ಲಕ್ಷ್ಮೇಶ್ವರದಲ್ಲಿ ಪಡಿತರ ಅಕ್ಕಿ ಅಕ್ರಮ ಖರೀದಿ-ಮಾರಾಟ ಆರೋಪ

ಲಕ್ಷ್ಮೇಶ್ವರದಲ್ಲಿ ಪಡಿತರ ಅಕ್ಕಿ ಅಕ್ರಮ ಖರೀದಿ-ಮಾರಾಟ ಆರೋಪ Allegations of illegal buying and selling of ration rice in Lakshmeshwar

ಲೋಕದರ್ಶನ ವರದಿ 

  ಲಕ್ಷ್ಮೇಶ್ವರ"  25: ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮತ್ತು ಲಕ್ಷ್ಮೇಶ್ವರ ಪಟ್ಟಣದಲ್ಲಿ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂದೆ ಕೋರರ ಹಾವಳಿ ಹೆಚ್ಚಾಗಿದ್ದು ಇವರಿಗೆ ಯಾವ ಅಧಿಕಾರಿಗಳ ಭಯವೇ ಇಲ್ಲ ಪ್ರತಿ ತಿಂಗಳು ಪಡಿತರ ಅಂಗಡಿಯಲ್ಲಿ ಬಡವರಿಗೆ ಅಕ್ಕಿ ವಿತರಿಸಿದ ಕೂಡಲೇ ಅಕ್ಕಿ ದಂಧೆ ಕೋರರು ಪಡಿತರ ಅಂಗಡಿಯ ಮುಂಭಾಗದಲ್ಲಿ ನಿಂತು ಅಕ್ಕಿ ಕೊಡುತ್ತೀರಾ ನಾವು ಖರೀದಿಸುತ್ತೇವೆ ಎಂದು 15 -16-ರೂ ಕೆಜಿ ಯತೆ ಕಡಿಮೆ ಬೆಲೆಗೆ ಖರೀದಿಸಿ ಬೇರೆ ಬೇರೆ ರಾಜ್ಯಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇವರಿಗೆ ಯಾವ ಅಧಿಕಾರಿಗಳ ಭಯವೂ ಇಲ್ಲ ಇದನ್ನು ತಡೆಗಟ್ಟಲು ಹೋದರೆ ನಾವು ಅಧಿಕಾರಿಗಳಿಗೆ ಮಂತಲಿ ಕೊಡುತ್ತೇವೆ ನನಗೆ ಯಾರ ಭಯವೂ ಇಲ್ಲ ಎಂದು ರಾಜಾ ರೋಷವಾಗಿ ಬಡವರ ಹೊಟ್ಟೆ ಸೇರಬೇಕಾದ ಪಡಿತರ ಅಕ್ಕಿಯನ್ನು ಖರೀದಿಸಿ ಮಾರಾಟ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

ಇಲ್ಲದಿದ್ದರೆ ನಮಗೆ ಜಯ ಕರ್ನಾಟಕ ಸಂಘಟನೆಯಿಂದ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷ ಇಸ್ಮಾಯಿಲ್ ಆಡೂರು ಅವರು ನೇತೃತ್ವದಲ್ಲಿ ಉಪ ತಹಸೀಲ್ದಾರ್ ಮಂಜುನಾಥ್ ಅಮಾಸಿ ಅವರಿಗೆ ಮನವಿಯನ್ನು ಸಲ್ಲಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಮನವಿ ಸ್ವೀಕರಿಸಿದ ಉಪ ತಹಸಿಲ್ದಾರ್ ಮಂಜುನಾಥ್ ಅಮಾಸಿ ಅವರು ಮಾತನಾಡಿ ನಿಮ್ಮ ಮನವಿಯನ್ನು ಸಂಬಂಧಿಸಿದ ಮೇಲಿನ ಅಧಿಕಾರಿಗಳಿಗೆ ತಲುಪಿಸಿ ಪಡಿತರ ಅಕ್ಕಿ ದಂದೆ ಕೋರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಈ ಸಮಯದಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ಇಸಾಕ್ ಭಾಷಾ ಹರಪನಹಳ್ಳಿ ರಮೇಶ್ ಹಂಗನಕಟ್ಟಿ ಬಸವರಾಜ್ ಮೇಲ್ಮುರಿ ಸದಾನಂದ ನಂದೆಣ್ಣವರ ನಜೀರ ಬಾಗಲಕೋಟೆ ಮೈಲು ಮೈನುದ್ದೀನ ಸೇರಿದಂತೆ ಸಂಘಟನೆಯ ಎಲ್ಲಾ ಮುಖಂಡರು ಇದ್ದರು