ದೈಹಿಕ-ಮಾನಸಿಕ ಸ್ವಾಸ್ಥ್ಯದೊಂದಿಗೆ ಆರ್ಥಿಕ ಸ್ವಾಸ್ಥ್ಯವೂ ಅತಿಮುಖ್ಯ

ದೈಹಿಕ-ಮಾನಸಿಕ ಸ್ವಾಸ್ಥ್ಯದೊಂದಿಗೆ ಆರ್ಥಿಕ ಸ್ವಾಸ್ಥ್ಯವೂ ಅತಿಮುಖ್ಯ Along with physical and mental health, financial health is also very important

ದೈಹಿಕ-ಮಾನಸಿಕ ಸ್ವಾಸ್ಥ್ಯದೊಂದಿಗೆ ಆರ್ಥಿಕ ಸ್ವಾಸ್ಥ್ಯವೂ ಅತಿಮುಖ್ಯ 

ಹುಲಕೋಟಿ 17 :ವ್ಯವಸ್ಥಿತ ಆರ್ಥಿಕ ನಿರ್ವಹಣೆ, ಉಳಿತಾಯ ಮತ್ತು ಹೂಡಿಕೆಗಳ ಮೂಲಕ ಆರ್ಥಿಕ ದಾರ್ಢ್ಯವನ್ನು ಹೊಂದಬಹುದು ಹಾಗೂ ದೈಹಿಕ, ಮಾನಸಿಕ ಸ್ವಾಸ್ಥ್ಯದೊಂದಿಗೆ ಆರ್ಥಿಕ ಸ್ವಾಸ್ಥ್ಯವೂ ಅತಿಮುಖ್ಯವೆಂದು ಸೆಬಿ ಪ್ರಮಾಣಿತ ತರಬೇತುದಾರ ಮತ್ತು ಸಂವಹನತಜ್ಞ ಪ್ರಶಾಂತ ಮೊಟಗಿ ಹೇಳಿದರು. ಅವರು ಹುಲಕೋಟಿಯ ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ, ಆಂತರಿಕ ಗುಣಮಟ್ಟ ಭರವಶೆ ಕೋಶ ಮತ್ತು ಉದ್ಯೋಗ ಮಾಹಿತಿ ಕೋಶ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಆರ್ಥಿಕ ಸ್ವಾಸ್ಥ್ಯ ಮತ್ತು ಆನ್ಲೈನ್ ವಂಚನೆಗಳು’ ಜಾಗೃತಿ ಕಾರ್ಯಕ್ರಮ’ದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತ ಷೇರು ಮಾರುಕಟ್ಟೆಯ ವೈಶಿಷ್ಟ್ಯ, ಸೆಕ್ಯೂರಿಟಿಗಳು, ಆಧುನಿಕ ಯುಗದ ನವೀನ ಆನ್ಲೈನ್ ವಂಚನೆಗಳು, ಸೈಬರ್ ಅಪರಾಧಗಳ ಹಲವು ಆಯಾಮಗಳು ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಉಪಯುಕ್ತ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುಧಾ ಕೌಜಗೇರಿ ಅವರು ತಾಂತ್ರಿಕ ವಿಷಯಗಳೊಂದಿಗೆ ಮೌಲ್ಯಾಧಾರಿತ ಜೀವನದ ಕುರಿತು ತಿಳಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಶ್ಲಾಘಿಸುತ್ತ ಮಾರುಕಟ್ಟೆ ಮತ್ತು ಹೂಡಿಕೆಯ ಮಾರ್ಗಗಳ ಕುರಿತು ಜಾಗೃತಿ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. 

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಪ್ರೊ. ಲಕ್ಷ್ಮಣ ಮುಳಗುಂದ ಪ್ರಾಸ್ತಾವಿಕವಾಗಿ ಮಾತನಾಡುತ್ತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ, ಆರ್ಥಿಕತೆಗಳ ಕುರಿತು ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳು ಅರಿವು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು. ಇತಿಹಾಸ ಪ್ರಾಧ್ಯಾಪಕ ಮತ್ತು ಎನ್‌.ಎಸ್‌.ಎಸ್‌. ಘಟಕದ ಸಂಯೋಜಕ ಪ್ರೊ. ಅಪ್ಪಣ್ಣ ಹಂಜೆ, ಐಕ್ಯೂಎಸಿ ಸಂಚಾಲಕ ಡಾ. ಜಿತೇಂದ್ರ ಜಹಾಗೀರದಾರ, ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಎಸ್‌.ಕೆ. ಆಲೂರ, ಎಸ್‌.ಬಿ. ಚಿಕ್ಕೇನಕೊಪ್ಪ, ಚಂದ್ರ​‍್ಪ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉದ್ಯೋಗ ಮಾಹಿತಿ ಕೋಶದ ಸಂಚಾಲಕ ಡಾ. ಶ್ರೀಶವಿಠ್ಠಲ ಸ್ವಾಗತಿಸಿ ವಂದಿಸಿದರು.