ಪಂಚಾಂಗ ಶ್ರವಣ ಕಾರ್ಯಕ್ರಮ
Almanac listening program
ಲೋಕದರ್ಶನ ವರದಿ
ಬಳ್ಳಾರಿ 24: ಶ್ರೀ ಶಬರಿ ಅಯ್ಯಪ್ಪ ಟ್ರಸ್ಟ್ (ರಿ), ಬಳ್ಳಾರಿ ಕಲ್ಚರಲ್ ಆಕ್ಟಿವೀಟೀಸ್ ಅಸೋಸಿಯೇಷನ್ (ರಿ) ಬಳ್ಳಾರಿ, ಮತ್ತು ಇವರ ಸಂಯುಕ್ತ ಆಶ್ರಯದಲ್ಲಿ “ಪಂಚಾಂಗ ಶ್ರವಣ” ಕಾರ್ಯಕ್ರಮವನ್ನು ದಿ. 19 ಗುರುವಾರ ಬೆಳಿಗ್ಗೆ 10-00 ಗಂಟೆಗೆ ಶ್ರೀ ಶಬರಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಶ್ರೀ ಶ್ರೀ ಕಲ್ಯಾಣ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಶ್ರೀ ಜಯಪ್ರಕಾಶ ಜೆ ಗುಪ್ತ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶೀಲಾಬ್ರಹ್ಮಯ್ಯ ಗೌರವಧ್ಯಕ್ಷರು ಬಳ್ಳಾರಿ ಕಲ್ಚರಲ್ ಆಕ್ಟಿವೀಟೀಸ್ ಅಸೋಸಿಯೇಷನ್ (ರಿ) ಅಯ್ಯಪ್ಪ ಸ್ವಾಮಿ ದೇವಸ್ಥನದ ಅಧ್ಯಕ್ಷರಾದ ಜಯಪ್ರಕಾಶ ಜೆ ಗುಪ್ತ. ಹಾಗೂ ಟ್ರಸ್ಟ್ ಕಮಿಟಿಯ ಸದಸ್ಯರು ಇತರ ಗಣ್ಯರು ಭಾಗವಹಿಸಿದ್ದರು.
ದೀಪ ಬೆಳಗುವದರೊಂದಿಗೆ ಕಾರ್ಯಕ್ರಮವನ್ನು ಉದ್ಘಟಿಸಲಾಯಿತು. ಪಂಚಾಂಗ ಶ್ರವಣ ಕಾರ್ಯಕ್ರಮ ಪಂಚಾಂಗ ಕರ್ತ, ಬಳ್ಳಾರಿ ನಿವಾಸಿಗಳಾದ ಜ್ಯೋತಿಷಿಗಳು, ವಾಸ್ತು ತಜ್ಙರಾದ ಜ್ಯೋತಿಷ್ಯ ರತ್ನ, ವಾಸ್ತು ಬ್ರಹ್ಮ ಪಂಡಿತ್ ಮಠಂ ಗುರುಪ್ರಸಾದ್ ರವರು ಪಂಚಾಂಗ ಪಠಣ ಮಾಡಿದರು. ನತಂರ ಶ್ರೀ ಜಯಪ್ರಕಾಶ ಜೆ ಗುಪ್ತ ರವರು ಮಾತನಾಡಿ ಪ್ರಥಮ ಬಾರಿಗೆ ನಮ್ಮ ದೇವಸ್ಥಾನದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಹೊಗುತ್ತೇವೆ ಮತ್ತು ಸಂಕ್ಷಿಪ್ತವಾಗಿ ಶ್ರೀ ವೈಧೀಶ್ವರ ಕೊವೇಲ್ ನಾಡಿ ಶಾಸ್ತ್ರ ವಿಚಾರವನ್ನು ನುಡಿದರು. ಪಂಚಾಂಗ ಎನ್ನುವುದು ವೈಜ್ಞಾನಿಕ ಸತ್ಯವಾಗಿದೆ. ಹಾಗೂ ಮುಂದಿನ ಭವಿಷ್ಯವನ್ನು ಹೇಳುವ ಜ್ಞಾನವಾಗಿದೆ ಇದು ನಮ್ಮ ಪೂರ್ವಿಕರ ಸಾಧನೆಯಾಗಿದೆ ನಿಖರವಾಗಿ ಮುಂದಿನದನ್ನು ಹೇಳುವ ಶಕ್ತಿ ನಮ್ಮ ಪಂಚಾಂಗಕ್ಕೆ ಇದೆ ಎಂದು ತಿಳಿಸಿದರು.
ಶ್ರೀ ಕಲ್ಯಾಣ ಶ್ರೀಗಳು ತಮ್ಮ ಅರ್ಶೀವಚದಲ್ಲಿ ನಮ್ಮ ಧರ್ಮವು ಸರ್ವರಿಗೂ ಒಳಿತನ್ನು ಬಯಸುವ ಧರ್ಮವಾಗಿದೆ ಒಳ್ಳೆಯ ಸಮಯ ಒಳ್ಳೆಯ ಕಾಲ ಒಳ್ಳೆಯ ದಿನಗಳ ಬಗ್ಗೆ ನಿಖರವಾದ ಅಧ್ಯಾಯನ ಮಾಡಲು ನಮ್ಮ ಪಂಚಾಂಗ ದಾರೀದೀಪವಾಗಿದೆ. ಪೂರತನ ಕಾಲದಿಂದಲು ನಮ್ಮವರು ಈ ವಿಷಯದಲ್ಲಿ ಸಾಧನೆ ಮಾಡುತ್ತ ಬಂದಿದ್ದಾರೆ ಅವರು ಹಾಕಿಕೊಟ್ಟ ಅದ್ಯಾತ್ಮಿಕ ಹಾದಿಯು ನಮ್ಮ ನೆಮ್ಮದಿಯ ಜೀವನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು ಗೌರವಧ್ಯಕ್ಷರಾದ ಶೀಲಾಬ್ರಹ್ಮಯ್ಯ ರವರು ವೇದಿಕೆ ಮೇಲೆ ಇರುವಂತಹ ಗಣ್ಯರನ್ನು ಸ್ವಾಗತ ಮಾಡುತ್ತ ಬಳ್ಳಾರಿ ಕಲ್ಚರಲ್ ಆಕ್ಟಿವೀಟೀಸ್ ಅಸೋಸಿಯೇಷನ್ (ರಿ) ಸಂಕ್ಷಿಪ್ತವಾಗಿ ವರದಿಯ ನುಡಿಗಳನ್ನು ಹಾಗೂ ಮಾತನಾಡಿ ಜನಸೇವೆಯೇ ಜನಾರ್ಧನ ಸೇವೆ ಎಂದು ನಮ್ಮ ಸಂಘವು ನಿರಂತವಾಗಿ ಸಮಾಜಮುಖ ಕಾರ್ಯಕ್ರಮವನ್ನು ಹಮ್ಮಿಕೊಳ್ಳತ್ತಾ ಬಂದಿದ್ದೆವೆ ಎಂದು ತಿಳಿಸಿದರು.
ಕೆ.ಬಿ. ಸಂಜೀವ್ ಪ್ರಸಾದ್ ನಿರೂಪಣೆಯಲ್ಲಿ ಸಂಘವು ನಡೆಸುತ್ತಿರುವ ಕಾರ್ಯಕ್ರಮಗಳಿಗೆ ನಮ್ಮ ಟ್ರಸ್ಟ್ ವತಿಯಿಂದ ಸದಾ ಸಹಾಕರಿಸುತ್ತೇವೆ ಎಂದು ತಿಳಿಸಿದರು. ದೇವಸ್ಥಾನದ ವತಿಯಿಂದ ಬೇವಿನೊಂದಿಗೆ ಮಹಾಪ್ರಸದದ ವಿತರಣೆಯನ್ನು ಮಾಡಲಾಯಿತು. ಬಂದ ಭಕ್ತ್ತಾದಿಗಳು ಭಕ್ತಿವೈಭವದಿಂದ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು. ಜಯಪ್ರಕಾಶ ಜೆ ಗುಪ್ತ ರವರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಖಜಾಂಚಿಗಳಾದ ಡಾ. ಎಂ.ಟಿ.ಮಲ್ಲೇಶ್ ವಂದನಾರೆ್ಣಯೊಂದಿಗೆ ಕಾರ್ಯಕ್ರಮ ಮುಕ್ತಯವಾಗಿತು. ಕಾರ್ಯಕ್ರಮದ ನಿರೂಪಣೆಯನ್ನು ಕೆ.ಬಿ. ಸಂಜೀವ್ ಪ್ರಸಾದ್ ನಡೆಸಿಕೊಟ್ಟರು.
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು 