‌.ಶಿವಶಂಕರಗೌಡ

ಕಲ್ಮಠದ ಅಭಿವೃದ್ಧಿ ಜೊತೆಗೆ ಮೂಲಭೂತ ಸೌಕರ್ಯ ಕಲ್ಪಿಸಿರುವೆ : ಹೆಚ್‌.ಶಿವಶಂಕರಗೌಡ  Along with the development of Kalmath, I have provided basic facilities: H. Shivashankar Gowda

ಲೋಕದರ್ಶನ ವರದಿ

ಕಂಪ್ಲಿ 18:  ಕಲ್ಮಠದಲ್ಲಿ ಮಳಿಗೆ, ಕೊಠಡಿ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಲಾಗಿದೆ. ಇಲ್ಲಿನ ಕಲ್ಮಠದ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡಲಾಗಿದೆ ಎಂದು ಶ್ರೀಕ್ಷೇತ್ರ ಕಲ್ಮಠ(ವಿರಕ್ತಮಠ) ಟ್ರಸ್ಟ್‌ ಕಾರ್ಯಾಧ್ಯಕ್ಷ ಹೆಚ್‌.ಶಿವಶಂಕರಗೌಡ ತಿಳಿಸಿದರು. 

ಪಟ್ಟಣದ ಹೊಸ ಬಸ್ ನಿಲ್ದಾಣ ಬಳಿಯ ಕಲ್ಮಠದಲ್ಲಿ ಭಾನುವಾರ ನಡೆದ ಮಹಾಜನ ಸಭೆಯಲ್ಲಿ ಮಾತನಾಡಿ, ಏಂಟು ಮಳಿಗೆ ಅಭಿವೃದ್ಧಿ ಜೊತೆಗೆ ಶಾಲಾ ಕೊಠಡಿ ದುರಸ್ಥಿ ಕಾರ್ಯ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಕಲ್ಮಠದ ಜಮೀನು, ಮಳಿಗೆಯಿಂದ ಬಂದಂತಹ ಆದಾಯದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಇಲ್ಲಿನ ಮಹಾಜನ ಸಭೆಯಲ್ಲಿ ಅಭಿವೃದ್ಧಿ ವಿಚಾರವಾಗಿ ಚರ್ಚಿಸಲಾಯಿತು. ಹೊಸ ಬಸ್ ನಿಲ್ದಾಣ ಸ್ಥಾಪನೆಗೆ ಕಲ್ಮಠದ ಜಾಗವನ್ನು ದಾನವಾಗಿ ನೀಡಲಾಗಿತ್ತು. ಮತ್ತು ಸುತ್ತಮುತ್ತಲು ಕಲ್ಮಠದ ಜಾಗವಾಗಿರುವುದರಿಂದ ಮುಂದಿನ ದಿನದಲ್ಲಿ ಹೊಸ ಬಸ್ ನಿಲ್ದಾಣದ ನಾಲ್ಕು ದಿಕ್ಕಿನ ರಸ್ತೆಯ ಮಧ್ಯಭಾಗದಲ್ಲಿ ಬಸವೇಶ್ವರ ವೃತ್ತ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು. 

ನಂತರ ಸಭೆಯ ದಿವ್ಯ ಸಾನಿಧ್ಯವಹಿಸಿ ಟ್ರಸ್ಟ್‌ ಅಧ್ಯಕ್ಷ ಅಭಿನವ ಪ್ರಭುಸ್ವಾಮಿ ಮಾತನಾಡಿ, ಮಠ, ಶಿಕ್ಷಣ ಸಂಸ್ಥೆ, ದಾಸೋಹ ಸೇರಿದಂತೆ ನಾನಾ ಅಭಿವೃದ್ಧಿ ಭಾಗವಾಗಿ ಮಹಾಜನ ಸಭೆ ಮಾಡಲಾಯಿತು. ಮೂಲಭೂತ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಲ್ಲಿನ ಮಹಾಜನ ಸಭೆಯಲ್ಲಿ ಲೆಕ್ಕ ಪತ್ರದ ವ್ಯತ್ಯಾಸದ ಸಭೆಯನ್ನು ಅಪೂರ್ಣಗೊಳಿಸಲಾಗಿದೆ. ಮುಂದಿನ ದಿನದಲ್ಲಿ ಮಹಾಜನ ಸಭೆ ನಡೆಸಿ, ಸಂಪೂರ್ಣ ಲೆಕ್ಕ ಪತ್ರ ಮಂಡನೆಯಾಗಲಿದೆ ಎಂದರು.  

ಈ ಸಂದರ್ಭದಲ್ಲಿ ಮುಖಂಡರಾದ ದೇವಸಮುದ್ರ ಜಿ.ಲಿಂಗನಗೌಡ, ಹೊಸಕೋಟೆ ಜಗದೀಶ, ಗುತ್ತಿಗೆನೂರು ಕೊಟ್ರೇಶಗೌಡ, ವೀರಭದ್ರಯ್ಯಸ್ವಾಮಿ, ಚಂದ್ರಯ್ಯಗೌಡ, ಸಿದ್ದಲಿಂಗಪ್ಪ, ಶಿವಜಾತ, ದೊಡ್ಡಬಸಪ್ಪ, ವಿದ್ಯಾಶಂಕರ, ಬಳೇ ಮಲ್ಲಿಕಾರ್ಜುನ, ಅಳ್ಳಳ್ಳಿ ನಾಗರಾಜ ಸೇರಿದಂತೆ ಅನೇಕರಿದ್ದರು.